ಬೆಂಗಳೂರು: ಕಿಚ್ಚ ಸುದೀಪ್ ʻವೀಕೆಂಡ್ ಪಂಚಾಯಿತಿʼಯಲ್ಲಿ (BBK SEASON 10) ಮೈಕಲ್ ಅವರ ಚಳಿ ಬಿಡಿಸಿದ್ದಾರೆ. ಸ್ಪರ್ಧಿಗಳ ಆಲಸ್ಯಕ್ಕೆ ಬಿಸಿ ಮುಟ್ಟಿಸಿ ಮಾತನಾಡಿದ್ದಾರೆ. ಸುದೀಪ್ ಅವರು ಸ್ಪರ್ಧಿಗಳಿಗೆ ಎಷ್ಟು ಗೌರವ ಕೊಟ್ಟು ಮಾತನಾಡುತ್ತಾರೋ ಅಷ್ಟೇ ಕೆಲವೊಮ್ಮೆ ಬೆಂಡೆತ್ತುತ್ತಾರೆ. ಕ್ಯಾಪ್ಟನ್ ಆದ ತನಿಷಾಗೆ ವಿನಯ್ ಹಾಗೂ ಮೈಕಲ್ ಗೌರವ ಕೊಡದೆ, ಮನೆಯಲ್ಲಿ ನಡೆದುಕೊಂಡಿದ್ದರು. ಈ ವಾರವನ್ನು ಸುದೀಪ್ ಮಾತನಾಡುವ ವೇಳೆ ಮೈಕಲ್ ಅವರ ವರ್ತನೆಗೆ ಕೆಂಡವಾದರು.
’ಸಂಗೀತಾ ಅವರ ಒಂದು ದಿನದ ಕ್ಯಾಪ್ಟನ್ಸಿ ಎಷ್ಟು ಜನರಿಗೆ ಅಸಮಾಧಾನ ಇದೆ?’’ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದರು. ಕಾರ್ತಿಕ್, ಡ್ರೋನ್ ಪ್ರತಾಪ್ ಕೈಎತ್ತಿದರು. ‘’ಎಷ್ಟು ಜನರಿಗೆ ಖುಷಿ ಇದೆ’’ ಎಂದು ಸುದೀಪ್ ಕೇಳಿದಾಗ, ವರ್ತೂರು ಸಂತೋಷ್, ತುಕಾಲಿ ಸಂತು ಎತ್ತಿದರು. ಇದನ್ನ ಗಮನಿಸಿ ‘’ನಮ್ರತಾ, ವಿನಯ್, ಮೈಕಲ್, ತನಿಷಾ ಯಾವುದಕ್ಕೂ ಕೈ ಎತ್ತಲಿಲ್ಲ’’ ಎಂದರು ಕಿಚ್ಚ ಸುದೀಪ್ ‘’ನಿಜ ಹೇಳಬೇಕು ಅಂದ್ರೆ ಏನೂ ಡಿಫರೆನ್ಸ್ ಆಗಲ್ಲ’’ ಎಂದು ಮೈಕಲ್ ಕಮೆಂಟ್ ಮಾಡಿದರು. ‘’ವಿವರಿಸಿ’’ ಎಂದು ಸುದೀಪ್ ಕೇಳಿದಾಗ, ‘’ಒಳ್ಳೆಯದೇನೂ ನಡೆದಿಲ್ಲ. ಕೆಟ್ಟದ್ದೇನೂ ನಡೆದಿಲ್ಲ. ಡಿಫರೆನ್ಸ್ ಏನೂ ಆಗಿಲ್ಲ’’ ಎಂದರು ಮೈಕಲ್. ಇದು ಸುದೀಪ್ ಅವರ ಕೋಪಕ್ಕೆ ಕಾರಣವಾಯ್ತು.
ಆಲಸ್ಯದ ವರ್ತನೆ ನನ್ನ ಬಳಿ ಬೇಡ!
ಮೈಕಲ್‌ಗೆ ಸುದೀಪ್ ಮಾತನಾಡಿ ʻʻನಿಮ್ಮ ಬಳಿ ನಾನು ವೋಟಿಂಗ್ಸ್, ರೇಟಿಂಗ್ಸ್ ಬಗ್ಗೆ ಕೇಳ್ತೀನಿ. ಈ ಆಲಸ್ಯದ ಬಾಡಿ ಲ್ಯಾಂಗ್ವೇಜ್ ನನ್ನ ಬಳಿ ಬೇಡ. ನಾನು ಸರಿ ಇಲ್ಲ. ಪ್ರೀತಿಯಿಂದ ಮಾತಾಡಬೇಕಾ, ಮಾತಾಡೋಕೆ ಬರುತ್ತೆ. ನನ್ನ ಪ್ರಶ್ನೆಗಳಿಗೆ ಗೌರವ ಕೊಟ್ಟಿಲ್ಲ. ‘ಬಿಗ್ ಬಾಸ್’ ಬಿಟ್ಟು ನನಗೆ ಹೊರಗೆ ಒಂದು ಜೀವನ ಇದೆ. ಬರೀ ಕನ್ನಡಕ ಹಾಕಿಕೊಂಡು ಇಲ್ಲಿ ನಿಂತುಕೊಂಡು ತುಂಬಾ ಪ್ರೀತಿಯಿಂದ ಮಾಡೋನು ನಾನು ಒಬ್ಬನೇ ಅಲ್ಲ. ನಿಮ್ಮ ಆಲಸ್ಯದ ವರ್ತನೆಯನ್ನು ಅಲ್ಲಿರುವವರ ಹತ್ತಿರ ಇಟ್ಟುಕೊಳ್ಳಿ. ನನ್ನ ಹತ್ತಿರ ಬೇಡ. ಇದನ್ನು ಗೌರವದಿಂದ ಹೇಳ್ತೀನಿ. ನನ್ನ ಇಷ್ಟದ ಶೋ ಇದು. ಹಾಗಂತ ನನ್ನ ವ್ಯಕ್ತಿತ್ವ ಟೆಸ್ಟ್ ಮಾಡಬಾರದು ಅಲ್ಲವೇ? ನಿಮ್ಮನ್ನು ಅಲ್ಲಿ ಕೂರಿಸಿ, ನಾನು ನಿಂತು ಮಾತನಾಡುತ್ತೇನೆ. ಅಲ್ಲಿಂದಲೇ ಮೊದಲ ಗೌರವ ಶುರುವಾಗುವುದುʼʼಎಂದರು.
ಇದನ್ನೂ ಓದಿ: BBK SEASON 10: ರಾಷ್ಟ್ರೀಯ ಟ್ರೆಂಡ್ನಲ್ಲಿ ರಾರಾಜಿಸಿದ ʻಪ್ರತಾಪ್ʼ ಹೆಸರು ; ಟ್ವಿಟರ್‌ನಲ್ಲಿ ಡ್ರೋನ್ ಹವಾ!
ʻʻಕ್ಯಾಪ್ಟನ್‌ಗೆ ಗೌರವ ಬೇಕು. ಒಬ್ಬ ಹೀರೊ ಆಗುವುದಕ್ಕೆ ಅವರು ಮಾಡುವ ಕೆಲಸದಿಂದ ಆಗಬೇಕು ಎಂತಲ್ಲ. ಎದುರುಗಡೆ ವಿಲನ್ ಆದವರು ಮುಂದೆ ನಿಂತವರನ್ನು ಹೀರೊ ಮಾಡ್ತೀರಿ. ಕ್ಯಾಪ್ಟನ್‌ಗೆ ಗೌರವ ಕೊಟ್ಟಿಲ್ಲ. ಕ್ಯಾಪ್ಟನ್ ಹೇಳಿದ್ದನ್ನ ಮಾಡಿಲ್ಲ. ಒಬ್ಬ ವ್ಯಕ್ತಿ ಸರಿಯಿಲ್ಲ ಅನಿಸಿದರೂ, ನಿಮ್ಮ ವರ್ತನೆ ಮೇಲೆ ನೀವೊಬ್ಬರನ್ನ ಹೀರೊ ಮಾಡ್ತೀರಾʼʼಎಂದು ಸ್ಪರ್ಧಿಗಳಿಗೆ ಹೇಳಿದರು ಕಿಚ್ಚ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ