Site icon Vistara News

BBK SEASON 10: ಅವರದ್ದು ಅವ್ರಿಗೆ ತೊಳ್ಕಳಕ್ಕೆ ಬರಲ್ವಾ? ನೀವು ಹೋಗಿ ತೊಳಿಬೇಕಾ? ಕಿಚ್ಚ ಕ್ಲಾಸ್‌!

Sudeep Criticized Snehith Behavior

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಎಂಟನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಸಂಚಿಕೆಯಲ್ಲಿ ಸ್ನೇಹಿತ್‌ ಹಾಗೂ ಡ್ರೋನ್‌ ಪ್ರತಾಪ್‌ ಬಾತ್‌ರೂಮ್‌ ಗಲಾಟೆ ತಾರಕಕೇರಿತ್ತು. ಈ ವಿಚಾರದ ಬಗ್ಗೆ ಈ ವಾರದ ವೀಕೆಂಡ್‌ ಪಂಚಾಯಿತಿಯಲ್ಲಿ ಸುದೀಪ್‌ ಅವರು ಸ್ನೇಹಿತ್‌ಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಸ್ನೇಹಿತ್‌ ಅವರ ಪಿಟಿ(ಚಿಲ್ಲರೆ ಮಾತು) ಎಂಬ ಪದ ಮನೆಯಲ್ಲಿ ಬಳಸಿದ್ದ ಕಾರಣ ಪದೇಪದೆ ಕಿಚ್ಚ ಕ್ಲಾಸ್‌ ತೆಗೆದುಕೊಂಡರು.

ಸ್ನೇಹಿತ್‌ ಬಾತ್‌ರೂಮ್‌ನಲ್ಲಿ ಇದ್ದಾಗ ಡ್ರೋನ್‌ ಪ್ರತಾಪ್‌ ಹೊರಗಡೆ ಕಾಯುತ್ತಿದ್ದರು. ಸ್ವಲ್ಪ ಸಮಯ ಬೇಕು ಎಂದು ಸ್ನೇಹಿತ್‌ , ಬಾತ್‌ರೂಮ್ ಲಾಕ್ ಮಾಡಿಕೊಂಡು ಪ್ರತಾಪ್‌ರನ್ನು ಕಾಯಿಸಿದರು. ಬಾತ್‌ರೂಮ್ ಏರಿಯಾಕ್ಕೆ ಬಂದು ವಿನಯ್ ಗೌಡ ಧ್ವನಿ ಕೇಳುತ್ತಿದ್ದಂತೆ ಸ್ನೇಹಿತ್ ಅವರು ಬಾತ್‌ರೂಮ್ ಲಾಕ್ ಒಪನ್ ಮಾಡಿದರು, ವಿನಯ್ ಒಳಗಡೆ ಹೋದರು. ಪ್ರತಾಪ್‌ಗೆ ಇದು ಸಹಿಸಲು ಆಗಲಿಲ್ಲ. ಇದರ ಬಗ್ಗೆ ಪ್ರತಾಪ್‌ ಅವರು ಸ್ನೇಹಿತ್‌ಗೆ ಚೆನ್ನಾಗಿಯೇ ಜಾಡಿಸಿದ್ದರು.

ಇದೀಗ ಸ್ನೇಹಿತ್​ರನ್ನು ಮಾತ್ರವಲ್ಲದೆ ವಿನಯ್​ರನ್ನು ಈ ವಿಷಯವಾಗಿ ಸುದೀಪ್‌ ಅವರು ಜಾಡಿಸಿದ್ದಾರೆ. ‘ಈ ಬಾತ್​ರೂಂ ಕಾಯುವ ಕೆಲಸ ಯಾವಾಗ ಪ್ರಾರಂಭ ಮಾಡಿಕೊಂಡಿರಿ. ವಿನಯ್​ಗೆ ಅವರದ್ದು ಅವರಿಗೆ ತೊಳೆದುಕೊಳ್ಳಲು ಬರುವುದಿಲ್ವಾ? ನೀವು ಹೋಗಿ ತೊಳೆಯಬೇಕಾ?’ ಎಂದು ಸ್ನೇಹಿತ್‌ಗೆ ಪ್ರಶ್ನೆ ಮಾಡಿದರು. ಅಲ್ಲದೆ ಡ್ರೋನ್​ ಪ್ರತಾಪ್​ಗೆ ಬಾತ್​ರೂಂ ನೀಡದೇ ಇರುವ ಬಗ್ಗೆ ಖುಷಿಯಿಂದ ತಮ್ಮ ತಂಡದ ಮುಂದೆ ಹೇಳಿಕೊಂಡು ನಗಾಡಿದ್ದನ್ನು ಹಾಗೂ ಸ್ನೇಹಿತ್ ಮಾತಿಗೆ ಅವರ ಗೆಳೆಯರ ತಂಡ ಸಹ ಅದೇ ರೀತಿಯ ಪ್ರತಿಕ್ರಿಯೆ ನೀಡಿದ್ದನ್ನು ಸಹ ಸುದೀಪ್ ಟೀಕಿಸಿದರು. ಅಲ್ಲದೆ, ಹಾಗೆ ಮಾಡಿದ್ದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಇದನ್ನೂ ಓದಿ: BBK SEASON 10: ವಿನಯ್‌ ಟೀಂ ಹಾವಳಿ ಹೆಚ್ಚಾಯ್ತು; ಕಳಪೆ ಪಟ್ಟ ವರ್ತೂರ್‌ಗೆ, ಉತ್ತಮರಾದ ತುಕಾಲಿ!

ಎಲ್ಲರೂ ಸಮಾನರೇ ಎಂದಿದ್ದ ಡ್ರೋನ್‌ ಪ್ರತಾಪ್‌

ಈ ಹಿಂದೆ ಡ್ರೋನ್‌ ಪ್ರತಾಪ್‌ ಈ ಬಗ್ಗೆ ಧ್ವನಿ ಎತ್ತಿ ಇಲ್ಲಿ ʻʻಎಲ್ಲರೂ ಸಮಾನರೇ. ನಾವೆಲ್ಲ ಸ್ಪರ್ಧಿಗಳು. ವಿನಯ್ ಅವರ ವಾಯ್ಸ್ ಮುಗಿದ ಕೂಡಲೇ ಶೇವ್ ಮುಗಿದು ಹೋಯ್ತಾ? ನೀವು ಮಾಡಿರೋದು ತಪ್ಪು ಅಂತ ಒಪ್ಪಿಕೊಳ್ತಿದ್ದೀರಾ? ಕೆಲಸ ಮುಗಿದ ಮೇಲೆ ನೀವು ಹೊರಗಡೆ ಬರಬೇಕುʼʼ ಎಂದಿದ್ದಾರೆ. ಸ್ನೇಹಿತ್‌ ಕೂಡ ಈ ಮಾತಿಗೆ ʻʻ”ಶೇವ್ ಮಾಡಿದ್ದೆ, ಲೇಟ್ ಆಯ್ತು, ನೀನು ಏನ್ ಮಾಡ್ಕೋತಿಯಾ? ಬೆಳ್ ಬೆಳಗ್ಗೆ ತಲೆ ತಿನ್ನಬೇಡʼʼ ಎಂದು ತಿರುಗೇಟು ಕೊಟ್ಟಿದ್ದರು.

ಈ ವಿಚಾರ ಸ್ನೇಹಿತ್‌, ವಿನಯ್‌ ಮತ್ತು ಸಂಗೀತಾ ಚರ್ಚೆ ಮಾಡಿದ್ದರು ವಿನಯ್ ಗೌಡ ಅವರು ನಗುತ್ತಲೇ, “ನೀನು ಉದ್ದೇಶಪೂರ್ವಕವಾಗಿಯೇ ಮಾಡಿದ್ದೀಯಾ ಅಂತ ಗೊತ್ತಾಗುತ್ತಿತ್ತು, ಗೊತ್ತಾಗದಿರುವ ರೀತಿ ಮಾಡಬೇಕಿತ್ತು” ಅಂತ ಸ್ನೇಹಿತ್ ತಪ್ಪನ್ನು ಸಪೋರ್ಟ್‌ ಮಾಡಿದ್ದರು. ನಮ್ರತಾ ಕೂಡ ಈ ಬಗ್ಗೆ ಮಾತನಾಡಿ ʻʻಪ್ರತಾಪ್‌ ಇನ್ನು ಫೈನಲ್‌ವರೆಗೂ ಇದೇ ವಿಷಯ ಮಾತಾಡ್ತಾನೆ” ಎಂದು ಹೇಳಿದ್ದರು. ಸಂಗೀತಾ ಅವರು ಕೂಡ ಪ್ರತಾಪ್‌ ವಿಚಾರವಾಗಿ ಈ ವಿಚಾರ ಅವನು ಬಿಡಲ್ಲ ಎನ್ನುವ ರೀತಿ ಮಾತಾಡಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version