ಬೆಂಗಳೂರು; ಬಿಗ್ ಬಾಸ್ ಸೀಸನ್ 10ರ (BBK SEASON 10) ಎಂಟನೇ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಚನ್ನಾಗಿ ಜಾಡಿಸಿದ್ದಾರೆ ಕಿಚ್ಚ ಸುದೀಪ್. ʻʻತಾನು ಚೆನ್ನಾಗಿ ತಂತ್ರ ಮಾಡ್ತೀನಿ, ಟೀಂ ಲೀಡ್ ಮಾಡ್ತೀನಿ” ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಡ್ರೋನ್ ಪ್ರತಾಪ್ ಅವರು ಈ ಬಾರಿ ಕಳಪೆ ಪಟ್ಟ ಪಡೆದರು. ಟೀಂ ಲೀಡರ್ ಎನಿಸಿಕೊಂಡವರು ಸ್ಪರ್ಧಿಗಳ ಮುಂದೆ ತಲೆ ತಗ್ಗಿಸುವಂತೆ ಈ ವಾರ ಆಡಿದರು.
ಈ ವಾರ ಕಾರ್ತಿಕ್ ಅವರನ್ನು ಹೊರಗಿಟ್ಟರು ಪ್ರತಾಪ್. ಮಾತ್ರವಲ್ಲ ಎದುರಾಳಿ ತಂಡದಿಂದ ಕರೆದುಕೊಂಡು ಬಂದಿದ್ದ ನಮ್ರತಾರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟರು.ಹಾಗಾಗಿ ತಂಡ ಹೀನಾಯ ಸೋಲು ಕಂಡಿತು. ಇದರ ಬಗ್ಗೆ ಕಿಚ್ಚ ಸಕತ್ ಕ್ಲಾಸ್ ಕೂಡ ತೆಗೆದುಕೊಂಡರು. ಹಾಗೇ ಸಂಗೀತಾ ಕೂಡ ಈ ಬಗ್ಗೆ ಮಾತನಾಡಿ ʻʻ”ಪ್ರತಾಪ್ ಯಾಕೆ ಈ ನಿರ್ಧಾರ ತಗೊಂಡ ಅಂತ ಅರ್ಥ ಆಗಲ್ಲ. ಪ್ರತಾಪ್ ಯಾರ ಮಾತನ್ನೂ ಕೇಳೋದಿಲ್ಲ. ಅವನು ವೈಯಕ್ತಿಕವಾಗಿ ಆಟ ಆಡಿದ್ದಾನೆ ಎಂದು ಅನಿಸಿತುʼʼಎಂದರು. ಇನ್ನು ಈ ಬಗ್ಗೆ ಕಾರ್ತಿಕ್ ಕೂಡ ʻʻನನ್ನನ್ನು ಯಾಕೆ ಆಟದಿಂದ ಹೊರಗೆ ಇಟ್ಟರು ಎಂದು ಗೊತ್ತಿಲ್ಲ. ಇದರ ಹಿಂದೆ ನಮ್ರತಾ, ವರ್ತೂರು ಸಂತೋಷ್ ಅವರನ್ನು ಆಟದಿಂದ ತೆಗೆದರುʼʼ ಎಂದರು. ಹೀಗೆ ಎಲ್ಲ ಸ್ಪರ್ಧಿಗಳ ವಿವರಣೆ ಕೇಳಿದ ಬಳಿಕ ಸುದೀಪ್ ಮಾತನಾಡಿದರು.
ಗೆಲುವಿನ ಕಡೆಗೆ ತಿರುಗಿಸೋದು ಲೀಡರ್‌ಶಿಪ್
“ಇಲ್ಲಿ ಕ್ಯಾಪ್ಟನ್‌ಶಿಪ್ ಎನ್ನುವ ಕನಸು ಇತ್ತು. ಹಾಗಾಗಿ ಪ್ರಬಲ ಆಗಿರುವ ಮೈಕಲ್ ತಂಡಕ್ಕೆ ಕೆಲವರು ಹೋಗುತ್ತಾರೆ. ಆದರೂ ಕೂಡ ಕೆಲವರು ನಿಮ್ಮ ತಂಡಕ್ಕೆ ಹೋಗುತ್ತಾರೆ. ನೀವು ಎಲ್ಲ ಟಾಸ್ಕ್‌ಗಳನ್ನು ಗೆದ್ದಿದೀರಾ? ಗುಂಪು ಇದೆಯಾ? ಏನೂ ಇಲ್ಲ. ನಿಮ್ಮನ್ನು ನಂಬಿ ಬಂದವರಿಗೆ ಒಂದು ಆಸೆ ಇರುತ್ತದೆ. ಅದೇ ನೀವು ಟಾಸ್ಕ್ ಗೆದ್ದಿದ್ರೆ ನಿಮ್ಮ ತಂತ್ರದ ಬಗ್ಗೆ ಮಾತಾಡುತ್ತಾರೆ. ಗೆಲುವಿನ ಕಡೆಗೆ ತಿರುಗಿಸೋದು ಲೀಡರ್‌ಶಿಪ್ʼʼಎಂದರು.
ಕಳೆದ ಬಾರಿ ನೀವು ಲೀಡರ್ ಆಗಿದ್ದಾಗ ಇಡೀ ತಂಡ ನಿಮಗೆ ಎದುರಾಗಿತ್ತು ಆಗ ನಾನು ನಿಮಗೆ ಕಿಚ್ಚನ ಚಪ್ಪಾಳೆ ನೀಡಿದ್ದೆ, ಆದರೆ ಈ ಬಾರಿ ನೀವು ತಪ್ಪು ಮಾಡಿದ್ದೀರಿ. ಕಾರ್ತಿಕ್ ಅವರಿಗೆ ಗಲಾಟೆ ಮಾಡಬಾರದು ಎಂದು ಮೊದಲೇ ಹೇಳಬೇಕಿತ್ತು. ನೀವು ಯಾಕೆ ಕೇಳಲಿಲ್ಲ? ಟಾಸ್ಕ್‌ನಲ್ಲಿ ಶಾಂತಿ ಕಾಪಾಡಲು ನೀವು ಉಸ್ತುವಾರಿಯಾಗಿದ್ರಾ? ಉಸ್ತುವಾರಿ ಮಾತ್ರ ಜಗಳ ಆಡದಂತೆ ನೋಡಿಕೊಳ್ಳಬೇಕು. ಉಸ್ತುವಾರಿಗೂ, ಲೀಡರ್‌ಶಿಪ್‌ಗೂ ವ್ಯತ್ಯಾಸ ಇದೆ.ತನಿಷಾ ಬದಲು ನಮ್ರತಾ ಆಟ ಆಡಿದಂತೆ, ನೀತು ಮನೆಯಿಂದ ಹೊರಗಡೆ ಹೋದಾಗ ಅವರ ಬದಲು ಮೈಕಲ್ ಜವಾಬ್ದಾರಿ ತಗೊಂಡಿರುವಂತೆ ನೀವು ಲೀಡರ್‌ನ್ನು ಬದಲಾಯಿಸಬಹುದಿತ್ತುʼʼಎಂದರು.
ಇದನ್ನೂ ಓದಿ: BBK SEASON 10: ಕಿಚ್ಚನ ಪಂಚಾಯಿತಿಯಲ್ಲಿ ಚರ್ಚಸಬೇಕಾದ ವಿಷಯಗಳನ್ನು ಪಟ್ಟಿ ಮಾಡಿ ಕೊಟ್ಟ ನೆಟ್ಟಿಗರು!
ನಾನು ತಗೊಂಡ ನಿರ್ಧಾರಗಳು ಸರಿ ಇಲ್ಲ, ತಪ್ಪಾಗಿವೆ. ಅದನ್ನು ನೀವೆಲ್ಲ ದಯವಿಟ್ಟು ಕ್ಷಮಿಸಿ ಎಂದು ಡ್ರೋನ್ ಪ್ರತಾಪ್ ಅವರು ಕ್ಷಮೆ ಕೇಳಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ