Site icon Vistara News

BBK Season 10: ಇಡೀ ವಾರ ಕಂಡಿದ್ದು ನಮ್ರತಾ ಕೈಯಲ್ಲಿ ಇರುವ ಚಮಚ ಮಾತ್ರ; ಕಿಚ್ಚ ಸುದೀಪ್‌!

Namrata Gowda bbk 10

ಬೆಂಗಳೂರು:ಳೆದ ವಾರ ಕಿಚ್ಚನ ವಾರದ (BBK Season 10) ಪಂಚಾಯಿತಿಯಲ್ಲಿ ಪ್ರೇಕ್ಷಕರು ಸ್ಪರ್ಧಿಗಳಿಗೆ ಉಡುಗೊರೆ ಜತೆ ಪತ್ರವನ್ನು ಕಳುಸಹಿಸಿದ್ದರು. ನಮ್ರತಾಗೆ ಪತ್ರದಲ್ಲಿ ʻನಿಮಗೆ ದಾದಾಗಿರಿ ಮಾಡುವುದಕ್ಕೆ ಬರುವುದಿಲ್ಲ. ಚಮಚಾಗಿರಿ ಮಾಡಿಕೊಂಡು ಇರಬೇಡಿ. ನಮ್ರತಾರನ್ನ ನಮ್ಮ ಕಣ್ಣಲ್ಲಿ ಹಾಗೆ ನೋಡೋಕೆ ಆಗ್ತಾಯಿಲ್ಲ’’ ಎಂದು ಬರೆಯಲಾಗಿತ್ತು. ಆಗ ನಮ್ರತಾ ಅವರು ʻನಾನು ಯಾರಿಗೂ ಚಮಚ ಆಗಿಲ್ಲ. ಇರೋದೂ ಇಲ್ಲʼ ಎಂದಿದ್ದರು. ಆದರೀಗ ಕಿಚ್ಚ ನಮ್ರತಾಗೆ ಆ ಚಮಚ ಮಾತ್ರ ಉಳಿದುಕೊಂಡಿದೆ. ಇಡೀ ವಾರ ವೀಕ್ಷಕರಿಗೆ ಕಾಣಿಸಿದ್ದು ಆ ಚಮಚ ಮಾತ್ರ’ ಎಂದರು. ನಮ್ರತಾ ಈ ಮಾತು ಕೇಳುತ್ತಿದ್ದಂತೆ ತಲೆ ಬಗ್ಗಿಸಿದವರೂ ತಲೆ ಎತ್ತಲೇ ಇಲ್ಲ.

ಕಿಚ್‌ ಸುದೀಪ್‌ ಈ ಬಗ್ಗೆ ಮಾತನಾಡಿʻʻಬಳೆಯನ್ನು ಹಾಕಿಕೊಂಡು ಹೆಂಗಸರ ತರ ಆಡಬೇಡ. ಬಳೆಯನ್ನು ಅವನಿಗೆ ತೊಡ್ಸು, ಬಾರೋ ಗಂಡಸೇ ಬಾ..ಹೋಗಲೇ, ಬಾರಲೇ ಸುಮಾರ್‌ ಇತ್ತು. ಹೇಗಿದೆ ನಮ್ರತಾ? ಮೈಕಲ್‌ ಅವರಿಗೆ ನೀವು ಕ್ಲಾಸ್‌ ಕೂಡ ತೆಗೆದುಕೊಂಡ್ರಿ. ಮಹಿಳೆಯರಿಗೆ ಗೌರವ ಕೊಡಿ ಎಂದು. ಆದರೆನೀವು ಕ್ಯಾಪ್ಟನ್ ಆಗಿದ್ದಾಗ ಲೆಕ್ಕಾನೇ ತೆಗೆದುಕೊಂಡಿಲ್ಲ. ಆವಾಗ ನಮ್ರತಾ ಎಲ್ಲಿ ಹೋದ್ರು? ಇಡೀ ವಾರ ನಮಗೆ ಕಾಣಿಸಿರುವುದು ಆ ನಿಮ್ಮ ಕೈಯಲ್ಲಿರುವ ಚಮಚ ಮಾತ್ರʼʼ ಎಂದರು. ಸುದೀಪ್‌ ಹೀಗೆ ಹೇಳುತ್ತಿದ್ದಂತೆ ಮೌನಕ್ಕೆ ಜಾರಿದರು ನಮ್ರತಾ.

ವಿನಯ್‌ ಅವರ ತಂಡದಲ್ಲೇ ಇದ್ದ ನಮ್ರತಾ ಒಂದು ವಾರಗಳಿಂದ ಅವರಿಗೆ ಸಪೋರ್ಟ್‌ ಮಾಡುತ್ತಲೇ ಬಂದರು. ಚಮಚಾಗಿರಿ ಮುಂದುವರಿಸುತ್ತಲೇ ಬಂದರು. ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್ ಕೊಡಲ್ಲ ಎಂದು ನಮ್ರತಾ ಅವರು ಮೈಕೆಲ್​ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ, ವಿನಯ್ ಅವರು ಹೆಣ್ಣುಮಕ್ಕಳಿಗೆ ಪದೇಪದೆ ಅವಮಾನ ಮಾಡಿದರೂ ಈ ವಿಚಾರದಲ್ಲಿ ಮೌನವಾಗಿದ್ದರು. ಇದೆಲ್ಲ ಗಮನಿಸಿ ಕಿಚ್ಚ ಕೊನೆಗೂ ನಮ್ರತಾ ಅವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದಾದ ಬಳಿಕ ವರ್ತೂರ್‌ ಸಂತೂಷ್‌ ಅವರು ನಮ್ರತಾ ಅವರು ಓನ್ ನಿರ್ಧಾರಗಳನ್ನ ಕೈಗೊಳ್ಳುತ್ತಿಲ್ಲ ಎಂದರು. ಬಹುತೇಕ ಬಾರಿ ಅವರ ಮೇಲೆ ಇನ್‌ಫ್ಲುಯೆನ್ಸ್ ಕಾಣಿಸುತ್ತೆ ಎಂದರು ಸಂಗೀತಾ. ಕೆಲವೊಂದು ಬಾರಿ ನಮ್ರತಾ ಅವರು ಮಾತನಾಡಬಹುದಾಗಿತ್ತು. ಆದರೆ, ಮಾತನಾಡಲ್ಲ ಎಂದರು ತನಿಷಾ.

ಇದನ್ನೂ ಓದಿ; BBK Season 10: ಬಳೆ ತಂಟೆಗೆ ಹೋದ್ರೆ…ಮಾತಲ್ಲಿ ನಿಗಾ ಇರಲಿ ವಿನಯ್‌; ವಾರ್ನಿಂಗ್‌ ಕೊಟ್ಟ ಕಿಚ್ಚ!

ಪರ್ಸನಲ್ ಸ್ಟ್ಯಾಂಡ್ ಮುಖ್ಯ

ಬಳಿಕ ಕಿಚ್ಚ ಅವರು ನಮ್ರತಾ ಅವರು ಪರ್ಸನಲ್ ಸ್ಟ್ಯಾಂಡ್ ಬಗ್ಗೆ ಮನವರಿಕೆ ಮಾಡಿದರು. ʻʻನೀವು ಪರ್ಸನಲ್ ಸ್ಟ್ಯಾಂಡ್ ತಗೊಂಡಿದ್ದರೆ.. ಅಲ್ಲಿ ವಿನಯ್, ಕಾರ್ತಿಕ್ ಯಾರೂ ಬರಲ್ಲ. ಅಲ್ಲಿ ಬರೋದು ನಿಮ್ಮ ಪರ್ಸನಲ್ ಸ್ಟ್ಯಾಂಡ್ ಟುವರ್ಡ್ಸ್ ಎ ಸರ್ಟನ್ ಸ್ಟೇಟ್‌ಮೆಂಟ್. ಇದೇ ತಾನೇ ನಿಮಗೆ ಲೆಟರ್‌ನಲ್ಲಿ ಬಂದಿದ್ದು? ಎಂದರು. ಅಷ್ಟೇ ಅಲ್ಲದೇ ನೀವು ಬಿಗ್‌ ಬಾಸ್‌ ಗ್ರೂಪ್‌ ಮಾಡಿದ್ದು ಅಂದ್ರಿ. ಬಿಗ್‌ ಬಾಸ್‌ನಲ್ಲಿ 9 ಸೀಸನ್ ನಡೆದಿದೆ. ಈ ಎಲ್ಲದರಲ್ಲೂ ಗ್ರೂಪ್ಸ್ ಎಂದು ಬಂದೇ ಬರುತ್ತೆ. ಅದಕ್ಕೆ ಟೀಮ್‌ ಎಂದು ಕರೆಯುತ್ತೇವೆ. ಆದರೆ ತಾವು ಗ್ರೂಪ್ ಎಂದು ಅಂದುಕೊಂಡ್ರಿ. ಗ್ರೂಪ್‌ನಲ್ಲಿ ಇದ್ದೀರಾ ಅಂದಮಾತ್ರಕ್ಕೆ ತಾವೆಲ್ಲಾ ಇಂಡಿವಿಷ್ಯುವಲ್‌ ಅಲ್ಲ ಅಂತೇನಿಲ್ಲವಲ್ಲʼʼ ಎಂದು ಎಲ್ಲರನ್ನು ಉದ್ದೇಶಸಿ ಹೇಳಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version