Site icon Vistara News

BBK SEASON 10: ʻರಾಣಿʼ ಪಟ್ಟ ಪಡೆದ ತನಿಷಾ ಜೈಲಿಗೆ; ಉತ್ತಮ ತುಕಾಲಿ ಸಂತೋಷ್‍‍ಗೆ!

Tanisha Kuppanda And Tukali Santosh Became Worst And Best Performer bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಈ ವಾರ ತನಿಷಾ ಕಳಪೆ ಹಾಗೂ ತುಕಾಲಿ ಸಂತೋಷ್ ಅವರು ಉತ್ತಮ ಎನಿಸಿಕೊಂಡಿದ್ದಾರೆ. ತನಿಷಾ ಜೈಲು ಪಾಲಾಗಿ ಕಣ್ಣೀರು ಸುರಿಸಿದರು. ಮಾತ್ರವಲ್ಲ ತುಕಾಲಿ ಸಂತೋಷ್‌ ಕೂಡ ವಿನಯ್‌ ಎದುರಿಗೆ ತೊಡ ತಟ್ಟಿ ನಿಂತಿದ್ದಾರೆ. ಗ್ರೂಪಿಸಮ್‌ನಿಂದ ಹೊರ ಬಂದು ಆಡುತ್ತಿದ್ದಾರೆ. ಟಾಸ್ಕ್​ನಲ್ಲಿ ಅವರು ನೀಡಿದ ಪರ್ಫಾರ್ಮೆನ್ಸ್ ಮೆಚ್ಚುಗೆ ಪಡೆದಿದೆ. ಹೀಗಾಗಿ, ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ರಾಣಿಯಾಗಿದ್ದ ತನಿಷಾ

ಬಿಗ್‌ ಬಾಸ್‌ ಕಳೆದ ಸಂಚಿಕೆಯಲ್ಲಿ ರಾಜ, ರಾಣಿ, ಜೋಕರ್‌, ಎಕ್ಕ ಯಾರು ಹಾಗೂ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ಆದೇಶ ನೀಡಿತ್ತು. ಅದರಂತೆ ಟಾಸ್ಕ್‌ಗಳು ನಡೆದವು. ಮನೆಯ ರಾಣಿಯನ್ನಾಗಿ ತನಿಷಾಗೆ ಸ್ಪರ್ಧಿಗಳು ವೋಟ್‌ ಮಾಡಿದರು. ಅವರು ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು, ಟಾಸ್ಕ್‌ಗಳಲ್ಲಾಗಲಿ ನಿಭಾಯಿಸುವ ರೀತಿಗೆ ಸದಸ್ಯರು ರಾಣಿ ಪಟ್ಟ ಕೊಟ್ಟರು. ಇದಾದ ಬಳಿಕ ತನಿಷಾ ಕೂಡ ಸಂತಸ ಹೊರಹಾಕಿದರು. ತನಿಷಾ ಮಾತನಾಡಿ ʻʻನಾನು ಜೋರಾಗಿ ಮಾತಾಡ್ತೀನಿ ಎಂದು ಕೆಲವರಿಗೆ ಸಮಸ್ಯೆ ಇದೆ ಎಂದು ಅಂದುಕೊಂಡಿದ್ದೆ. ಅದು ಇದ್ರು ಪರವಾಗಿಲ್ಲ ಎಂದು ನನ್ನ ಕೆಲಸ ಮೆಚ್ಚಿ ಕೊಟ್ಟಿದ್ದೀರಿ. ನನಗೆ ಖುಷಿ ಆಗಿದೆʼʼ ಎಂದಿದ್ದರು. ಆದರೆ ಈ ಬಾರಿ ಮನೆಯವರೆಲ್ಲರೂ ತನಿಷಾ ಅವರಿಗೆ ಕಳಪೆ ಪಟ್ಟ ಕೊಟ್ಟರು. ಅವರು ಈ ವಾರದ ಒಂದು ಟಾಸ್ಕ್​ನಲ್ಲಿ ಉತ್ತಮವಾಗಿ ಆಟ ಆಡಿರಲಿಲ್ಲ. ಇದನ್ನೇ ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಅವರು ಜೈಲಿನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ.

ಪ್ರೇಕ್ಷಕರು ಕಮೆಂಟ್‌ ಮೂಲಕ ನಮ್ರತಾ ಕಳಪೆಯಾಗಬೇಕಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಎಷ್ಟೋ ಜನ ಮನೆಮಂದಿಯ ಈ ನಿರ್ಧಾರಕ್ಕೆ ಬೇಸರ ಹೊರಹಾಕಿದ್ದಾರೆ.

ಭೇಷ್‌ ತುಕಾಲಿ!

ತುಕಾಲಿ ಸಂತು ಸದ್ಯ ವಿನಯ್‌ ಗೌಡ ಅವರ ಟೀಂನಿಂದ ಆಚೆ ಬಂದಿದ್ದಾರೆ. ಮೊದಲಿಂದಲೂ ವಿನಯ್‌ ಟೀಂನಲ್ಲಿಯೇ ಗುರುತಿಸಿಕೊಂಡಿದ್ದರು. ಬಳಿಕ ವಿನಯ್‌ ಟೀಂನ ಕೆಲವು ವಿಷಯಗಳು ತಮ್ಮ ಗಮನಕ್ಕೆ ಬಂದ ಮೇಲೆ ಅಲ್ಲಿಂದ ಹೊರಗೆ ಬಂದರು. ಇದೀಗ ಪ್ರತಾಪ್‌, ವರ್ತೂರ್‌ ಹಾಗೂ ತುಕಾಲಿ, ನೀತು ಅವರದ್ದೇ ಒಂದು ಗುಂಪಾಗಿದೆ. ಈ ಮೊದಲು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಎದುರಾಳಿಯಾಗಿ ವಿನಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. ವಿನಯ್ ವಿರುದ್ಧ ತೊಡೆ ತಟ್ಟಿದ್ದಾರೆ. ಎಲ್ಲ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ. ಇನ್ನು, ಟಾಸ್ಕ್​ನಲ್ಲಿ ಅವರು ನೀಡಿದ ಪರ್ಫಾರ್ಮೆನ್ಸ್ ಮೆಚ್ಚುಗೆ ಪಡೆದಿದೆ. ಹೀಗಾಗಿ, ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: BBK SEASON 10: ಕ್ಯಾಪ್ಟನ್‌ ಆದ ಕಾರ್ತಿಕ್‌; ಕುಣಿದು ಕುಪ್ಪಳಿಸಿದ ಸಂಗೀತಾ!

ಕ್ಯಾಪ್ಟನ್‌ ಆದ ಕಾರ್ತಿಕ್‌

ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಆರನೇ ವಾರ ಕಾರ್ತಿಕ್‌ ಅವರು ಮನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದರು. ಕಾರ್ತಿಕ್ ಮಹೇಶ್‌ ಪ್ರತಿ ವಾರ ನಾಮಿನೇಟ್ ಆಗಿದ್ದರು. ಈ ವಾರಾಂತ್ಯದ ಎಲಿಮಿನೇಷನ್‌ನಲ್ಲಿ ಕಾರ್ತಿಕ್ ಮಹೇಶ್ ಸೇಫ್‌ ಆದರೆ ಮುಂದಿನ ವಾರದ ನಾಮಿನೇಷನ್‌ನಲ್ಲಿ ಕ್ಯಾಪ್ಟನ್ ಕಾರ್ತಿಕ್ ಮಹೇಶ್ ಸೇಫ್ ಆಗಲಿದ್ದಾರೆ. ಕಾರ್ತಿಕ್ ಕ್ಯಾಪ್ಟನ್ ಅಗಿದ್ದಕ್ಕೆ ಸಂಗೀತಾ ಖುಷಿಯಿಂದ ಕುಣಿದಾಡಿದ್ದಾರೆ. ತನಿಷಾ ಕುಪ್ಪಂಡ ಕೂಡ ಸಂತಸ ಹೊರಹಾಕಿದ್ದಾರೆ.

Exit mobile version