Site icon Vistara News

BBK SEASON 10: ʻಕ್ಯಾಪ್ಟನ್‌ʼ ಆದ ತನಿಷಾ; ʻಜೈಲುʼ ಸೇರಿದ ವರ್ತೂರ್‌ ಸಂತೋಷ್‌!

tanisha kuppanda captain, varthur santhosh kalape this week

ಬೆಂಗಳೂರು: ಇದೀಗ ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ಈ ಬಾರಿ ಸ್ಪರ್ಧಿಗಳ ಕುಟುಂಬದವರು ಮನೆಯಲ್ಲಿ ಯಾರು ಕ್ಯಾಪ್ಟನ್‌ ಆಗಬೇಕು ಎಂಬ ಅಭಿಪ್ರಾಯ ಹೇಳಿ ಹೋಗಿದ್ದಾರೆ. ಸಂಗೀತಾ, ತನಿಷಾ ಮತ್ತು ಪ್ರತಾಪ್ ಹೆಸರು ಅತಿ ಹೆಚ್ಚು ಸಲ ಬಂದಿತ್ತು. ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಸಜ್ಜಾಗಿದ್ದರು. ಮನೆಯ ಸದಸ್ಯರಿಗೇ ಈ ಮೂವರಲ್ಲಿ ಯಾರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವುದು ಬೇಡ ಎಂಬುದನ್ನು ತಿಳಿಸಲು ಬಿಗ್‌ ಬಾಸ್‌ ಹೇಳಿದ್ದರು. ಬಹುತೇಕ ಎಲ್ಲರೂ ಪ್ರತಾಪ್‌ ಬೇಡ ಎಂದರು. ಆ ಬಳಿಕ ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು ಎಂದು ಬಿಗ್‌ ಬಾಸ್‌ ಸೂಚಿಸಿದರು. ಅದರಂತೆ ಈ ವಾರ ತನಿಷಾ ಅವರು ಕ್ಯಾಪ್ಟನ್‌ ಆಗಿ ಹೊರ ಹೊಮ್ಮಿದರೆ, ವರ್ತೂರ್‌ ಸಂತೋಷ್‌ ಕಳಪೆಯಾದರು.

ಟಾಸ್ಕ್‌ ಏನು?

ಆಡುವ ಸದಸ್ಯರು ಚೆಂಡುಗಳನ್ನು ಹಗ್ಗದ ಮೇಲಿನಿಂದ ಉರುಳಿಸಿ ನೆಲದ ಮೇಲಿರುವ ಗಾಜಿನ ಲೋಟದ ಒಳಗೆ ಹಾಕಬೇಕು. ತಮಗೆ ಮೀಸಲಿರುವ ಮೂರು ಲೋಟಗಳ ನಡುವೆ ತಲಾ ಒಂದು ಚೆಂಡನ್ನು ಹಾಕುವ ಸದಸ್ಯ ಈ ಟಾಸ್ಕ್‌ನಲ್ಲಿ ಗೆದ್ದು ಮನೆಯ ಕ್ಯಾಪ್ಟನ್‌ ಆಗುತ್ತಾರೆ.

ತನಿಷಾ ಅವರು ಈ ಟಾಸ್ಕ್‌ ಗೆದ್ದು ಮನೆಗ ಕ್ಯಾಪ್ಟನ್‌ ಆದರು. ಇದಾದ ಬಳಿಕ ಬಿಗ್‌ ಬಾಸ್‌ ತನಿಷಾ ಅವರಿಗೆ ಫ್ಯಾಮಿಲಿ ಫೋಟೊವನ್ನು ಕಳುಹಿಸಿದರು. ತನಿಷಾ ಕ್ಯಾಮೆರಾ ಮುಂದೆ ಮಾತನಾಡಿ ʻʻನನ್ನ ಫ್ಯಾಮಿಲಿ, ನನ್ನ ತಂದೆಯನ್ನು ತೋಡಲು ನಿಮ್ಮಿಂದ (ಬಿಗ್‌ ಬಾಸ್‌) ಆಯ್ತು. ಅದು ನಿಜವಾಗಲೂ ಖುಷಿ ಕೊಟ್ಟಿದೆ. ನನ್ನ ತಂದೆ ನನ್ನ ಶೋ ನೋಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ನನಗೆ ಈ ಫೋಟೊ ನೋಡಿ ತುಂಬ ಖುಷಿ ಕೊಟ್ಟಿತುʼʼಎಂದರು.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯೊಳಗೆ ಹಾರಿಬಂತು ಡ್ರೋನ್‌; ಹೆಮ್ಮೆಯಿಂದ ಬೀಗಿದ ಪ್ರತಾಪ್‌

ಕಳಪೆಯಾದ ವರ್ತೂರ್‌ ಸಂತೋಷ್‌

ಯಾವೊಬ್ಬ ಸದಸ್ಯನ ಪ್ರಯಾಣ ಸ್ಲೋ ಮೋಷನ್‌ ಆಗಿತ್ತು ಎಂಬುದನ್ನು ತಿಳಿಸಿ ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಅದೇ ರೀತಿ ಹಲವರು ವರ್ತೂರ್‌ ಅವರ ಹೆಸರನ್ನು ಹೇಳಿದರು. ಹಿಂದೆ ಉಳಿಯುತ್ತಿರುವುದು ವರ್ತೂರ್‌ ಅಂದರು ಸಂಗೀತಾ. ನಮ್ರತಾ ಹೇಳಿರುವ ಕಾರಣ ಏನೆಂದರೆ ವರ್ತೂರ್​ ಸಂತೋಷ್​ ಅವರು ಕ್ಯಾಪ್ಟನ್ಸಿ ಆಟವನ್ನು ಸೀರಿಯಸ್​ ಆಗಿ ತಗೊಂಡಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಕಾರ್ತಿಕ್​ ಅವರೂ ಸಹ ಎಲ್ಲೋ ಒಂದು ಕಡೆ ಹಿಂದೆ ಉಳಿತಿದಾರೆ ಎಂದು ಅನಿಸಿದ್ದು ವರ್ತೂರ್ ಎಂದಿದ್ದಾರೆ.

ಇದನ್ನೂ ಓದಿ: BBK SEASON 10: ಕ್ಯಾಪ್ಟನ್ಸಿ ರೇಸ್​ನಿಂದ ಹೊರಗುಳಿದ ಡ್ರೋನ್‌ ಪ್ರತಾಪ್‌; ಕಾರಣ ಏನು?

ಮನೆಯವರ ಎಲ್ಲ ಅಭಿಪ್ರಾಯ ಬಳಿಕ ವರ್ತೂರ್‌ ಕೂಡ ಗರಂ ಆದರು. ಕ್ಯಾಪ್ಟನ್ಸಿ ಅವರವರ ವೈಯಕ್ತಿಕ ವಿಚಾರ. ಕ್ಯಾಪ್ಟನ್‌ ಆಗುವುದು ಬಿಡುವುದು ಅವರ ಅವರಿಗೆ ಬಿಟ್ಟದ್ದು. ಇದನ್ನು ನಾನು ಒಪ್ಪೋದಿಲ್ಲ. ಫೈನಲ್​ನಲ್ಲಿ ಗೆದ್ದು ಹೋಗ್ತಿನಿ ಅಂದಿದ್ದಾರೆ. ಜನರು ಬೇಕಾದ್ರೆ ಉಳಿಸಿಕೊಳ್ತಾರೆ, ಇಲ್ಲಾ ಅಂದ್ರೆ ಹೊರಗಡೆ ಹಾಕ್ತಾರೆ ಎಂದು ವರ್ತೂರ್ ಸಂತೋಷ್​ ಅವರೇ ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version