Site icon Vistara News

BBK SEASON 10: ಕಾರ್ತಿಕ್‌ಗೆ ಚಾನ್ಸ್‌ ಕೊಟ್ಟ ತನಿಷಾ; ʻಬೆಂಕಿʼ ನಿರ್ಧಾರಕ್ಕೆ ಮನಸೋತ ಫ್ಯಾನ್ಸ್‌!

tanisha kuppanda karthik Bigg boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ (BBK SEASON 10 ) 10, 14ನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿಯೇ ಇದೆ. ಇದರ ಜತೆಗೆ ತನಿಷಾ ಹಾಗೂ ಕಾರ್ತಿಕ್‌ ನಡುವೆ ಬಿರುಕು ಉಂಟಾಗಿದೆ. ಬಿಗ್‌ ಬಾಸ್‌ ಟಾಪ್‌ 2ನಲ್ಲಿ ಯಾರು ಇರಬೇಕು ಎಂದಾಗ ಕಾರ್ತಿಕ್‌ ತನಿಷಾ ಹೆಸರು ತೆಗೆದುಕೊಂಡಿಲ್ಲ. ಅದೇ ರೀತಿ ನಾಮಿನೇಷನ್‌ನಲ್ಲಿಯೂ ತನಿಷಾ ಹೆಸರು ಹೇಳಿದರು. ಆದರೆ ತನಿಷಾ ಇದಾದ ಬಳಿಕ ಕಣ್ಣೀರು ಸುರಿಸಿದ್ದರು. ಕಳೆದ ಸಂಚಿಕೆಯಲ್ಲಿ ತನಿಷಾ ಅಧಿಕಾರ ಸಿಕ್ಕರೂ ಇದೆಲ್ಲ ಮರೆತು ಕಾರ್ತಿಕ್‌ಗೆ ಅವಕಾಶ ಕೊಟ್ಟರು.

ಟಿಕೆಟು ಟು ಫಿನಾಲೆ ಟಾಸ್ಕ್‌

ʻಬಿಗ್‌ ಬಾಸ್‌ʼ ತನಿಷಾ ಅವರಿಗೆ ʻಟಿಕೆಟು ಟು ಫಿನಾಲೆʼ ಟಾಸ್ಕ್‌ ನೀಡಿದ್ದರು. ಚದುರಂಗ ಆಟ ನೀಡಿದ್ದರು. ಇದರಲ್ಲಿ ತನಿಷಾ ಪ್ರತಿಸ್ಪರ್ಧಿಗಳನ್ನು ಆರಿಸಬೇಕಿತ್ತು. ಆಟದಲ್ಲಿ ಚದುರಂಗದಲ್ಲಿ ಕುದುರೆ ಸಾಗಿದಂತೆ ಚಲಿಸಬೇಕು. ಕೆಂಪು ಬಣ್ಣ ಸಿಕ್ಕರೆ ಔಟ್ ಆದಂತೆ. ಅಂತಿಮವಾಗಿ ಉಳಿಯುವ ಸ್ಪರ್ಧಿ ಆಟದಲ್ಲಿ ಮೊದಲನೇ ಸ್ಥಾನ ಪಡೆದಂತೆ. ಇದಕ್ಕೂ ಮೊದಲು ವಿನಯ್‌ ಸ್ಟ್ರಾಟೆಜಿ ಮಾಡಿದರು. ತನಿಷಾ ಬಳಿ ʻʻ’ಉಳಿದ ಇಬ್ಬರನ್ನ ನಾನೇ ಬ್ಲಾಕ್ ಮಾಡಿಕೊಡ್ತೀನಿ. ನಾನು 50 ಪಾಯಿಂಟ್‌ಗೆ ಔಟ್‌ ಆಗ್ತೀನಿ. ನಿನಗೆ 100 ಪಾಯಿಂಟ್ಸ್ ಕೊಡಿಸ್ತೀನಿ’’ ಆಫರ್ ಇಟ್ಟರು. ಅತ್ತ ಕಾರ್ತಿಕ್‌ ಕೂಡ ತನಿಷಾ ಜತೆ ಮಾತುಕತೆ ಮಾಡಿದ್ದರು. ಮೊದಲೇ ಕಾರ್ತಿಕ್‌ ಬಗ್ಗೆ ತನಿಷಾಗೆ ಬೇಸರ ಕೂಡ ಇದ್ದಿತ್ತು.

ನನಗೂ ಬ್ರೇನ್ ಇದೆ

ಕಾರ್ತಿಕ್‌ ತನಿಷಾ ಜತೆ ಮಾತನಾಡಿ ʻʻನನ್ನ ಮೇಲೆ ಕೋಪ ಇದೆ ಎನ್ನುವುದು ಗೊತ್ತು. ನೀನು ನನ್ನ ತೆಗೆದುಕೊಳ್ಳುವುದಿಲ್ಲ ಎಂದು. ಸ್ವಲ್ಪ ಯೋಚನೆ ಮಾಡು. ಕೆಲವರಿಗೆ ಆಗಲೇ ಪಾಯಿಂಟ್ಸ್ ಇದೆ.ʼʼಎಂದರು. ತನಿಷಾ ಕೂಡ ಈ ಮಾತಿಗೆ ʻʻನನಗೂ ಬ್ರೇನ್ ಇದೆ. ನೀನು ಹೇಳಿಕೊಟ್ಟೇ ನನಗೆ ಗೊತ್ತಾಗಬೇಕಾಗಿಲ್ಲʼʼಎಂದಿದ್ದಾರೆ.

ಇದನ್ನೂ ಓದಿ: BBK SEASON 10:  ಪ್ರತಾಪ್‌ ಹೇಳಿದ್ದು ನಿಜನಾ ಅನ್ಸತ್ತೆ, ನಮ್ ಫ್ರೆಂಡ್ಸೇ ಹೋಗಿರೋದು; ವಿನಯ್‌!

ನಮ್ರತಾ ಕೂಡ ತನಿಷಾ ಅವರಿಗೆ ಆಟದಲ್ಲಿ ಚಾನ್ಸ್‌ ಕೊಡುವಂತೆ ಮನವಿ ಮಾಡಿದರು. ಇದಾದ ಬಳಿಕ ತನಿಷಾ ಅವರು ʻನ್ಯೂ ಇಯರ್‌ ದಿನ ಪಾರ್ಟಿಯಿಂದ ನಮ್ರತಾನ ಹೊರಗೆ ಇಟ್ಟಿದ್ದೆ ಹೀಗಾಗಿ ಈ ಬಾರಿ ನಮ್ರತಾ ಅವರಿಗೆ ಚಾನ್ಸ್‌ ಕೊಡುತ್ತೇನೆʼʼಎಂದರು. ʻʻನನಗೂ ಬ್ರೇನ್ ಇದೆ. ಅದನ್ನ ಯೂಸ್ ಮಾಡ್ತಾ ಇದ್ದೀನಿ. ಯಾರೋ ಹೇಳಿದ್ದಕ್ಕೆ ಕನ್ಸಿಡರ್ ಮಾಡ್ತಾ ಇಲ್ಲʼʼ ಎಂದು ಕಾರ್ತಿಕ್‌ ಆಯ್ಕೆ ಮಾಡಿದರು. ತುಕಾಲಿ ಸಂತು ಅವರನ್ನೂ ತನಿಷಾ ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿದರು. ವಿನಯ್‌ ಅವರಿಗೆ ಅಡ್ವಾಂಟೇಜ್ ಇರೋದ್ರಿಂದ ಟಾಸ್ಕ್‌ನಲ್ಲಿ ಚಾನ್ಸ್‌ ಕೊಡುತ್ತಿಲ್ಲ ಎಂದರು.

ವರ್ತೂರ್‌ಗೆ ಅಧಿಕಾರ

ಹಿಂದಿನ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್‌ ಗೆದ್ದಿದ್ದರು. ಹೀಗಾಗಿ, ಅವರಿಗೆ ಚದುರಂಗ ಆಟದಲ್ಲಿ ಅಡ್ವಾಂಟೇಜ್ ಲಭಿಸಿತು. ಹೀಗಾಗಿ ಕಾರ್ತಿಕ್‌ ಅವರನ್ನು ಹೊರಗೆ ಇಟ್ಟರು. ವರ್ತೂರ್‌ ಸ್ವತಃ ತಾವೇ ಆಡಿದರು. ಆ ಬಳಿಕ ಮೊದಲಿಗೆ ವರ್ತೂರ್‌, ನಮ್ರತಾ, ತುಕಾಲಿ ಹೀಗೆ ಎಲ್ಲರೂ ಸೋತರು. ತನಿಷಾ ಗೇಮ್‌ನಲ್ಲಿ ವಿನ್‌ ಆದರು. ಡ್ರೋನ್‌ ಪ್ರತಾಪ್‌, ಕಾರ್ತಿಕ್‌ ಅವರು ತನಿಷಾ ವಿನಯ್‌ ಆಗುತ್ತಾರೆ ಎಂದು ಊಹಿಸಿದ ಕಾರಣ 40ಪಾಯಿಂಟ್ಸ್‌ ಸಿಕ್ಕಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version