Site icon Vistara News

BBK Season 10: ಬಿಗ್‌ ಬಾಸ್‌ ʻಫನ್ ಫ್ರೈಡೇʼ ಮೋಜಿನ ಆಟದಲ್ಲಿ ಗೆದ್ದ ಸ್ಪರ್ಧಿ ಇವರು!

tanisha kuppanda win fun friday

ಬಿಗ್‌ಬಾಸ್‌ ಕನ್ನಡದ (BBK Season 10) 10ನೇ ಸೀಸನ್‌ನಲ್ಲಿ ಇನ್ನೊಂದು ಹೊಸ ಸೆಗ್ಮೆಂಟ್ ಪರಿಚಯಿಸಲಾಗಿದೆ. ‘ಫನ್ ಫ್ರೈಡೇ’ ಎಂಬ ಹೆಸರಿನ ಬಹುಮೋಜಿನ ಈ ಸೆಗ್ಮೆಂಟ್‌.

ಇನ್ನು ಮುಂದೆ ಪ್ರತಿ ಶುಕ್ರವಾರ ಬಿಗ್‌ಬಾಸ್‌ ಮನೆಯೊಳಗಿನ ಸ್ಪರ್ಧಿಗಳು ಫನ್‌ ಫ್ರೈಡೆ ಸೆಗ್ಮೆಂಟ್‌ನಲ್ಲಿ ಮೋಜಿನ ಆಟಗಳನ್ನು ಆಡಲಿದ್ದಾರೆ. ಆಟವೇನೋ ಮೋಜಿನದಿರುತ್ತದೆ, ಆದರೆ ಅದರ ಫಲಿತಾಂಶ ಬರೀ ಮೋಜಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಸ್ಪರ್ಧಿಗಳ ಕುರಿತು ಜನರಲ್ಲಿ ಅಭಿಪ್ರಾಯವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಈ ಆಟದಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಬಹುಮಾನವನ್ನೂ ಕೊಡಲಿದ್ದಾರೆ.

ಇದನ್ನೂ ಓದಿ: BBK Season 10: ತುಕಾಲಿ ಫುಲ್‌ ರೋಸ್ಟ್‌; ಅಲ್ನೋಡಿ ಪ್ರತಾಪನ ಹೊಸ ʻಪ್ರತಾಪʼ!

ಈ ವಾರದ ‘ಫನ್‌ ಫ್ರೈಡೆ’ನಲ್ಲಿ ಮನೆಯೊಳಗಿನ ಸದಸ್ಯರು ‘ಮ್ಯೂಸಿಕಲ್ ಬಕೆಟ್ಸ್‌’ ಆಟ ಆಡಿದರು. ವೃತ್ತದೊಳಗೆ ಬಿಂದಿಗೆಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ವೃತ್ತದ ಹೊರಗೆ ಸ್ಪರ್ಧಿಗಳು ನಿಂತಿದ್ದರು.

ಸಂಗೀತ ಶುರುವಾಗುತ್ತಿದ್ದಂತೆಯೇ ವೃತ್ತದ ಗುಂಟ ಅವರು ಓಡಬೇಕು. ಸಂಗೀತ ನಿಂತ ಹಾಗೆ ವೃತ್ತದೊಳಗೆ ಓಡಿ ಬಿಂದಿಗೆಯ ಮೇಲೆ ಹತ್ತಿ ನಿಂತುಕೊಳ್ಳಬೇಕು. ಯಾರು ನಿಲ್ಲಲು ಬಿಂದಿಗೆ ಸಿಗುವುದಿಲ್ಲವೋ, ಅವರು ಔಟ್‌!
ಇಂಥದೊಂದು ಮಜವಾದ ಆಟವನ್ನು ಸ್ಪರ್ಧಿಗಳು ಮಜವಾಗಿಯೇ ಆಡಿದರು.

ಎಲ್ಲ ಸ್ಪರ್ಧಿಗಳನ್ನೂ ಹಿಮ್ಮೆಟ್ಟಿಸಿ ಕೊನೆಯ ಹಂತದಲ್ಲಿ ಸಿರಿ ಮತ್ತು ತನಿಷಾ ಅಂತಿಮವಾಗಿ ಉಳಿದಿದ್ದರು. ವೃತ್ತದೊಳಗೆ ಇರುವುದು ಒಂದೇ ಬಿಂದಿಗೆ. ಸಂಗೀತ ನಿಲ್ಲುತ್ತಿದ್ದಂತೆಯೇ ಇಬ್ಬರೂ ವೇಗವಾಗಿ ಬಿಂದಿಗೆಯ ಕಡೆಗೆ ಓಡಿದರೂ, ಬಿಂದಿಗೆಯನ್ನು ಮೊದಲು ತಲುಪಿ ಹತ್ತಿ ನಿಲ್ಲಲು ಸಾಧ್ಯವಾಗಿತ್ತು ತನಿಷಾಗೆ.
ಹಾಗಾಗಿ ಈ ಸೀಸನ್‌ನ ಮೊದಲ ಫನ್ ಫ್ರೈಡೆನಲ್ಲಿ ತನಿಷಾ ಗೆದ್ದಿದ್ದಲ್ಲದೆ ಬಹುಮಾನವನ್ನೂ ತಮ್ಮದಾಗಿಸಿಕೊಂಡರು.
Exit mobile version