Site icon Vistara News

BBK Season 10: ಕಿಚ್ಚನಿಗೆ ಕ್ಷಮೆ ಕೇಳಿದ ತನಿಷಾ, ಸಂಗೀತಾ!

Tanisha Sangeetha apologizes to Kiccha bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಸಂಚಿಕೆಯಲ್ಲಿ ಸಂಗೀತಾ ಹಾಗೂ ತನಿಷಾ ಅವರಿಗೆ ಕಿಚ್ಚ ಸುದೀಪ್‌ ಬೆಂಡೆತ್ತಿದ್ದಾರೆ. ಬಳೆಯ ವಿಚಾರಕ್ಕೆ ವಿನಯ್‌ ಅವರಿಗೆ ಸುದೀಪ್‌ ಚೆನ್ನಾಗಿ ಕ್ಲಾಸ್‌ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೇ ಬಳೆಯ ಫೋಟೊ ಫ್ರೇಮ್‌ಗೆ ಕಿಚ್ಚನ ಚಪ್ಪಾಳೆ ಕೂಡ ದೊರಕಿತ್ತು. ಆದರೀಗ ತನಿಷಾ ಹಾಗೂ ಸಂಗೀತಾ ಅವರು ಬಳೆಯನ್ನು ಒಂದು ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ಆಟವಾಡಿರುವುದು ಸರಿಯಲ್ಲ ಎಂದು ಸುದೀಪ್‌ ಮನವರಿಕೆ ಮಾಡಿಕೊಟ್ಟರು.

ಇದು ಗೊಂಬೆಯಾಟವಯ್ಯ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಮನಬಂದಂತೆ ವರ್ತಿಸಿದರು. ಮಾತ್ರವಲ್ಲ ಕಾರ್ತಿಕ್‌, ತನಿಷಾ, ಸಂಗೀತಾ ಬಳೆಯನ್ನು ಇಟ್ಟುಕೊಂಡು ಹಂಗಿಸಿ ಮಾತನಾಡಿದರು. ಈ ಬಗ್ಗೆ ಸುದೀಪ್‌ ಮಾತನಾಡಿ ʻಈಗಾಗಲೇ ವಿನಯ್ ಗೌಡ ಅವರು ಬಳೆಗಳ ರಾಜ ಎಂದು ಹೇಳಿ, ನಾವು ಅದನ್ನು ತಪ್ಪು ಎಂದು ಹೇಳಿ ಫೋಟೊ ಪ್ರೇಮ್ ಮಾಡಿಸಿದ್ವಿ, ಬಳೆಗೆ ಚಪ್ಪಾಳೆ ಕೂಡ ಕೊಟ್ವಿ. ವಿನಯ್ ಗೌಡ ತಮ್ಮದು ತಪ್ಪು ಅಂತ ಹೇಳಿಕೊಂಡು ಪಶ್ಚಾತ್ತಾಪ ಪಟ್ಟರು. ಅದು ಅಲ್ಲಿಗೆ ಮುಗಿಯಿತು. ಆದರೆ ನೀವು ಟಾಸ್ಕ್‌ನಲ್ಲಿ ಬಳೆ ಹಾಕಿಕೊಂಡು ಅದನ್ನೇ ಶಸ್ತ್ರ ಮಾಡಿಕೊಂಡು ಮಾತಾಡಿದ್ದು ಸರಿಯಾ?ಮತ್ತೆ ಯಾಕೆ ನೆನಪಿಸಬೇಕು?” ಎಂದು ಕಿಚ್ಚ ಸುದೀಪ್ ಅವರು ತನಿಷಾ, ಸಂಗೀತಾಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಗೀತಾ ಹಾಗೂ ತನಿಷಾ ಕ್ಷಮೆ ಕೂಡ ಕೇಳಿದರು.

ಇದನ್ನೂ ಓದಿ: BBK Season 10: ಹೊರಗೆ ಹೋಗ್ತೀನಿ ಎಂದು ಕಣ್ಣೀರಿಟ್ಟ ವರ್ತೂರ್‌; ವೇದಿಕೆ ತೊರೆದ ಸುದೀಪ್‌!

ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಅವರು ಕಾರ್ತಿಕ್‌ ಅವರಿಗೆ ಟಾಸ್ಕ್‌ ಸಂದರ್ಭದಲ್ಲಿ ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದನ್ನು ಸಂಗೀತಾ ಮಾತ್ರ ವಿರೋಧಿಸಿದ್ದರು, ಮತ್ಯಾರೂ ಧ್ವನಿ ಎತ್ತಿರಲಿಲ್ಲ. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಬಳೆ ವಿಷಯದಲ್ಲಿ ವಿನಯ್‌ಗೆ ಸಂಗೀತಾ ತಿರುಗೇಟು ಕೊಟ್ಟಿದ್ದರು. ‘ಬಳೆ ಹಾಕೊಂಡಿದ್ದೀನಿ ನೋಡು.. ಬಳೆ.. ಬಳೆ’ ಎಂದಿದ್ದರು ಸಂಗೀತಾ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಯಿತು. ಸುದೀಪ್‌ ಅವರು ಬಗ್ಗೆ ಕೂಡ ಪ್ರೇಕ್ಷಕರು ಅಸಮಾಧಾನಗೊಂಡಿದ್ದರು. ‘’ಬಲಶಾಲಿ ಬಳೆ.. ನನ್ನ ಪ್ರಕಾರ ಅದು ಬಲದ ಸಂಕೇತ. ಇದು ರಿಮೈಂಡ್ ಆಗಲಿ ಎಲ್ಲರಿಗೂ..’’ ಎಂದಿದ್ದರು ಕಿಚ್ಚ ಸುದೀಪ್.
ಇವೆಲ್ಲವೂ ಮುಗಿದ ನಂತರದಲ್ಲಿ ಟಾಸ್ಕ್ ವಿಚಾರದಲ್ಲಿ ಮತ್ತೆ ಸಂಗೀತಾ, ತನಿಷಾ ಅವರು ತಾವು ಹೆಣ್ಣು ಎಂದು ಬಳೆ ಹಾಕಿಕೊಂಡು ಅದನ್ನು ಶಸ್ತ್ರ ಮಾಡಿರೋದು ಸರಿ ಅಲ್ಲ ಎಂದು ಸುದೀಪ್ ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version