Site icon Vistara News

BBK SEASON 10: ಹಳೆಯ ಬೇಸರ ಮರೆತು ಕಾರ್ತಿಕ್‌ಗೆ ಸಪೋರ್ಟ್‌ ಮಾಡಿ ಎಂದ ತನಿಷಾ!

Tanisha support Karthik Mahesh

ಬೆಂಗಳೂರು: ಹತ್ತೊಂಬತ್ತು ಸ್ಪರ್ಧಿಗಳ (BBK SEASON 10) ಎಂಟ್ರಿಯ ಜತೆಗೆ ಶುರುವಾಗಿದ್ದ `ಬಿಗ್‌ಬಾಸ್‌ ಕನ್ನಡ ಸೀಸನ್‌ 10′ ಹದಿನಾರು ವಾರಗಳನ್ನು ದಾಟಿದೆ. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಷ್ಟೇ ಮನೆಯೊಳಗೆ ಇದ್ದಾರೆ. ತಮ್ಮದೇ ಜರ್ನಿಯ ಸಿಹಿ-ಕಹಿ ನೆನಪುಗಳ ಮಳೆಯಲ್ಲಿ ತೋಯುತ್ತಿದ್ದಾರೆ. ಇದೀಗ ಬೆಂಕಿ ತನಿಷಾ ತಮ್ಮ ಕಾರ್ತಿಕ್‌ ಮೇಲೆ ಇದ್ದ ಬೇಸರವನ್ನು ಮರೆತು ಕಾರ್ತಿಕ್​ ಪರವಾಗಿ ವೋಟ್​ ಮಾಡುವಂತೆ ವೀಕ್ಷಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ವಿಡಿಯೊದಲ್ಲಿ ತನಿಷಾ ಮಾತನಾಡಿ ʻʻಬಿಗ್‌ ಬಾಸ್‌ ಮನೆಯಲ್ಲಿ ಮೊದಲನೇ ವಾರದಿಂದ ಇಲ್ಲಿಯವರೆಗೂ ಸತತವಾಗಿ ಒಳ್ಳೆಯ ಏಫರ್ಟ್‌ ಹಾಕಿ ಎಲ್ಲಿಯೂ ಕುಗ್ಗದೇ ತುಂಬ ಚೆಂದವಾಗಿ ಆಟ ಆಡಿದ ಕಾರ್ತಿಕ್‌ ಮಹೇಶ್‌ ಅವರಿಗೆ ನಾವೆಲ್ಲರೂ ಸೇರಿ ಅವರಿಗೆ ವೋಟ್‌ ಮಾಡೋಣ. ಅವರು ವಿನ್ನರ್‌ ಆಗಬೇಕು ಎಂದು ನಾನು ತುಂಬ ಆಸೆ ಪಡೆತ್ತಿದ್ದೇನೆ. ಇಲ್ಲಿಯವರೆಗೆ ನನಗೆ ಸಪೋರ್ಟ್‌ ಮಾಡಿದ ಪ್ರತಿಯೊಬ್ಬ ಅಭಿಮಾನಿಗೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.

ಇನ್ನು ಈ ಹಿಂದೆ ಮಿಡ್‌ ವೀಕ್‌ ಎಲಿಮಿನೇಷನ್‌ನಿಂದಾಗಿ ತನಿಷಾ ಔಟ್‌ ಆಗಿದ್ದರು. ಅವರು ನಾಮಿನೇಟ್‌ ಆಗಲು ಕಾರ್ತಿಕ್‌ ಅವರೇ ಕಾರಣವಾಗಿದ್ದರು. ಬಾಸ್‌ ಟಾಪ್‌ 2ನಲ್ಲಿ ಯಾರು ಇರಬೇಕು ಎಂದಾಗ ಕಾರ್ತಿಕ್‌ ತನಿಷಾ ಹೆಸರು ತೆಗೆದುಕೊಂಡಿಲ್ಲ. ಅದೇ ರೀತಿ ನಾಮಿನೇಷನ್‌ನಲ್ಲಿಯೂ ತನಿಷಾ ಹೆಸರು ಹೇಳಿದರು. ಆದರೆ ತನಿಷಾ ಇದಾದ ಬಳಿಕ ಕಣ್ಣೀರು ಸುರಿಸಿದ್ದರು.

‘ಸಿಂಪಲ್​ ಸುನಿ, ಕಾರುಣ್ಯ ರಾಮ್​, ಅನುಪಮಾ ಗೌಡ, ಸುಂದರ್​ ವೀಣಾ, ಯಶ್​ ಶೆಟ್ಟಿ, ಅಶ್ವಿತಿ ಶೆಟ್ಟಿ, ಶೈನ್​ ಶೆಟ್ಟಿ, ನಿಧಿ ಹೆಗಡೆ, ಅಪೇಕ್ಷಾ ಪುರೋಹಿತ್​ ಮುಂತಾದವರು ಕಾರ್ತಿಕ್​ ಮಹೇಶ್​ಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: BBK Season 10: ಬಂದೇ ಬಿಡ್ತು `ಬಿಗ್‌ಬಾಸ್’ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!

ಬಿಗ್‌ಬಾಸ್ ಕನ್ನಡ ಮತ್ತು ಪ್ರೇಕ್ಷಕರ ನಡುವಿನ ಈ ಸುಧೀರ್ಘ ಪ್ರಯಾಣಕ್ಕೆ ಇಂದು ಮತ್ತು ನಾಳೆ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯೊಟ್ಟಿಗೆ ಅಲ್ಪವಿರಾಮ ಬೀಳಲಿದೆ. ಇಷ್ಟು ದೊಡ್ಡ ಷೋದ, ಇಷ್ಟು ದೊಡ್ಡ ಯಶಸ್ಸಿನ ಅಂತಿಮ ಘಟ್ಟವೂ ಅದ್ದೂರಿಯಾಗಿ ಇರಲೇಬೇಕಲ್ಲವೇ? ಅನುಮಾನವೇ ಬೇಡ, ಬಿಗ್‌ಬಾಸ್‌ ರಿಯಾಲಿಟಿ ಷೋದ ಈ ಸೀಸನ್‌ನ ಫಿನಾಲೆ ಕೂಡ ಸಖತ್ ಸ್ಪೆಷಲ್ ಆಗಿಯೇ ಇರಲಿದೆ.

ಇಂದು ಮತ್ತು ನಾಳೆ, ಅಂದರೆ ಶನಿವಾರ-ಭಾನುವಾರ ರಾತ್ರಿ 7.30ಗೆ ಜಿಯೊಸಿನಿಮಾದಲ್ಲಿ ಬಿಗ್‌ಬಾಸ್ ಫಿನಾಲೆಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿಯೂ 7.30ಕ್ಕೆ ಫಿನಾಲೆ ವೀಕ್ಷಿಸಬಹುದು.

Exit mobile version