Site icon Vistara News

BBK SEASON 10: ಮನೆಯವರು ಬಂದು ಹೋಗಾಯ್ತು, ನಮ್‌ ಮಾತು ಶುರು ಮಾಡೋಣ್ವಾ? ಕಿಚ್ಚನ ಮುನ್ಸೂಚನೆ!

sudeep started panchayti

ಬೆಂಗಳೂರು: ಡಿಸೆಂಬರ್ 23ರಂದು ಕಿಚ್ಚ ಸುದೀಪ್ (BBK SEASON 10) ಮುಂದಾಳತ್ವದಲ್ಲಿ ನಡೆದಿದ್ದ ಕೆಸಿಸಿ ಕಪ್‌ ಸೀಸನ್‌ 4 ನಿಂದಾಗಿ ವೀಕೆಂಡ್‌ ಪಂಚಾಯ್ತಿಗೆ ಗೈರಾಗಿದ್ದರು. ಇದೀಗ ಈ ವಾರ ಕಿಚ್ಚ ಕಮ್‌ ಬ್ಯಾಕ್‌ ಆಗಿದ್ದಾರೆ. ಮನೆಯಲ್ಲಿ ಎಂಟ್ರಿ ಕೊಟ್ಟ ಬಳಿಕ ಮತ್ತೆ ಮೊದಲಿನ ಆಟ ಶುರುವಾಗಲಿದೆ ಎಂದು ಸ್ಪರ್ಧಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ ಮನೆಯಲ್ಲಿ ಹಿಂದಿನ ವಾರ ಪೂರ್ತಿ ಮನೆಯವರೊಂದಿಗೆ ಸಖತ್‌ ಚಿಲ್‌ ಆಗಿದ್ದರು ಸ್ಪರ್ಧಿಗಳು. ಇದರಿಂದ ಹೊರ ಬರುವಂತೆ ಸುದೀಪ್ (Sudeep) ಪರೋಕ್ಷವಾಗಿ ಸೂಚಿಸಿದ್ದಾರೆ.

ಬಂದ ಕೂಡಲೇ ಎಲ್ಲರ ಕೈಗೆ ಕಾಫಿ ಕಪ್‌ ಕೊಟ್ಟು ಇದರ ಅರ್ಥ ಏನು ಎಂಬುದನ್ನು ಸುದೀಪ್ ವಿವರಿಸಿದ್ದಾರೆ. ‘ಮನೆಯವರು ಬಂದರು ಹೋದರು. ನಾವು ಮೊದಲಿನ ರೀತಿ ಮಾತು ಆರಂಭಿಸೋಣ’ ಎಂದು ಸುದೀಪ್ ಹೇಳಿದ್ದಾರೆ. 

ಈ ವಾರ ತಮ್ಮ ಮನೆಗೆ ಹಿಂದಿರೋಗೋದು ಯಾರು?

ಬಿಗ್‌ ಬಾಸ್‌ ಸೀಸನ್‌ 10 (BBK SEASON 10), ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಈ ವಾರ ಒಟ್ಟೂ ಎಂಟು ಮಂದಿ ನಾಮಿನೇಟ್‌ ಆಗಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಮೈಕಲ್, ಸಂಗೀತಾ, ಕಾರ್ತಿಕ್, ಸಿರಿ ಹಾಗೂ ತನಿಷಾ ನಾಮಿನೇಟ್ ಆಗಿದ್ದಾರೆ. ನಮ್ರತಾ ಹಾಗೂ ಪ್ರತಾಪ್ ನಾಮಿನೇಷ್​ನಿಂದ ಬಚಾವ್ ಆಗಿದ್ದಾರೆ.

ಇದನ್ನೂ ಓದಿ: BBK SEASON 10: ಈ ವಾರ ತಮ್ಮ ಮನೆಗೆ ಹಿಂದಿರೋಗೋದು ಯಾರು? ನಮ್ರತಾ, ಪ್ರತಾಪ್‌ ಸೇಫ್‌!

ಈಗಾಗಲೇ ಸ್ಪರ್ಧಿಗಳ ಕುಟುಂಬದವರು ಮನೆಗೆ ಎಂಟ್ರಿ ಕೊಟ್ಟು ಸದಸ್ಯರಿಗೆ ಕಿವಿ ಮಾತು ಹೇಳಿದ್ದಾರೆ. ಅದರಂತೆ ಆಟವನ್ನು ಶುರು ಮಾಡಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ವೀಕೆಂಡ್ ಎಪಿಸೋಡ್​ನಲ್ಲಿ ಯಾರು ಔಟ್ ಆಗುತ್ತಾರೆ ಅನ್ನೋದು ಗೊತ್ತಾಗಲಿದೆ. ಇದಕ್ಕೆ ಉತ್ತರ ಸಿಗಲಿದೆ.

ಕಳೆದ ವಾರ ಅವಿನಾಶ್ ಶೆಟ್ಟಿ ದೊಡ್ಮನೆ ಜರ್ನಿ ಮುಗಿಸಿ ಹೋಗಿದ್ದರು. ಡಬಲ್‌ ಎಲಿಮಿನೇಶನ್‌ ಎಂದು ಬಿಗ್‌ ಬಾಸ್ ಬಳಿಕ ಮೈಕಲ್‌ ಸೇಫ್‌ ಆಗಿರುವುದನ್ನು ಅನೌನ್ಸ್‌ ಮಾಡಿದ್ದರು. ಮನೆಯಲ್ಲಿರುವ 10 ಮಂದಿ ಸ್ಪರ್ಧಿಗಳ ಪೈಕಿ ಎಂಟು ಮಂದಿ ನಾಮಿನೇಟ್ ಆಗಿದ್ದು ಯಾರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ ನೋಡಬೇಕಾಗಿದೆ. ಕಳೆದ ವಾರದಿಂದಲೂ ಕೂಡ ಸಂಗೀತ ವರ್ತೂರು ಸಂತೋಷ್ ಮೈಕಲ್ ಎಲ್ಲರೂ ಕೂಡ ಸೇಫ್ ಆಗುತ್ತಾ ಬರುತ್ತಿದ್ದಾರೆ ಆದರೆ ಸಿರಿ ಕೂಡ ಕಳೆದ ವಾರ ಸೇಫ್ ಆಗಿದ್ದರು. ಆದರೀಗ ಸಿರಿ ಅವರು ಮನೆಯಿಂದ ಹೊರಗೆ ಹೋಗ್ತಾರೆ ಎಂದು ವೀಕ್ಷಕರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

Exit mobile version