ಬೆಂಗಳೂರು: ʻಬಿಗ್ ಬಾಸ್ ಸೀಸನ್ 10ʼರಲ್ಲಿ (BBK SEASON 10) ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ತುಂಬಾ ಫೇಮಸ್ ಆಗಿತ್ತು. ಇದರಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಇಶಾನಿ, ರಕ್ಷಕ್ , ತುಕಾಲಿ ಪ್ರಮುಖರಾಗಿದ್ದರು. ಇವರ ಗ್ರೂಪಿಸಂ ಬಗ್ಗೆ ಅದೆಷ್ಟೋ ಬಾರಿ ಸುದೀಪ್ ಮಾತನಾಡಿದ್ದರು. ಪ್ರತಿಯೊಂದು ಹೆಜ್ಜೆಯಲ್ಲಿಯೂ ಈ ಟೀಂ ಕೆಲವು ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುತ್ತಲೇ ಇರುತ್ತಿತ್ತು. ಬಳಿಕ ಈ ಟೀಂನಲ್ಲಿ ಒಬ್ಬೊಬ್ಬರಾಗಿಯೇ ಮನೆಯಿಂದ ಹೊರ ಹೋದರು. ಆ ಬಳಿಕ ಗೆದ್ದಿದ್ದು ಕಾರ್ತಿಕ್, ಹಾಗೂ ಪ್ರತಾಪ್ ರನ್ನರ್ ಅಪ್ ಆದರು. ಆದರೀಗ ಈ ಗ್ಯಾಂಗ್ ಮನೆಯಿಂದ ಹೊರ ಬಂದ ಮೇಲೆ ಸ್ಪರ್ಧಿಗಳ ಬಾಂಡಿಂಗ್ ಮತ್ತಷ್ಟು ಬಲವಾಗುತ್ತಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಮೇಲೆ ವಿನಯ್ ಜತೆ ನಮ್ರತಾ, ರಕ್ಷಕ್ ಹಾಗೂ ಮೈಕಲ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಹಾಗೇ ಇತ್ತೀಚೆಗೆ ವಿನಯ್ ಗ್ಯಾಂಗ್ ಮಸ್ತ್ ಆಗಿ ಪಾರ್ಟಿ ಮಾಡಿದೆ.
ನಮ್ರತಾ ಕೂಡ ಮೈಸೂರಿನಲ್ಲಿ ತಮ್ಮ ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ. ʻʻಮೈಸೂರಿಗೆ ಬಂದಿರುವುದು ರಕ್ಷಕ್ ಪ್ಲ್ಯಾನ್ ಇದು. ಅವನು ನನ್ನ ತಮ್ಮ. ಅಣ್ಣ ಅಂದರೆ ವಿನಯ್. ಎಲ್ಲರೂ ಫ್ಯಾಮಿಲಿ ಸೇರಿಕೊಂಡು ಬಂದಿದ್ದೇವೆ. ಹೊರಗಡೆ ಕೂಡ ನಮ್ಮ ಬಾಂಡಿಂಗ್ ಹೀಗೆ ಇರುತ್ತೆ. ಇನ್ನೂ ತುಂಬಾ ಟ್ರ್ಯಾವೆಲ್ ಮಾಡೋದು ಇದೆ. ದೇವಸ್ಥಾನಕ್ಕೆ ಹೋಗಬೇಕು ಎಂದು ತುಂಬ ಸಲ ಅಂದುಕೊಳ್ಳುತ್ತಿದ್ದೆ. ಆಗಿರಲಿಲ್ಲ. ಇದೀಗ ಫ್ಯಾಮಿಲಿ ಹಾಗೂ ಸ್ನೇಹಿತರ ಜತೆ ಬಂದಿದ್ದೇವೆ. ಚಾಮುಂಡೇಶ್ವರಿ ದರ್ಶನ ತುಂಬಾನೇ ಚೆನ್ನಾಗಿ ಆಯ್ತು. ಜನರ ಪ್ರೀತಿ ಈ ರೇಂಜ್‌ಗೆ ಇದೆ ಎಂದು ಗೊತ್ತಿರಲಿಲ್ಲʼʼಎಂದು ಹೇಳಿದರು.
ಇದನ್ನೂ ಓದಿ: BBK SEASON 10: 3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ; ಕಾರ್ತಿಕ್ ಮಹೇಶ್
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ಮಾಸ್ಟರ್ ಪ್ಲ್ಯಾನ್
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಪ್ಲ್ಯಾನ್ ಮಾಡಿಕೊಂಡು ಕೆಲವೊಂದು ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುತ್ತಲೇ ಇತ್ತು. ಉತ್ತಮ ಹಾಗೂ ಕಳಪೆಯನ್ನು ಕೊಡುವಾಗ ತಮ್ಮಲ್ಲಿಯೇ ಚರ್ಚಿಸಿ ಆಮೇಲೆ ಟಾರ್ಗೆಟ್ ಮಾಡಿ ನೀಡುತ್ತಿತ್ತು. ಇದು ಸುದೀಪ್ ಅವರ ಗಮನಕ್ಕೂ ಬಂದಿತ್ತು. ಅದೆಷ್ಟೋ ಬಾರಿ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಕಳಪೆ ಆದ ಬಳಿಕ ಈ ಹಿಂದೆ ನೀತು ಕೂಡ ಪರೋಕ್ಷವಾಗಿ ಚಮಚಾಗಿರಿ, ದಾದಾಗಿರಿ ಎಂದು ಈ ಟೀಂಗೆ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: BBK SEASON 10: ಮಾನಸ ಕಾಮಿಡಿಗೆ ಕನ್ನಡಿಗರು ಫಿದಾ; ಸೀಸನ್ 11ಕ್ಕೆ ʻತುಕಾಲಿ ಪತ್ನಿʼ ಬರಲಿ ಅಂದ್ರು ಫ್ಯಾನ್ಸ್!
ಪಾಪರೆಡ್ಡಿಪಾಳ್ಯ’ ಗ್ಯಾಂಗ್ ಫುಲ್ ಖಾಲಿ ಖಾಲಿ
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಲ್ಲಿ ಒಬ್ಬೊಬ್ಬರಾಗಿಯೇ ಆ ಬಳಿಕ ಮನೆಯಿಂದ ಆಚೆ ಹೋದರು ಮೊದಲು ಔಟ್ ಆಗಿದ್ದು ವಿನಯ್ ತಂಡದ ರಕ್ಷಕ್. ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡರೂ ಒಂದೇ ತಿಂಗಳಿಗೆ ಅವರು ಔಟ್ ಆದರು. ನಂತರ ನೀತು ಅವರು ತಂಡ ಬದಲಿಸಿದರು. ಆದಾಗ್ಯೂ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು. ನಂತರ ಇಶಾನಿ ಔಟ್ ಆದರು. ಈಗ ಸ್ನೇಹಿತ್ ಗೌಡ ಕೂಡ ಎಲಿಮಿನೇಟ್ ಆಗಿದ್ದಾರೆ. ತುಕಾಲಿ ಸಂತೋಷ್ ಅವರು ತಂಡ ಬದಲಿಸಿ ಬಚಾವ್ ಆಗಿ ಫಿನಾಲೆಗೆ ತಲುಪಿದರು. ಇಷ್ಟೆಲ್ಲ ಆದ ಬಳಿಕ ವಿನಯ್ ಆದರೂ ಕಪ್ ಗೆಲ್ಲುತ್ತಾರೆ ಎಂದು ಊಹಿಸಿದ್ದರು. ಆದರೆ ಕೊನೆಗೆ ಕಾರ್ತಿಕ್ ಟ್ರೋಫಿಗೆ ಮುತ್ತಿಟ್ಟರು.