Site icon Vistara News

BBK Season 10: ಗಾದೆಗೆ ತಕ್ಕ ವ್ಯಕ್ತಿತ್ವ; ಸಂಗೀತಾ ಗರಂ!

The proverbial personality In bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಎರಡನೇ ವಾರ ಗೌರೀಶ್‌ ಹಾಗೂ ಭಾಗ್ಯಶ್ರೀ ಅವರಲ್ಲಿ ಯಾರು ಹೊರಗೆ ಹೋಗಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಮೂಲಗಳ ಪ್ರಕಾರ ಭಾಗ್ಯಶ್ರೀ ಅವರೇ ಹೊರಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಭಾಗ್ಯಶ್ರೀ ಅವರು ಸಖತ್‌ ಆ್ಯಕ್ಟಿವ್‌ ಆಗಿದ್ದರು, ಹೊರಗೆ ಹೋಗುವುದು ಡೌಟು ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನು ಈ ವಾರ ಸ್ಪರ್ಧಿಗಳು ಗಾದೆಗೆ ತಕ್ಕ ವ್ಯಕ್ತಿತ್ವವನ್ನು ನೋಡಿ ಮನೆಯ ಸದಸ್ಯರಿಗೆ ಬೋರ್ಡ್‌ ಹಾಕಬೇಕು. ಇದೀಗ ಈ ಪ್ರೋಮೊ ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ.

ಕಾರ್ತಿಕ್‌ ಗೌಡ ʻʻಉತ್ತರನ ಪೌರುಷ ಒಲೆಯ ಮುಂದೆʼʼಎನ್ನುವಂತಹ ಗಾದೆಯನ್ನು ತುಕಾಲಿ ಸಂತೋಷ್‌ ಅವರಿಗೆ ಹಾಕಿದ್ದಾರೆ. ಅವರ ಪೌರಷ ಏನೇ ಇದ್ದರೂ ಅವರ ತ್ರಿಮೂರ್ತಿಗಳ ನಡುವೆ ಅಷ್ಟೇ ಬೇರೆ ಎಲ್ಲಿಯೂ ನಡೆಯುವುದಿಲ್ಲʼʼಎಂದು ಹೇಳಿದರು. ತನಿಷಾ ಅವರು ʻʻಬೆಳ್ಳಗಿರುವುದೆಲ್ಲ ಹಾಲೆಲ್ಲʼʼ ಬೋರ್ಡ್‌ವನ್ನು ಡ್ರೋನ್‌ ಪ್ರತಾಪ್‌ಗೆ ಹಾಕಿದರು. ಕಳ್ಳನಿಗೊಂದು ಪಿಳ್ಳೆ ನೆವ ಬೋರ್ಡ್‌ವನ್ನು ನೀತು ಅವರು ಸಂಗೀತಾ ಅವರಿಗೆ ನೀಡಿದರು. ಸಂಗೀತಾ ಅವರು ಅಟೆನ್ಷನ್‌ಗೋಸ್ಕರ ವಿನಯ್‌ ಜತೆ ಜಗಳ ಮಾಡಿದ್ದರು ಎಂದು ಕಾರಣವನ್ನು ನೀಡಿದರು. ಇದಾದ ಬಳಿಕ ಈ ಕಾರಣಕ್ಕೆ ಸಂಗೀತಾ ಅವರು ನೀತಾ ಅವರ ಜತೆ ಗರಂ ಆದರು.

ಇದನ್ನೂ ಓದಿ: BBK Season 10: ಆನೆಗೆ ಬಾಲ ಬಿಡಿಸಿದ್ಯಾರು? ಹೂಂ ನಾ? ಊಹೂಂ ನಾ?

ಮೊದಲನೇ ವಾರ ಸ್ನೇಕ್‌ ಶ್ಯಾಮ್‌ ಮನೆಯಿಂದ ಹೊರಬಂದಾಗಿದೆ. ಎರಡನೇ ವಾರ ಒಟ್ಟು ಆರು ಮಂದಿ ನಾಮಿನೇಟ್ ಆಗಿದ್ದರು. ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ, ಗೌರೀಶ್ ಅಕ್ಕಿ ಮತ್ತು ಕಾರ್ತಿಕ್ ಮಹೇಶ್. ಇದೀಗ ಇಬ್ಬರು ಸ್ಪರ್ಧಿಗಳು ಸೇಪ್‌ ಆಗರುವ ಬಗ್ಗೆ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ರಿವೀಲ್‌ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ಹಾಗೂ ತುಕಾಲಿ ಸಂತು ಎಲಿಮಿನೇಟ್‌ ಬಿಸಿಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲಿಗೆ, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ ಹಾಗೂ ಗೌರೀಶ್ ಅಕ್ಕಿ ಮಧ್ಯೆ ಒಬ್ಬರು ಔಟ್‌ ಅಗುವುದು ಪಕ್ಕಾ ಆದಂತಾಗಿದೆ.

ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

Exit mobile version