Site icon Vistara News

BBK Season 10: ಈ ಸಲ ಕಪ್‌ ʻಡ್ರೋನ್‌ʼದೆ; ಪ್ರತಾಪ್‌ಗೆ ಕರುನಾಡು ಸಾಥ್‌; ಗೌರೀಶ್‌ ಅಕ್ಕಿ ಊಸರವಳ್ಳಿ ಅಂತೆ!

drone Pratap mems

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10) ಈಗಾಗಲೇ ಒಂದು ವಾರ ಪೂರ್ಣಗೊಳಿಸಿದೆ. ಪ್ರತಿ ಬಾರಿ ಬಿಗ್‌ ಬಾಸ್‌ ಶುರುವಾದಾಗ ಒಂದಲ್ಲ ಒಂದು ಸ್ಪರ್ಧಿಯ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಇದೀಗ ಈ ಸೀಸನ್‌ನಲ್ಲಿ ಡ್ರೋನ್‌ ಪ್ರತಾಪ್‌ ಪ್ರಮುಖ ಹೈಲೈಟ್‌. ಈಗಾಗಲೇ ಪ್ರೇಕ್ಷಕರು ʻʻಬಿಗ್‌ ಬಾಸ್‌ ಸೀಸನ್‌ 10ರ ವಿಜೇತ ಡ್ರೋನ್‌. ನಾವೆಲ್ಲ ಅವರಿಗೆ ವೋಟ್‌ ಹಾಕೋದು. ಡ್ರೋನ್‌ ಪ್ರತಾಪ್‌ ಅವರೇ ಗೆಲ್ಲಬೇಕುʼʼ ಎಂದು ಆಶಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಹಲವು ಟ್ರೋಲ್‌ ಪೇಜ್‌ಗಳು, ಮೀಮ್ಸ್‌ಗಳು ಡ್ರೋನ್‌ ಪರ ನಿಂತಿವೆ.

ಗೌರೀಶ್‌ ಅಕ್ಕಿ ಮೇಲೆ ಕೆಂಡಾಮಂಡಲ

ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮ್ಯಾಟಿಕ್ ಯಾರು? ಇನೋಸೆಂಟ್ ಯಾರು? ಎಂಬೆಲ್ಲ ಪ್ರಶ್ನೆಗಳು ಕಿಚ್ಚನ ಬಾಯಿಯಿಂದ ಬಂತು. ಆಗ ಗೌರೀಶ್‌ ಅಕ್ಕಿ ಅವರು ಡ್ರೋನ್‌ ಅವರು ಊಸರವಳ್ಳಿ ಎಂದರು. ಇದೀಗ ನೆಟ್ಟಿಗರು ಗೌರೀಶ್‌ ಅಕ್ಕಿ ಅವರನ್ನು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻʻಗೌರೀಶ್‌ ಅವರು ಮನೆಗೆ ಹೋದಾಗಿಂದ ಅದೇನ್ ಕೆಲ್ಸ ಮಾಡುತ್ತಿದ್ದಾರೋ ಗೊತ್ತಿಲ್ಲ ತಾನೊಬ್ಬ ಪತ್ರಕರ್ತ ಎನ್ನೋದನ್ನು ಬಿಟ್ಟು. ಡ್ರಾಮಾ ಮಾಡೋದನ್ನು ಚೆನ್ನಾಗಿ ಮಾಡ್ತಾ ಇದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಇನ್ನೊಬ್ಬರ ಬಗ್ಗೆ ಮಾತನಾಡುವಾಗ ನೀವ್ ಹೇಗಿದ್ದೀರ ಅಂತ ತಿಳ್ಕೊಳಿ ಮೊದ್ಲುʼʼಎಂದು ಕಮೆಂಟ್‌ ಮಾಡಿದ್ದಾರೆ. ಕೆಲವರು ಗೌರೀಶ್‌ ಅಕ್ಕಿಯವರೇ ದೊಡ್ಡ ಊಸರವಳ್ಳಿ ಎಂದು ಕಮೆಂಟ್‌ ಮಾಡಿದ್ದಾರೆ.

ಡ್ರೋನ್‌ ಪ್ರತಾಪ್‌ಗೆ ಸಾಥ್‌ ಕೊಟ್ಟ ಕರುನಾಡು

ತುಕಾಲಿ ಸಂತು, ಸ್ನೇಹಿತ್‌ ಮಾತಿನಿಂದ ಡ್ರೋನ್‌ ಪ್ರತಾಪ್‌ ಮನೆಯಲ್ಲಿ ಕಣ್ಣೀರು ಹಾಕುವಂತಾಯಿತು. ಇನ್ನು ಕೆಲ ನೆಟ್ಟಿಗರುʻʻ ತಪ್ಪು ಮಾಡೋದು ಸಹ ಆದ್ರೆ ಅವರು ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಬಂದಿದ್ದು, ಅವರ ವೈಯಕ್ತಿಕ ವಿಚಾರ ನಿಂದನೆ ಸರಿಯಲ್ಲʼʼ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೆಲವರು ʻʻಪ್ರತಾಪ್‌ ನಾವಿದ್ದಿವಿ ನೀವು ಧೈರ್ಯದಿಂದ ಆಟವಾಡಿ ಅಂತ ಬೆಂಬಲ ಸೂಚಿಸಿದ್ದಾರೆʼʼ.

ಇದನ್ನೂ ಓದಿ: BBK Season 10: ಮನೆಯ ಹೀರೊ, ವಿಲನ್, ಖಾಲಿ ಡಬ್ಬಾ ಯಾರ‍್ಯಾರು?

ಸೋಷಿಯಲ್‌ ಮೀಡಿಯಾದಲ್ಲಿ ಡ್ರೋನ್‌ ಸಖತ್‌ ಟ್ರೆಂಡ್‌

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಸ್ನೇಕ್‌ ಶ್ಯಾಮ್‌ ಮನೆಯಿಂದ ಹೊರಬಿದ್ದಿದ್ದಾಗಿದೆ. ಇದೀಗ ಎರಡನೇ ವಾರ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಸ್ಪರ್ಧಿಗಳು ಎದ್ದ ಕೂಡಲೇ ತಾವು ಕುಳಿತಲ್ಲೇ ಈ ಮನೆಯಲ್ಲಿ ಇರಲು ಅರ್ಹರಲ್ಲದ ಸದಸ್ಯರನ್ನು ತಿಳಿಸಬೇಕಿತ್ತು. ಸ್ಪರ್ಧಿಗಳು ನಾಮಿನೇಟ್‌ ಆದ ಕೂಡಲೇ ಮನೆಯಲ್ಲಿ ಸದಸ್ಯರ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಇಷ್ಟಾದರೂ ಇಂದು ಕೂಡ ಜನ ಮಾತ್ರ ಬೆಂಬಲಕ್ಕೆ ನಿಂತಿದ್ದು ಡ್ರೋನ್‌ ಪ್ರತಾಪ್‌ಗೆ.

ಕಲರ್ಸ್‌ ಕನ್ನಡ ಈ ಪ್ರೋಮೊ ಹಂಚಿಕೊಂಡಿದ್ದು ʻʻಡ್ರೋನ್ ಪ್ರತಾಪ್ ಫ್ಯಾನ್ಸ್ ಹಿಟ್ʼʼಎಂದು ಕಮೆಂಟ್‌ ಮಾಡಿದ್ದಾರೆ. ಕಾರ್ತಿಕ್ ಹಾಗೂ ಸಂಗೀತ ಸರಿಯಾಗಿ ಹೇಳಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಡ್ರೋನ್ ಪ್ರತಾಪ್‌ ಗೆಲ್ಲುತ್ತಾರೆ ಬಿಡುತ್ತಾರೆ ನನಗೆ ಗೊತ್ತಿಲ್ಲ ಆದರೆ ಟಾಪ್‌ 2 ಅಲ್ಲಿ ಇರ್ಬೇಕು ಅಷ್ಟೇʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻಜಗಳ ಮಾಡ್ಬಾರದು ಅಂತೀರಿ. ಎಲ್ಲರ ಸಮ್ಮುಖದಲ್ಲೇ ಜಗಳ ಹಚ್ತೀರಾ..? ಎಲ್ಲ ಬಿಗ್ ಬಾಸ್ ಮಹಿಮೆʼʼಎಂದು ಕಮೆಂಟ್‌ ಮಾಡಿದ್ದಾರೆ.

Exit mobile version