ಬೆಂಗಳೂರು: ಭಾನುವಾರದ ವೀಕೆಂಡ್ ಪಂಚಾಯಿತಿಯಲ್ಲಿ (BBK Season 10) ಹೆಚ್ಚಾಗಿ ತುಕಾಲಿ ಸಂತು ಅವರೇ ಹೈಲೈಟ್ ಆದರು. ಕಿಚ್ಚ ಸುದೀಪ್ ಕೂಡ ಈ ಸಂಚಿಕೆಯನ್ನು ಬಹಳ ತಮಾಷೆಯಾಗಿ ನಡೆಸಿಕೊಟ್ಟರು. ಆದರೆ ಕೆಲವು ಪ್ರೇಕ್ಷಕರು ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ʻನಾವು ಇನ್ನು ಮುಂದೆ ವೀಕೆಂಡ್ ಪಂಚಾಯಿತಿ ನೋಡಲ್ಲ’ ಎಂತಲೂ ಕಮೆಂಟ್ ಮಾಡಿದರು. ಇದರ ಜತೆಗೆ ತುಕಾಲಿ ಸಂತು ತಮಾಷೆ ಬಗ್ಗೆಯೂ ಚರ್ಚೆಗಳು ಆಗಿವೆ.
ಸಿರಿ ಟೀಸರ್ ಔಟ್!
ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸಿರಿ ಅವರಿಗೆ ʻʻಸಿರಿ ಅವರೇ ನಿಮ್ಮ ಬಗ್ಗೆ ಒಂದು ಟೀಸರ್ ಇದೆʼʼ ಎಂದು ತುಕಾಲಿ ಸಂತೋಷ್ ಅವರು ಸಿರಿ ಅವರನ್ನೂ ಟೀಸ್ ಮಾಡಿರುವ ವಿಡಿಯೊ ಪ್ಲೇ ಮಾಡಿದ್ದಾರೆ. ವಿಡಿಯೊದಲ್ಲಿ ತುಕಾಲಿ ಸಂತೋಷ್ ಅವರು ಈಶಾನಿ, ಮೈಕಲ್ ಅಜಯ್, ನಮ್ರತಾ ಗೌಡ, ವಿನಯ್ ಗೌಡ ಮುಂದೆ ಸಿರಿ ಹಾಗೂ ಭಾಗ್ಯಶ್ರೀ ಅವರ ಮಿಮಿಕ್ರಿ ಮಾಡಿದ್ದರು. ಆದರೆ ಇದು ಪ್ಲೇ ಆಗುತ್ತಿದ್ದಂತೆ ಭಾಗ್ಯಶ್ರೀ ನಕ್ಕರೆ, ಅವರ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು. ಆದರೆ ಈ ವಿಡಿಯೊ ಪ್ಲೇ ಆಗುವ ಮೊದಲು ಕಿಚ್ಚ ಅವರಿಗೆ ತುಕಾಲಿ ಸಂತೋಷ್ ಅವರು ಪ್ಲೇ ಮಾಡದಂತೆ ಬೇಡಿಕೊಂಡರು. ಇಷ್ಟೆಲ್ಲ ಆದ ಬಳಿಕ ಸಿರಿ ಅವರಿಗೆ ಕೈ ಮುಗಿದು ತುಕಾಲಿ ʻʻಹಾಗೇ ನೋಡಿಬೇಡಿ ಮೇಡಂ ಪ್ಲೀಸ್ʼʼ ಎಂದು ಮನವಿ ಕೂಡ ಮಾಡಿದ್ದರು.
ಇಡೀ ವಾರ ಕಳೆಯೋ ಪರಿಸ್ಥಿತಿ
ಇದು ಇಲ್ಲಿಗೆ ಮುಗಿದಿಲ್ಲ. ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ‘ತುಕಾಲಿ ಸ್ಟಾರ್’ ಸಂತು, ಸಿರಿ, ಭಾಗ್ಯಶ್ರೀಗೆ ಟಾಸ್ಕ್ ನೀಡಿದ್ದಾರೆ. ಸಿರಿ, ಭಾಗ್ಯಶ್ರೀ ಅವರು ದೂರದಲ್ಲಿ ಕಂಡರೂ ಕೂಡ ಹಾಗೆ ಎಸ್ಕೇಪ್ ಆಗುತ್ತಿದ್ದ ಸಂತು ಅವರಿಗೆ ಒಂದು ದಿನ ಇವರಿಬ್ಬರ ಜತೆ ಇರಬೇಕು, ಅಷ್ಟೇ ಅಲ್ಲದೆ ಇವರು ಮೂವರಿಗೆ ಒಂದು ಚೈನ್ ಹಾಕಲಾಗುತ್ತದೆ. ಇಡೀ ದಿನ ಒಟ್ಟಿಗೆ ಇರಬೇಕು ಎನ್ನುವುದು ಕೇಳಿ ಸಂತು ಅವರು ಸಿಕ್ಕಾಪಟ್ಟೆ ಟೆನ್ಷನ್ ಆದರು.
ಇದನ್ನೂ ಓದಿ: BBK Season 10: ಪ್ರತಾಪ್‌ಗೆ ಗೂಬೆ ಎಂದಿದಕ್ಕೆ ರಕ್ಷಕ್‌ಗೆ ಕಿಚ್ಚನ ಸ್ಪೆಷಲ್ ಟ್ರೀಟ್‌ಮೆಂಟ್!
ಇನ್ನು ತುಕಾಲಿ ಸಂತೂ ಕೂಡ ನನ್ನತ್ರ ಆಗೋಲ್ಲ ಎಂದು ಎಷ್ಟೇ ಗೋಗೆರೆದೂ ಕಿಚ್ಚ ಮಾತ್ರ ಅವರನ್ನು ಬಿಟ್ಟಿಲ್ಲ. ಒಂದು ನಿಮಿಷಗಳ ಕಾಲ ಭಾಗ್ಯಶ್ರೀ, ಸಿರಿ ಅವರನ್ನು ಸಹಿಸಿಕೊಳ್ಳೋಕೆ ಆಗೋಲ್ಲ ಎಂದ ತುಕಾಲಿ, ಇನ್ನು ಒಂದು ದಿನ ಹೇಗೆ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಬಿಗ್ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.