Site icon Vistara News

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Tukali imitate sangeetha sringeri

‘ಬಿಗ್‌ಬಾಸ್‌ ಮನೆಗೆ ‘ಚಾರ್ಲಿ’ ಬರ್ತಾನೆ ಎನ್ನುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದುವರೆಗೆ ಚಾರ್ಲಿ (BBK SEASON 10 ) ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ‘ಚಾರ್ಲಿ’ಗೆ ಸಿನಿಮಾದಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್, ಸಂಗೀತಾ ಶೃಂಗೇರಿ ನಾಯಿ ತರ ಆಡ್ತಿದ್ದಾರೆ!

ಇದೇನು ಇಷ್ಟು ಕೀಳುಭಾಷೆಯಲ್ಲಿ ಸ್ಪರ್ಧಿಯನ್ನು ಹೀಗಳೆಯುತ್ತಿದ್ದಾರೆ ಎಂದು ಕೋಪಿಸಿಕೊಳ್ಳಬೇಡಿ. ಇದು ಹೀಗಳೆಯಲು ಹೇಳಿದ್ದು ಖಂಡಿತ ಅಲ್ಲ. ಈ ಮಾತು ಅಕ್ಷರಶಃ ಸತ್ಯ! ಸಂಗೀತಾ ಅವರು ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಾಯಿಯ ಹಾಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಇದೇನೂ ಹೊಸ ಸಮಸ್ಯೆ ಎನ್ನಬೇಡಿ. ಇದು ಬಿಗ್‌ಬಾಸ್ ಅವರೇ ಮನೆಯ ಸ್ಪರ್ಧಿಗಳಿಗೆ ನೀಡಿದ ಹೊಸ ಟಾಸ್ಕ್‌! ‘ಬಿಗ್‌ಬಾಸ್‌ ಸೂಚಿಸಿದ ಚಟುವಟಿಕೆಗಳನ್ನು ಮನೆಯ ಸ್ಪರ್ಧಿಗಳು ಮಾಡಬೇಕು’ ಎಂಬುದು ಈ ವಾರದ ಮೊದಲ ಟಾಸ್ಕ್‌. ಇದರ ಭಾಗವಾಗಿಯೇ ಸಂಗೀತಾ ಅಳುತ್ತಿರುವ ನಾಯಿಯ ಹಾಗೆ ಆಡುತ್ತಿದ್ದಾರೆ. ತುಕಾಲಿ ಸಂತೋಷ್ ಕೂಡ ನಾಯಿಯ ಹಾಗೆ ಆಡುತ್ತ ಅವರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: BBK SEASON 10: ʻಎಲ್ಲೇ ಹೋದ್ರೂ ಗುಂಡಿ ತೋಡೇ ಬರೋದು; ಸಂಗೀತಾಳ ಅನುಕರಣೆ ಮಾಡಿದ ತುಕಾಲಿ!

ಅವಿನಾಶ್‌ ನಾಗಿಣಿಯ ಹಾಗೆ ಆಡುತ್ತಿರುವುದು, ಕಾರ್ತಿಕ್ ಪೆಂಗ್ವಿನ್ ಹಾಗೆ ಕುಪ್ಪಳಿಸುತ್ತಿರುವುದೆಲ್ಲವೂ ಪ್ರೋಮೊದಲ್ಲಿ ಸೆರೆಯಾಗಿದೆ. ಈ ತಮಾಷೆಯ ಟಾಸ್ಕ್‌ಗೆ ಮನೆಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಿದ್ದಾರೆ.
ವಾರದ ಆರಂಭ ಭರಪೂರ ನಗೆಯೊಂದಿಗೆ ಆರಂಭಗೊಂಡಿದೆ.

ಈ ನಗೆಯು ಕೋಪದ ಹೊಗೆಯಾಗಿ ಬದಲಾಗಲು ಜಾಸ್ತಿ ಹೊತ್ತೇನೂ ಬೇಕಾಗಿಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳುವುದೇ ಕಷ್ಟ.

Exit mobile version