Site icon Vistara News

BBK SEASON 10: ಮುರಿದುಬಿತ್ತಾ ಸಂತು-ಪಂತು ಸ್ನೇಹ?

Tukali Santhosh And Varthur Santhosh Friendship

ಬೆಂಗಳೂರು: ʻಬಿಗ್‌ ಬಾಸ್‌ʼ ಸೀಸನ್‌ 10 (BBK SEASON 10) ಹದಿನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕೆಲವೇ ದಿನಗಳಲ್ಲಿ ʻಬಿಗ್‌ ಬಾಸ್‌ʼ ಫಿನಾಲೆ ನಡೆಯುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ತುಕಾಲಿ ಸಂತು ಹಾಗೂ ವರ್ತೂರ್‌ ಸಂತೋಷ್‌ ಈ ಸೀಸನ್‌ನ ಕಿಲಾಡಿ ಜೋಡಿ ಎಂದರೆ ತಪ್ಪಿಲ್ಲ. ಸದಾ ಒಬ್ಬರಿಗೊಬ್ಬರು ಸಾಥ್‌ ಕೊಡುತ್ತಿದ್ದ ಜೋಡಿ ಮಧ್ಯೆ ವೈಮನಸ್ಸು ಉಂಟಾಗಿದೆ. ಇದೀಗ ಈ ಇಬ್ಬರ ಗೆಳೆತನ ಮುರಿದು ಬಿದ್ದಂತಿದೆ. ಟಾಸ್ಕ್ ನಿಂದ ವರ್ತೂರು ಸಂತು, ತುಕಾಲಿಯನ್ನು ಹೊರಗಿಟ್ಟಿದ್ದೇ ಇದಕ್ಕೆ ಕಾರಣವಾಗಿದೆ.

ʻʻಟಾಸ್ಕ್‌ನಿಂದ ಯಾರನ್ನು ಹೊರಗೆ ಇಡುತ್ತೀರಿ?ʼʼಎಂದು ಬಿಗ್‌ ಬಾಸ್‌ ವರ್ತೂರ್‌ ಸಂತೋಷ್‌ಗೆ ಕೇಳಿದ್ದಾರೆ. ಅದಕ್ಕೆ ವರ್ತೂರ್‌ ಅವರು ತುಕಾಲಿ ಅವರನ್ನು ಹೊರಗಿಟ್ಟರು. ಇದಾದ ಬಳಿಕ ತುಕಾಲಿ ಅವರು ವರ್ತೂರ್‌ ಅವರ ಈ ನಿರ್ಧಾರಕ್ಕೆ ಶಾಕ್‌ ಆದರು. ವರ್ತೂರ್‌ ಬಳಿ ತುಕಾಲಿ ʻʻಎಲ್ಲಿ ಸಿಕ್ತು ಫ್ರೆಂಡ್‌ಶಿಪ್‌ಗೆ ಬೆಲೆ?ʼʼಎಂದು ಕೇಳಿದ್ದಾರೆ. ವರ್ತೂರ್‌ ಊಟ ಮಾಡುತ್ತಿರುವಾಗ ತುಕಾಲಿ ಸಮಾಧಾನ ಪಡಿಸಲು ಮತ್ತೆ ಬಂದಾಗ ವರ್ತೂರ್‌ ಕೂಡ ಗರಂ ಆದರು. ʻʻನಿನ್ನ ಮಾತುಗಳನ್ನು ಕೇಳುವುದಕ್ಕೆ ಆಗಲ್ಲ. ನೀನು ನೀನಾಗಿರು. ನಾನು ನಾನಾಗಿರ್ತೀನಿʼʼಎಂದಿದ್ದಾರೆ. ತುಕಾಲಿಯ ಮಾತಿನಿಂದ ವರ್ತೂರು ಬೇಸರ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಏನೇನಾಗಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ʻʻನೀನು ಹೇಳ್ಕೊಟ್ಟೇ ತಿಳ್ಕೋಬೇಕಾಗಿಲ್ಲ’ ಕಾರ್ತಿಕ್‌ಗೆ ತನಿಷಾ ಅವಾಜ್‌!

`ನಾಮಿನೇಷನ್‌ʼನಿಂದ ಪಾರಾದ ಡ್ರೋನ್‌ ಪ್ರತಾಪ್‌

ಈ ವಾರ ನಾಮಿನೇಷನ್‌ ಪ್ರಕ್ರಿಯೆ ವಿಭಿನ್ನವಾಗಿ ನಡೆದಿದೆ. ಈ ವಾರ ಕಾರ್ತಿಕ್, ವಿನಯ್, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತು ಹಾಗೂ ನಮ್ರತಾ ನಾಮಿನೇಟ್‌ ಆಗಿದ್ದಾರೆ. ಈ ವಾರದ ನಾಮಿನೇಷನ್‌ನಲ್ಲಿ ʻಕ್ಯಾಪ್ಟನ್ʼ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಬಚಾವ್‌ ಆಗಿದ್ದಾರೆ. ಸಂಗೀತಾ ಅವರು ಡ್ರೋನ್‌ ಪ್ರತಾಪ್‌ ಅವರನ್ನು ನೇರವಾಗಿ ಸೇಫ್‌ ಮಾಡಿದ್ದರು. ಕಳೆದ ಕೆಲ ವಾರಗಳಿಂದ ನಮ್ರತಾ ನಾಮಿನೇಟ್‌ ಆಗಿರಲಿಲ್ಲ. ಇದೀಗ ನಾಮಿನೇಟ್‌ ಆಗಿರುವುದಕ್ಕೆ ಕಣ್ಣೀರು ಸುರಿಸಿದ್ದಾರೆ.

ಈ ಬಾರಿಯ ಟಾಸ್ಕ್‌ನಲ್ಲಿ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಸ್ಪರ್ಧಿ ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್‌ ಪಡೆಯುತ್ತಾರೆ ಎಂದು ಬಿಗ್‌ಬಾಸ್‌ ತಿಳಿಸಿದ್ದಾರೆ. ಇದನ್ನು ʼಟಿಕೆಟ್‌ ಟು ಫಿನಾಲೆʼ ಎಂದು ಕರೆಯಲಾಗಿದೆ. ಮೊದಲ ಆಟವನ್ನು ನಮ್ರತಾಗೆ ಕೊಡಲಾಗಿತ್ತು. ಅದಕ್ಕೆ ಮೂವರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಸಂಗೀತಾ, ವರ್ತೂರು, ಪ್ರತಾಪ್ ನಮ್ರತಾಗೋಸ್ಕರ ಆಡಿದರು. ಮೂರನೇ ಹಂತ ಬರುವಷ್ಟರಲ್ಲಿ ನಮ್ರತಾ, ಸಂಗೀತಾ, ಪ್ರತಾಪ್ ಔಟ್ ಆಗಿದ್ದರು. ವರ್ತೂರು ಸಂತೋಷ್ ಉಳಿದಿದ್ದರು. ಇನ್ನು ಒಂದು ವಾರದ ತನಕ ಆಟವಾಡುವವರು ತೆಗೆದುಕೊಳ್ಳುವ ಅಂಕದ ಮೇಲೆ ನಿರ್ಧಾರವಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version