Site icon Vistara News

BBK SEASON 10: ತುಕಾಲಿ ಚಡ್ಡಿ ಉದುರಿತು; ಕಾರ್ತಿಕ್-ನಮ್ರತಾಗೆ ಹುಡುಗಾಟ, ಸಂತೋಷ್‌ಗೆ ಪ್ರಾಣಸಂಕಟ!

Tukali santhosh and namratha, karthik mahesh

ಬೆಂಗಳೂರು: ವಿನಯ್‌ ಟೀಮ್‌ನಿಂದ (BBK SEASON 10) ಹೊರ ಬಂದ ಬಳಿಕ ತುಕಾಲಿ ಸಂತು ತಮ್ನನ್ನು ತಾವು ಪ್ರೂವ್‌ ಮಾಡಿಕೊಂಡು ಬರುತ್ತಿದ್ದಾರೆ. ಮೂರು ಬಾರಿ ಉತ್ತಮ ಪಟ್ಟವನ್ನು ಪಡೆದಿದ್ದಾರೆ. ಈ ವಾರ ಸ್ಕೂಲ್‌ ಟಾಸ್ಕ್‌ನಲ್ಲಿಯೂ ಭರಪೂರ ಮನರಂಜನೆಯನ್ನು ನೀಡಿದ್ದಾರೆ ತುಕಾಲಿ. ಇದೀಗ ಕಾರ್ತಿಕ್-ನಮ್ರತಾ ಹುಡುಗಾಟದಿಂದ, ತುಕಾಲಿಗೆ ಪ್ರಾಣಸಂಕಟವಾಗಿದೆ. ತುಕಾಲಿ ಸಂತೋಷ್ ಅವರ ಚಡ್ಡಿಯನ್ನು ನಮ್ರತಾ ಹಾಗೂ ಕಾರ್ತಿಕ್ ಎಳೆದಿದ್ದಾರೆ. ಟಸ್ಸು ಪುಸ್ಸು ಎಂದು ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ ತುಕಾಲಿ ಸಂತೋಷ್ ಚಡ್ಡಿ ಜಾರಿದ ಕೂಡಲೇ ಕೈಯಿಂದ ಹಿಡಿದುಕೊಂಡಿದ್ದಾರೆ. ಚಡ್ಡಿ ಎಳೆದ ಬಳಿಕ ಕಾರ್ತಿಕ್ ಹಾಗೂ ನಮ್ರತಾ ಅಲ್ಲಿಂದ ಓಡಿ ಹೋಗಿ ಬಿದ್ದು ಬಿದ್ದು ನಕ್ಕಿದ್ದಾರೆ.

ತುಕಾಲಿ ಸಂತು ಅವರು ಬಿಗ್‌ ಬಾಸ್‌ ಅವರಿಂದ ಮೈಕ್ ಸರಿಯಾಗಿ ಧರಿಸದೇ ಇದ್ದಾಗ ಹಲವು ಬಾರಿ ಉಗಿಸಿಕೊಂಡಿದ್ದಾರೆ. ತುಕಾಲಿ ಸಂತೋಷ್ ಇನ್ಮುಂದೆ ನಾನು ಬಿಗ್ ಬಾಸ್ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಮೈಕ್ ಧರಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಇಂಗ್ಲೀಶ್‌ನಲ್ಲಿ ಬ್ಯೂಟಿಫುಲ್ ಲೇಡಿ ಇನ್ ರೈಟ್ ಸೈಡ್, ಬ್ಯಾಡ್‌ ಬಾಯ್ ಇನ್ ಲೆಫ್ಟ್ ಸೈಡ್ ಎಂದು ಹೇಳಿ ಮನೆಯವರ ನಗುವಿಗೆ ಕಾರಣರಾಗಿದ್ದಾರೆ. ತಮ್ಮ ಬಗ್ಗೆ ಇಂಗ್ಲೀಶ್‌ನಲ್ಲಿ ತುಕಾಲಿ ಹೊಗಳಿಕೊಳ್ಳುತ್ತಿರುವಾಗ, ಕಾರ್ತಿಕ್‌ ಹಾಗೂ ನಮ್ರತಾ ಅವರು ತುಕಾಲಿ ಅವರ ಚಡ್ಡಿಯನ್ನು ಎಳೆದಿದ್ದಾರೆ.

ತುಕಾಲಿ ಸಂತೋಷ್ ಕಣ್ಣು ಮುಚ್ಚಿಕೊಂಡು ʻಬ್ರಿತ್ ಇನ್ ಬ್ರಿತ್ ಔಟ್ʼ ಎಂದು ಹೇಳುವ ವೇಳೆ ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ಸಹ ತುಕಾಲಿ ಸಂತೋಷ ಅವರ ಚಡ್ಡಿಯನ್ನ ಎಳೆದಿದ್ದಾರೆ. ತುಕಾಲಿ ಸಂತೋಷ್ ಚಡ್ಡಿ ಜಾರಿದ ಕೂಡಲೇ ಕೈಯಿಂದ ಹಿಡಿದುಕೊಂಡಿದ್ದಾರೆ. ಇನ್ನು ತುಕಾಲಿ ಸಂತೋಷ್ ಅವರು ಎಂದ ಕೂಡಲೇ ಕಾರ್ತಿಕ್ ಹಾಗೂ ನಮ್ರತಾ ಅಲ್ಲಿಂದ ತೆರಳಿದ್ದು ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: BBK SEASON 10: ಸಂಗೀತಾ ಮೆಂಟಲಿ ತುಂಬಾ ಹಿಂಸೆ ಕೊಡ್ತಾರೆ; ಕಣ್ಣೀರಿಟ್ಟ ನಮ್ರತಾ!

ಈ ವಾರ ಉತ್ತಮ ತುಕಾಲಿ

ಈ ಇಡೀ ವಾರ ಬಿಗ್‌ಬಾಸ್ (BBK SEASON 10೦ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆಯಿತು. ಈ ವಾರ ಹೆಚ್ಚಾಗಿ ನಕ್ಕು ನಲಿಸಿದ್ದು ತುಕಾಲಿ. ಆದರೆ ಟಾಸ್ಕ್‌ ವೇಳೆ ಹೆಚ್ಚು ಕಾಮಿಡಿ ಮಾಡಿದ ತುಕಾಲಿ ಸಂತು ಈ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಇನ್ನೂ ಪವಿ ಪೂವಪ್ಪ ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ.ಸ್ಕೂಲ್‌ ಟಾಸ್ಕ್‌ನಲ್ಲಿ ವಿದ್ಯಾರ್ಥಿಯಾಗಿ ತುಕಾಲಿ ಸಂತು ಎಲ್ಲರನ್ನೂ ನಕ್ಕಿ ನಲಿಸಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾಗಿ ತುಕಾಲಿ ಸಂತು ಎಲ್ಲರನ್ನೂ ಎಂಟರ್‌ಟೇನ್‌ ಮಾಡಿದ್ದರು

ಹೀಗಾಗಿ ಈ ವಾರ ಉತ್ತಮರಾಗಿ ಹೊರಹೊಮ್ಮಿದ್ದರು. ಎರಡನೇ ಬಾರಿ ಮನೆಯಲ್ಲಿ ತುಕಾಲಿ ಅವರು ಉತ್ತಮರಾಗಿದ್ದಾರೆ. ಈ ವಾರ ಸಿರಿ, ಸಂಗೀತಾ, ಕಾರ್ತಿಕ್, ಪವಿ ಪೂವಪ್ಪ ಮುಂತಾದವರು ತುಕಾಲಿ ಸಂತುಗೆ ‘ಉತ್ತಮ’ ಎಂದರು. ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್‌ ಅನ್ನು ಇತರೆ ಸ್ಪರ್ಧಿಗಳಿಗೆ ತುಕಾಲಿ ಸಂತು ಡೆಡಿಕೇಟ್ ಮಾಡಿದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version