Site icon Vistara News

BBK Season 10: ತುಕಾಲಿ ಸಂತೋಷ್‌ ತಮಾಷೆ, ಗೌರೀಶ್‌ ಧ್ವನಿ, ಸಿರಿ ಪರ್ಫಾರ್ಮೆನ್ಸ್ ಬಗ್ಗೆ ಪ್ರಥಮ್ ಕ್ಲಾಸ್‌!

Tukali Santhosh, gaurish akki , Siri Pratham in bigg boss 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10)ಕ್ಕೆ ಬಾಸ್‌ ಸೀಸನ್‌ 4ರ ವಿಜೇತ ಒಳ್ಳೆ ಹುಡುಗ ಪ್ರಥಮ್‌ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್‌ ಪ್ರಥಮ್‌ ಆಗಿ ಇನ್‌ ಚಾರ್ಚ್‌ ತೆಗೆದುಕೊಂಡಿದ್ದಾರೆ. ಇದೀಗ ಪ್ರಥಮ್‌ ಬರುತ್ತಲೇ ʻʻನಾನು ನಿಮ್ಮ ಜತೆ ಬಿಗ್ ಬಾಸ್ ಆಟ ಆಡೋಕೆ ಬಂದಿಲ್ಲ. ಟಾಸ್ಕ್ ಮಾಡಿಸೋಕೆ ಬಂದಿದ್ದೇನೆʼʼಎಂದು ತುಕಾಲಿ ಸಂತೋಷ್‌ಗೆ ವಾರ್ನಿಂಗ್‌ ಕೊಡವಂತಿದೆ. ಇದರ ಬೆನ್ನಲ್ಲೇ ಇನ್ನೊಂದು ಪ್ರೋಮೊ ವಾಹಿನಿ ಹಂಚಿಕೊಂಡಿದ್ದು, ಕೆಲವು ಸ್ಪರ್ಧಿಗಳಿಗೆ ಪ್ರಥಮ್‌ ಟಿಪ್ಸ್‌ ಕೊಡುವಂತಿದೆ. ತುಕಾಲಿ ಸಂತೋಷ್‌, ಸಿರಿ, ಗೌರೀಶ್‌ ಅಕ್ಕಿಗೆ ಸಲಹೆ ನೀಡಿರುವ ಪ್ರೋಮೊ ಇದೀಗ ಔಟ್‌ ಆಗಿದೆ.

ತುಕಾಲಿ ಸಂತೋಷ್‌ಗೆ ʻʻಯಾವುದು ತಮಾಷೆ? ಯಾವುದು ಸೀರಿಯೆಸ್‌ ಎನ್ನುವುದೇ ಗೊತ್ತಾಗುತ್ತಿಲ್ಲ. ಒಂದು ಸಲ ಸೀರಿಯೆಸ್‌ ಆಗಿ ಎಲಿಮಿನೇಟ್‌ ಆದರೆ ಆಗ ಬಾಯ್‌ ಬಡ್ಕೋತ್ತೀರಾʼʼ ಎಂದು ಪ್ರಥಮ್‌ ಹೇಳಿದರು. ಸಿರಿ ಅವರಿಗೆ ʻʻಸಿರಿ ಅವರು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸೂಪರ್‌ ಸ್ಟಾರ್‌. ಅಂದಮೇಲೆ ಹಿರೋಯಿನ್‌ ಆಗೇ ಇರಬೇಕಲ್ವಾ? ಬಿಗ್‌ ಬಾಸ್‌ ಮನೆಯಲ್ಲಿ ಏಕೆ ಸಣ್ಣ ಪಾತ್ರ ಮಾಡುತ್ತಿದ್ದೀರಾ? ಎಂದು ಕೇಳಿದ್ದಾರೆ. ಗೌರೀಶ್‌ ಅಕ್ಕಿ ಅವರಿಗೆ ʻʻನೀವು ಪತ್ರಿಕೋದ್ಯಮ ಮಾಡಿದವರು. ನೀವು ಧ್ವನಿಯಾಗಿದ್ದೀರಾ. ಎಲ್ಲಾದರೂ ನೀವು ಹಾಕಿಕೊಂಡ ಮೈಕ್‌ ಸರಿ ಇಲ್ಲ ಅಂದರೆ, ಬಿಗ್‌ ಬಾಸ್‌ ಅವರು ಮೈಕ್‌ ಸರಿಪಡಿಸಿಕೊಳ್ಳಿ ಎನ್ನುತ್ತಾರೆ. ಆದರೆ ನಿಮಗೆ ಈಗ ಬಿಗ್‌ ಬಾಸ್‌ ಹೇಳಲ್ಲ. ಏಕೆ ಗೊತ್ತ? ನಿಮ್ಮ ಧ್ವನಿಯೇ ಇಲ್ಲʼʼ ಎಂದರು. ಈ ರೀತಿ ಲಾರ್ಡ್ ಪ್ರಥಮ್ ಕೆಲವು ಸ್ಪರ್ಧಿಗಳಿಗೆ ಟಿಪ್ಸ್‌ ಕೊಟ್ಟಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ.

ಈ ಪ್ರೋಮೊ ಔಟ್‌ ಆಗುತ್ತಿದ್ದಂತೆ ʻʻಲಾರ್ಡ್ ಪ್ರಥಮ್ ಸರ್ ಒಂದು ವಾರ ಇದ್ದು ಹೋಗಲಿ.. ಬಿಗ್ ಬಾಸ್ ಅಲ್ಲಿ ಎಮರ್ಜೆನ್ಸಿ ಡಿಕ್ಲೆರ್ ಮಾಡಿ. ಆಗ ಮಜಾ ಬರುತ್ತೆ. ಹಳೆ ಬಿಗ್ ಬಾಸ್ ಒಮ್ಮೆಗೆ ನೆನಪಾಗುತ್ತೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ತುಕಾಲಿ ಸಂತು ಹಾಗೂ ಸ್ನೇಹಿತ್ ಅವರಿಗೆ ಬುದ್ಧಿ ಹೇಳಿ ಎಂತಲೂ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಗುರಾಯಿಸೋದೆಲ್ಲ ಬೇಡ, ತಲೆ ಬಗ್ಗಿಸಿ ಎಂದು ಖಡಕ್ ಎಂಟ್ರಿ ಕೊಟ್ಟ ಲಾರ್ಡ್‌ ಪ್ರಥಮ್‌!

ಈ ವಾರ ನಾಮಿನೇಟ್ ಆದವರು ಯಾರು?

ಆರು ಅಸಮರ್ಥರಿಗೆ ನಾಮಿನೇಶನ್‌ ಮಾಡುವ ಅಧಿಕಾರ ಬಿಗ್‌ ಬಾಸ್‌ ನೀಡಿರಲಿಲ್ಲ. ಹನ್ನೊಂದು ಸಮರ್ಥರಷ್ಟೇ ನಾಮಿನೇಶನ್‌ ಮಾಡಬೇಕಿತ್ತು. ಅಸಮರ್ಥರಲ್ಲಿ ಅತಿ ಹೆಚ್ಚು ಬಾರಿ ನಾಮಿನೇಟ್‌ ಆದವರು, ಡ್ರೋನ್‌ ಪ್ರತಾಪ್‌, ಸಂತೋಷ್‌ , ಕಾರ್ತಿಕ್‌ ಗೌಡ, ತನಿಷಾ ಕುಪ್ಪುಂಡ. ನಾಮಿನೇಶನ್‌ನ ಎರಡನೇ ಹಂತದ ಸಮರ್ಥರ ವಿಭಾಗದಲ್ಲಿ ಸ್ನೇಕ್‌ ಶ್ಯಾಮ್‌, ಮೈಕಲ್‌, ನೀತು, ಸಿರಿ ನಾಮಿನೇಟ್ ಆದರು.ಬಿಗ್‌ ಬಾಸ್‌ ಜಿಯೋ ಸಿನಿಮಾಸ್​ ಹಾಗೂ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Exit mobile version