Site icon Vistara News

BBK SEASON 10: ಸಿರಿ ಏನಾದ್ರೂ ಫೈನಲ್‌ಗೆ ಬಂದು ಬಿಟ್ರೆ? ನಮ್ರತಾ, ತುಕಾಲಿಗೆ ಫುಲ್‌ ಟೆನ್ಷನ್‌ !

Tukali Santhu And Namratha Speaks About Siri

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಕೆಲವು ಸ್ಪರ್ಧಿಗಳು ತಾಳ್ಮೆಯನ್ನು ಮೀರಿ, ಅಗ್ರೆಸಿವ್‌ ಆಗಿ ಆಟ ಆಡಿದರೆ, ಸಿರಿ ಅವರು ಮಾತ್ರ ಯಾವುದೇ ವಿವಾದದಲ್ಲಿ ಸಿಲುಕದೇ ಆಟ ಆಡುತ್ತಿದ್ದಾರೆ. 10 ವಾರಗಳು ಉರುಳಿದರೂ ಸಿರಿ ಇನ್ನೂ ‘ಬಿಗ್ ಬಾಸ್‌’ ಮನೆಯಲ್ಲಿ ಗಟ್ಟಿಯಾಗಿ ಇದ್ದಾರೆ. ಹೀಗೇ ಇದ್ದರೆ, ಸಿರಿ ಫೈನಲ್‌ವರೆಗೂ ಬಂದುಬಿಡ್ತಾರಾ? ಎಂಬ ಅನುಮಾನ ತುಕಾಲಿ ಸಂತು ಹಾಗೂ ನಮ್ರತಾಗೆ ಕಾಡುತ್ತಿದೆ. ಈ ಬಗ್ಗೆ ನಮ್ರತಾ ಹಾಗೂ ತುಕಾಲಿ ಚರ್ಚೆಗಳನ್ನು ಮಾಡಿದ್ದಾರೆ.

ಈ ವಾರ ಬಿಗ್‌ ಬಾಸ್‌ನಲ್ಲಿ ಆರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಜತೆಗೆ ಸಿರಿ ಅವರೂ ನಾಮಿನೇಟ್‌ ಆಗಿದ್ದಾರೆ. ತುಕಾಲಿ ಹಾಗೂ ನಮ್ರತಾ ಮಾತನಾಡಿ, ತುಕಾಲಿ ಅವರು ನಮ್ರತಾಗೆ ಈ ವಾರ ಯಾರು ಹೋಗ್ತಾರೆ? ಎಂದು ಕೇಳಿದರು. ನಮ್ರತಾ ಅವರು ಸಿರಿ, ಮೈಕಲ್, ಪವಿ ಪೂವಪ್ಪ ಈ ಮೂರು ಜನರಲ್ಲಿ ಒಬ್ಬರು ಎಂದರು. ತುಕಾಲಿ ಮಾತನಾಡಿ ʻʻಮತ್ತೆ ನಿಮ್ಮ ಟೀಮ್‌ಗೆ ಬಂತಾ.? ಕೊನೆಯಲ್ಲಿ ಯಾರು ಉಳಿಯುತ್ತಾರೆ?ʼʼಎಂದು ಕೇಳಿದರು. ನಮ್ರತಾ ಇದಕ್ಕೆ ʻʻಎಲ್ಲಾ ಹೋಗಿಬಿಡುತ್ತಾರೆ. ನಮ್ಮ ಟೀಮ್‌ನಿಂದಾನೇ ಜಾಸ್ತಿ ಹೋಗಿರೋದು ಇಲ್ಲಿಯವರೆಗೂ. ನಿಮ್ಮ ಪ್ರಕಾರ ಯಾರು ಹೋಗಬಹುದು?ʼʼಎಂದಿದ್ದಾರೆ. ನನ್ನ ಪ್ರಕಾರ ಸಿರಿ ಎಂದರು ತುಕಾಲಿ. ʻನಾನು ಹಾಗೆ ಅಂದುಕೊಂಡು, ಅಂದುಕೊಂಡೇ 3 ವಾರದಿಂದ ಅವರು ಹೋಗ್ತಾ ಇಲ್ಲʼʼ ಎಂದರು ನಮ್ರತಾ. ಫೈನಲ್‌ಗೆ ಬಂದು ಬಿಡ್ತಾರಾ ಅವರು?ಎಂದರು ತುಕಾಲಿ. ʻಹೀಗೆ ಆಡಿ ಆಡಿ ಬರಬಹುದುʼ ಎಂದರು ನಮ್ರತಾ.

ಇದನ್ನೂ ಓದಿ: BBK SEASON 10: ಪ್ರತಾಪ್‌ಗೆ ಸ್ವಂತ ಪರ್ಸನಾಲಿಟಿ ಇಲ್ಲ, ಸಿಂಪಥಿಯಲ್ಲಿ ಬದುಕೋನು ಎಂದ ಮೈಕಲ್‌!

ಕಲಿತಿರೋದಕ್ಕೂ, ಆಡ್ತಿರೋದಕ್ಕೂ ಸಂಬಂಧ ಇಲ್ಲ

ಸಂಗೀತಾ ಅವರು ಸ್ಕೂಲ್‌ ಟಾಸ್ಕ್‌ನಲ್ಲಿ ‘’ಉಳಿದಿರೋದು 30 ದಿನ. ಎಲ್ಲರೂ ಚೆನ್ನಾಗಿರೋಣ’’ ಎಂದಿದ್ದರು. ಈ ಬಗ್ಗೆ ಕೂಡ ಇಬ್ಬರೂ ಮಾತನಾಡಿಕೊಂಡಿದ್ದರು. ತುಕಾಲಿ ಮಾತನಾಡಿ ʻʻಸಂಗೀತಾ ಎಲ್ಲರ ಜತೆ ಚೆನ್ನಾಗಿರುತ್ತೇನೆ ಅಂತಾರೆ. ಆಮೇಲೆ ನಾಟಕ, ಹೀಗೆ ಯಾಕೆ ಆಡುತ್ತಾರೋʼʼಎಂದರು. ನಮ್ರತಾ ಮಾತನಾಡಿ ʻʻಅವರಿಗೆ ಹಾಗಿರಲು ಸಾಧ್ಯನೇ ಇಲ್ಲ. ಜಾಸ್ತಿ ನೆಗೆಟಿವಿಟಿ ತುಂಬಿಕೊಂಡಿರೋದೇ ಅವರು. ಆಧ್ಯಾತ್ಮದ ಬಗ್ಗೆ ಅವರಿಗೆ ಜಾಸ್ತಿ ಜ್ಞಾನ ಇದೆ ಅಂತ ಕೊಟ್ಟಿದ್ದು. ಅವರು ಕಲಿತಿರೋದಕ್ಕೂ, ಆಡ್ತಿರೋದಕ್ಕೂ ಸಂಬಂಧ ಇಲ್ಲʼʼಎಂದಿದ್ದಾರೆ.

ಈ ವಾರ ಮೈಕಲ್, ಪವಿ ಪೂವಪ್ಪ, ಡ್ರೋನ್ ಪ್ರತಾಪ್, ಸಂಗೀತಾ ಹಾಗೂ ವಿನಯ್‌ ನಾಮಿನೇಟ್‌ ಆಗಿದ್ದಾರೆ. ಮೈಕಲ್‌ ಕೂಡ ಈ ವಾರ ಬಹಳ ಅಗ್ರೆಸಿವ್‌ ಆಡಿದ ಕಾರಣ ಮನೆಯಿಂದ ಹೊರ ಹೋಗುತ್ತಾರೆ ಎಂದು ವೀಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿಸುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version