Site icon Vistara News

BBK SEASON 10: ಈ ವಾರ ಉತ್ತಮ ತುಕಾಲಿ, ಜೈಲು ಸೇರಿದ ಪವಿ ಪೂವಪ್ಪ!

Tukali Santhu Becomes Best Performer

ಬೆಂಗಳೂರು: ಈ ಇಡೀ ವಾರ ಬಿಗ್‌ಬಾಸ್ (BBK SEASON 10೦ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆಯಿತು. ಈ ವಾರ ಹೆಚ್ಚಾಗಿ ನಕ್ಕು ನಲಿಸಿದ್ದು ತುಕಾಲಿ. ಆದರೆ ಟಾಸ್ಕ್‌ ವೇಳೆ ಹೆಚ್ಚು ಕಾಮಿಡಿ ಮಾಡಿದ ತುಕಾಲಿ ಸಂತು ಈ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಇನ್ನೂ ಪವಿ ಪೂವಪ್ಪ ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ.

ಸ್ಕೂಲ್‌ ಟಾಸ್ಕ್‌ನಲ್ಲಿ ವಿದ್ಯಾರ್ಥಿಯಾಗಿ ತುಕಾಲಿ ಸಂತು ಎಲ್ಲರನ್ನೂ ನಕ್ಕಿ ನಲಿಸಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾಗಿ ತುಕಾಲಿ ಸಂತು ಎಲ್ಲರನ್ನೂ ಎಂಟರ್‌ಟೇನ್‌ ಮಾಡಿದ್ದರು. ಹೀಗಾಗಿ ಈ ವಾರ ಉತ್ತಮರಾಗಿ ಹೊರಹೊಮ್ಮಿದ್ದರು. ಎರಡನೇ ಬಾರಿ ಮನೆಯಲ್ಲಿ ತುಕಾಲಿ ಅವರು ಉತ್ತಮರಾಗಿದ್ದಾರೆ. ಆದರೆ ಈ ವಾರ ಪವಿ ಪೂವಪ್ಪ ಮಾತ್ರ ತುಂಬ ಸೈಲೆಂಟ್‌ ಆಗಿದ್ದರು. ಹಿಂದಿನ ವಾರ  ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಹಾಗೂ ಅವಿನಾಶ್‌ ಶೆಟ್ಟಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ್ದರು. ʻಚೇರ್ ಆಫ್ ಥಾರ್ನ್ಸ್’ ಆಟದಲ್ಲಿ ಹೆಚ್ಚು ಟಾರ್ಗೆಟ್‌ಗೆ ಒಳಗಾಗಿ ಕಡೆಯವರೆಗೂ ಕೂತ ಕಾರಣಕ್ಕೆ ಪವಿ ಪೂವಪ್ಪ ಅವರಿಗೆ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್‌ ಅವರು ‘ಉತ್ತಮ’ ನೀಡಿದ್ದರು.

ಇದನ್ನೂ ಓದಿ: BBK SEASON 10: ಅಹಂಕಾರ ಪ್ರದರ್ಶಿಸುತ್ತಿರುವ ಮೈಕಲ್‌

ಆದರೆ ಈ ವಾರ ಸಿರಿ, ಸಂಗೀತಾ, ಕಾರ್ತಿಕ್, ಪವಿ ಪೂವಪ್ಪ ಮುಂತಾದವರು ತುಕಾಲಿ ಸಂತುಗೆ ‘ಉತ್ತಮ’ ಎಂದರು. ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್‌ ಅನ್ನು ಇತರೆ ಸ್ಪರ್ಧಿಗಳಿಗೆ ತುಕಾಲಿ ಸಂತು ಡೆಡಿಕೇಟ್ ಮಾಡಿದರು. ಕಾರ್ತಿಕ್‌ ಅವರನ್ನು ತುಕಾಲಿ ಸಂತು ಉತ್ತಮ ಎಂದರು.ನಮ್ರತಾ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಎಂದರು ತನಿಷಾ.ಸಿರಿ, ಸಂಗೀತಾ, ಕಾರ್ತಿಕ್, ತನಿಷಾ ‘ಕಳಪೆ ಪಟ್ಟ ಕೊಟ್ಟರು. ಇತ್ತ ತನಿಷಾ ‘ಕಳಪೆ’ ಎಂದರು ಪವಿ ಪೂವಪ್ಪ.

ಈ ವಾರ ಮೈಕಲ್, ಪವಿ ಪೂವಪ್ಪ, ಡ್ರೋನ್ ಪ್ರತಾಪ್, ಸಂಗೀತಾ ಹಾಗೂ ವಿನಯ್‌ ನಾಮಿನೇಟ್‌ ಆಗಿದ್ದಾರೆ. ಮೈಕಲ್‌ ಕೂಡ ಈ ವಾರ ಬಹಳ ಅಗ್ರೆಸಿವ್‌ ಆಡಿದ ಕಾರಣ ಮನೆಯಿಂದ ಹೊರ ಹೋಗುತ್ತಾರೆ ಎಂದು ವೀಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿಸುತ್ತಿದ್ದಾರೆ. ಇತರರಿಗೆ ಹೋಲಿಸಿದರೆ ಪವಿ ಪೂವಪ್ಪಗೆ ಕಡಿಮೆ ವೋಟ್ಸ್ ಲಭಿಸುತ್ತಾ? ಈ ವಾರ ಪವಿ ಪೂವಪ್ಪ ಔಟ್‌ ಆಗ್ತಾರಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version