Site icon Vistara News

BBK SEASON 10: ʻಎಲ್ಲೇ ಹೋದ್ರೂ ಗುಂಡಿ ತೋಡೇ ಬರೋದು; ಸಂಗೀತಾಳ ಅನುಕರಣೆ ಮಾಡಿದ ತುಕಾಲಿ!

Tukali Santosh Imitate Sangeetha Sringeri

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಅಂತೂ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಜಿಯೋ ಸಿನಿಮಾ ಹಂಚಿಕೊಂಡ ಪ್ರೋಮೊ ನೋಡಲು ತಮಾಷೆಯಾಗಿದ್ದರೂ ಮನೆಯಲ್ಲಿ ಅಶಾಂತಿ ಹುಟ್ಟಿಸುವುದು ಗ್ಯಾರಂಟಿ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಾರ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ವನ್ನು ನೀಡಿದ್ದರು. ಬೇರೊಬ್ಬರ ರೀತಿ ಮಾತನಾಡುವುದು ಅಥವಾ ನಾಯಿ ಅಳುವ ರೀತಿ ಅಳುವುದು, ಮಿಮಿಕ್ರಿ ಮಾಡುವ ಟಾಸ್ಕ್‌ಗಳನ್ನು ನೀಡಿದ್ದರು. ಇದರಲ್ಲಿ ತುಕಾಲಿ ಅವರು ಸಂಗೀತಾ ಬಗ್ಗೆ ಹೇಳಿರುವ ಮಾತು ಸಖತ್‌ ಹೈಲೈಟ್‌ ಆಗಿದೆ.

ಕಿಚ್ಚನ ಪಂಚಾಯಿತಿಯಲ್ಲಿ ತನಿಷಾ ಅವರು ಸಂಗೀತಾ ಅವರಿಗೆ ನಂಬಿಕೆ ದ್ರೋಹ ಟಾನಿಕ್‌ ನೀಡಿದ್ದರು. ಮಾತ್ರವಲ್ಲ ಸಂಗೀತಾ ಅವರಿಗೆ ದರಂಕಾರ ಪಟ್ಟ ಕೂಡ ಹಲವು ಸ್ಪರ್ಧಿಗಳು ಒಮ್ಮತದಿಂದ ನೀಡಿದ್ದರು. ಇದೀಗ ಬಿಗ್‌ ಬಾಸ್‌ ಸಂಗೀತಾ ಅವರು ನಾಯಿಯ ರೀತಿ ಅನುಕರಣೆ ಮಾಡಲು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ನಮ್ಮ ಮನೆಯ ನಾಯಿಯನ್ನು ಹೊರಗಡೆ ಬಿಟ್ಟಿದ್ದೇನೆ ಎಂದಿದ್ದಾರೆ. ಈ ತಮಾಷೆಯ ಮಾತೇ ಸಂಗೀತಾ ಕೋಪಕ್ಕೆ ಕಾರಣವಾಗಬಹುದು ಎನ್ನುತ್ತಿದ್ದಾರೆ ಪ್ರೇಕ್ಷಕರು. ಇನ್ನು ತುಕಾಲಿ ಸಂತು ಹಾಗೂ ಸಂತೋಷ್‌ ಅವರಿಗೆ ಕಾರ್ತಿಕ್‌ ಮತ್ತು ಸಂಗೀತಾ ಅವರ ರೀತಿ ಅನುಕರಣೆ ಮಾಡಲು ಬಿಗ್‌ ಬಾಸ್‌ ಹೇಳಿದ್ದರು. ಅದೇ ರೀತಿ ತುಕಾಲಿ ಸಂತೋಷ್, ಸಂಗೀತಾ ರೀತಿ ಅನುಕರಣೆ ಮಾಡಿದ್ದಾರೆ‌.

ಇದನ್ನೂ ಓದಿ: BBK SEASON 10: ಸಂಗೀತಾ ಜಾಗದಲ್ಲಿ ನಮ್ರತಾ ಇದ್ದಿದ್ದರೆ ʻಪನೀರ್‌ʼ ಕಥೆ ಏನಾಗ್ತಿತ್ತು? ಸ್ನೇಹಿತ್‌ಗೆ ಚಿವುಟಿದ ಸುದೀಪ್‌!

ಕಾರ್ತಿಕ್ ರೀತಿ ವರ್ತೂರು ಸಂತೋಷ್ ನಟಿಸಿದ್ದಾರೆ. ವರ್ತೂರು ಸಂತೋಷ್ ʻʻನಾನು ವಿನಯ್‌ನನ್ನು ಬಿಡೋದಿಲ್ಲ, ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಟಾಸ್ಕ್ ಆಡುತ್ತೇನೆʼʼ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ʻʻಅವರನ್ನು ಯಾಕೆ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿಯಾ? ನನ್ನನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡುʼʼ ಎಂದಿದ್ದಾರೆ. ನಂತರ ವರ್ತೂರು ʻʻನೀವು ವಿನಯ್ ಟೀಮ್‌ಗೆ ಸೇರಿದಾಗ ಏನು ಮಾಡಿದ್ರಿ?ʼʼಎಂದಾಗ, ತುಕಾಲಿ ʻʻನಾನು ಎಲ್ಲಿಗೆ ಹೋದ್ರು ಅಲ್ಲಿ ಎಲ್ಲರಿಗೂ ಗುಂಡಿ ತೋಡಿ ಬರುತ್ತೇನೆʼʼ ಎಂದು ಸಂಗೀತಾ ರೀತಿ ಮಾತನಾಡಿದ್ದಾರೆ. ಇದು ಕೂಡ ಸಂಗೀತಾ ಅವರಿಗೆ ಕೆರಳಿಸುವಂತೆ ಇತ್ತು.

ಅವಿನಾಶ್ ಶೆಟ್ಟಿ ಹಾಗೂ ವಿನಯ್, ಕಾರ್ತಿಕ್, ಸ್ನೇಹಿತ್ ಹಾಗೂ ಸಂಗೀತಾ, ತುಕಾಲಿ‌ ಹಾಗೂ ವರ್ತೂರು ಸಂತೋಷ್ ಟಾಸ್ಕ್‌ನಲ್ಲಿ ಭಾಗಿಯಾಗಿದ್ದಾರೆ. ಅವಿನಾಶ್ ಶೆಟ್ಟಿ ಹಾವಿನ ರೀತಿಯಲ್ಲಿ ವರ್ತಿಸಿದ್ದಾರೆ. ಇದೀಗ ಈ ಪ್ರೋಮೊ ವೈರಲ್‌ ಆಗುತ್ತಿದ್ದು ತಮಾಷೆ ಹೋಗಿ ಅಮಾಸೆ ಆಗುತ್ತಾ ಟಾಸ್ಕ್? ಎನ್ನುತ್ತಿದ್ದಾರೆ ನೆಟ್ಟಿಗರು.

ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ

ದುರಂಹಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ಹೆಸರಿನಲ್ಲಿ ಮನೆಯಲ್ಲಿ ತರಸಲಾಗಿತ್ತು. ಈ ವೇಳೆ ಹೆಚ್ಚು ಟಾನಿಕ್ ಬಂದಿದ್ದು ಸಂಗೀತಾಗೆ, ಎರಡನೇ ಸ್ಥಾನ ವಿನಯ್ ಗೌಡಗೆ. ಪ್ರತಿಯೊಬ್ಬ ಸದಸ್ಯನು ಮನೆಯ ಎರಡು ಟಾನಿಕ್ ಅನ್ನು ಯಾರಾದರೂ ಇಬ್ಬರಿಗೆ ಕೊಡಬೇಕಿತ್ತು. ಸಂಗೀತಾ ಅವರಿಗೆ ಏಳು ಟಾನಿಕ್‌ ದೊರೆತರೆ, ವಿನಯ್‌ ಅವರಿಗೆ 5 ಸಿಕ್ಕಿತ್ತು. ಹೀಗಾಗಿ ಸಂಗೀತಾ ಅವರನ್ನು ಸ್ಪರ್ಧಿಗಳು ಸಖತ್‌ ಟಾರ್ಗೆಟ್‌ ಮಾಡುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version