ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಹನ್ನರಡನೇ ವಾರ ಮನೆ ಭಾವುಕ ಜಗತ್ತಿಗೆ ಸಾಕ್ಷಿಯಾಯಿತು. ಸದಸ್ಯರು ಕುಟುಂಬದವರು ಮನೆಯೊಳಗೆ ಬಂದಿದ್ದಾರೆ. ಕೆಲವರು ಅಮನ್ನನ್ನು ತಬ್ಬಿ ಕಣ್ಣೀರಿಟ್ಟರೆ, ತುಕಾಲಿ ಜೋಡಿಯ ತಮಾಷೆ, ತರಲೆ ವೀಕ್ಷಕರನ್ನು ನಗಿಸಿದೆ. ತುಕಾಲಿ ಹಾಗೂ ಮಾನಸಾ ದಂಪತಿ ಮನೆಯಲ್ಲಿ ತಮ್ಮ ಕಾಮಿಡಿ ಲೈಫ್ ಹಾಗೂ ಕಷ್ಟ ಪಟ್ಟು ಬಂದಿರುವ ಜರ್ನಿಯನ್ನು ಹಂಚಿಕೊಂಡರು.
ತುಕಾಲಿ ಅವರ ಹೆಂಡತಿ ಮಾನಸಾ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಕೋಲಿನಲ್ಲಿ ತುಕಾಲಿಗೆ ಚೆನ್ನಾಗಿ ಬಾರಿಸಿದ್ದಾರೆ. ತುಕಾಲಿ ಕೂಡ ನೋವನ್ನು ತಾಳಲಾರದೆ ಮನೆತುಂಬ ಓಡಾಡಿದ್ದಾರೆ. ಸಂತು, ಮಾನಸಾ ನಡುವೆ ಸಾಕಷ್ಟು ತಮಾಷೆಯ ಮಾತುಕತೆ ನಡೆದಿದೆ. ಅಷ್ಟೇ ಅಲ್ಲದೇ ತುಕಾಲಿ ಅವರು ಮನೆಯಲ್ಲಿ ನಮ್ರತಾಗೆ ಕ್ಲೋಸ್ ಎನ್ನುವುದು ಗೊತ್ತೇ ಇದೆ. ʻʻನನಗೆ ಒಂದಿನವೂ ಲಿಪ್‌ಸ್ಟಿಕ್ ಹಚ್ಚಿಲ್ಲ, ಕಾರ್ತಿಕ್, ಮಾನಸಾಗೆ ಯಾಕೆ ಲಿಪ್‌ಸ್ಟಿಕ್ ಹಚ್ಚಿದೆ? ನಮ್ರತಾ ಅಕ್ಕ ಜತೆ ಹಾಗೆ ನುಲಿದುಕೊಂಡು ಡ್ಯಾನ್ಸ್ ಮಾಡ್ತೀಯಾ?” ಎಂದು ತುಕಾಲಿಗೆ ತಮಾಷೆ ಮಾಡಿದ್ದಾರೆ.
ಎಮ್ಮೆಗೆ ಜೋಡಿ ಇರ್ಲಿ ಅಂತ ಕಟ್ಕೊಂಡ್ಳಂತೆ!
ಸ್ಪರ್ಧಿಗಳ ಮುಂದೆ ತುಕಾಲಿ ಅವರು ʻʻಊರಲ್ಲಿ ಎಮ್ಮೆ ಕಾಯ್ಕೊಂಡು ಇದ್ದವಳನ್ನು ಬೆಂಗಳೂರಿಗೆ ಬಿಟ್ಟೆʼʼ ಎಂದಿದ್ದಾರೆ. ಅದಕ್ಕೆ ಪತ್ನಿ ಕೂಡ ʻʻನಾನೇನೋ ಊರಲ್ಲಿ ಎಮ್ಮೆ ಕಾಯುತ್ತಿದ್ದೆ. ಇವರೇನು ಮೈಸೂರಲ್ಲಿ ಇರುವ ಅರ್ಜುನ್‌ನನ್ನು ಕಾಯ್ತಾ ಇದ್ನಾ? ಎಮ್ಮೆಗೆ ಒಳ್ಳೆ ಜೋಡಿ ಸಿಕ್ಕಿತ್ತಲ್ಲ ಎಂದು ಮದುವೆಯಾದೆ. ಎಲ್ಲರಿಗೂ ಒಳ್ಳೆಯವರಿಗೆ ಜೀವನ ಕೊಟ್ಟರೆ. ಇಂಥವರಿಗೆ ಅವರಿಗೆ ಯಾರು ಜೀವನ ಕೊಡ್ತಾರೆ? ಅದಕ್ಕಾಗಿ ನಾನೇ ಜೀವನ ಕೊಟ್ಟೆʼʼ ಎಂದು ತಮಾಷೆಯಾಗಿ ಮಾನಸಾ ಅವರು ತುಕಾಲಿ ಅವರ ಕಾಲೆಳೆದಿದ್ದಾರೆ.
ಇದನ್ನೂ ಓದಿ: BBK SEASON 10: ವರ್ತೂರ್ ಸಂತೋಷ್ ಗೆಲ್ಲಬೇಕು; ಅವಿನಾಶ್ ಶೆಟ್ಟಿ
ತುಕಾಲಿ ಮದುವೆ ಆದ ಮೇಲೆ ಜೀವನ ಚೆನ್ನಾಗಿದೆ
ಇವರಿಬ್ಬರು ತಮಾಷೆ ಮಾಡುತ್ತಿರುವುದುನ್ನು ಸ್ವತಃ ಬಿಗ್ ಬಾಸ್ ಖುಷಿ ಪಟ್ಟರು. ಹಾಗೆ ಕಾಮಿಡಿ ತುಕಾಲಿ, ಬಿಗ್ ಬಾಸ್ ತುಕಾಲಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಬಗ್ಗೆ ಗೊತ್ತಿರದ ಸಂಗಿತಿಯ ಬಗ್ಗೆ ತಿಳಿಸಿ ಎಂದು ಮಾನಸಾ ಅವರಿಗೆ ಬಿಗ್ ಬಾಸ್ ಹೇಳಿದರು. ಆಗ ಮಾನಸಾ ಅವರು ತುಕಾಲಿ ಬಗ್ಗೆ ಮಾತನಾಡಿ ಭಾವುಕಾರದು.
ʻʻಹುಟ್ಟಿದಾಗಿನಿಂದ 22 ವರ್ಷದವರೆಗೆ ನಾನು ಜೀವನದಲ್ಲಿ ಖುಷಿಯನ್ನೇ ಕಂಡಿರಲಿಲ್ಲ. ಇವನನ್ನು ಮದುವೆ ಆದಮೇಲೆ ನನ್ನ ಜೀವನ ಚೆನ್ನಾಗಿದೆ. ಮದುವೆ ಆಗೋಕೆ ಮುನ್ನ ಇಡೀ ಮನೆ ಹುಡುಕಿದರೂ ನನ್ನ ಮನೆಯಲ್ಲಿ ಒಂದು ರೂಪಾಯಿಯೂ ಸಿಗುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಊಟ ಮಾಡೋಕೂ ಹಣ ಇರಲಿಲ್ಲ. ಮದುವೆ ಆಗುವಾಗಲೇ ನನಗೆ ಕಾಫಿ ಮಾಡೋಕೂ ಬರಲ್ಲ ಅಂತ ಹೇಳಿದ್ದೆ, ನಾನೇ ಎಲ್ಲ ಮಾಡ್ತೀನಿ, ಕಲಿಸಿಕೊಡ್ತೀನಿ ಅಂತ ಅವನು ಹೇಳಿದ್ದ. ಜೀವನದಲ್ಲಿ ಇದಕ್ಕಿಂತ ಒಳ್ಳೆಯ ವ್ಯಕ್ತಿ ನನಗೆ ಸಿಗುತ್ತಲೇ ಇರಲಿಲ್ಲ” ಎಂದು ಮಾನಸಾ ಅವರು ಹೇಳಿದ್ದಾರೆ.
ಇದನ್ನೂ ಓದಿ: BBK SEASON 10: ಪತ್ನಿಯಿಂದ ಸಖತ್ ಒದೆ ತಿಂದ ತುಕಾಲಿ; ಎಮ್ಮೆಗೆ ಜೋಡಿ ಇರ್ಲಿ ಅಂತ ಕಟ್ಕೊಂಡ್ಳಂತೆ!
ಹೆಂಡತಿಯನ್ನು ಮುದ್ದಾಡಿದ ತುಕಾಲಿ
ಇಷ್ಟೆಲ್ಲ ಆದ ಬಳಿಕ ತುಕಾಲಿ ʻʻನಾನು ಹೆಂಡತಿಯನ್ನು ಎಷ್ಟು ಪ್ರೀತಿಸ್ತೇನೆ ಎಂದು ಈಗ ನಿಮ್ಮೆಲ್ಲರ ಮುಂದೆ ತೋರ್‌ಸ್ತೀನಿʼʼ ಎಂದು ಹೆಂಡತಿಯನ್ನು ತಬ್ಬಿ ಹಣೆಗೆ ಮುತ್ತಿಟ್ಟರು. ಮಾನಸಾ ಕೂಡ ನಾಚಿ ನೀರಾದರು. ತುಕಾಲಿ ಕೂಡ ಹೆಂಡತಿಯ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ʻʻನನಗೆ ಯಾರು ಹೆಣ್ಣು ಕೊಡುತ್ತಾರೋ ಎಂದು ಮನೆಯಲ್ಲಿ ಎಷ್ಟೋ ಜನ ಮಾತಾಡಿದ್ದಿದೆ. ನಾಟಕ ಮಾಡೋನು ಅನ್ನೋರು. ಆದರೆ ಮಾನಸಾ ನನ್ನ ಲೈಫ್‌ನಲ್ಲಿ ಬಂದ ನಂತರ ಖುಷಿಯಾಗಿದ್ದೇನೆ. ಅವಳು ಕೂಡ ನನ್ನ ಕಾಮಿಡಿಗೆ ಕೌಂಟರ್ ಕೊಡ್ತಾಳೆ. ಅದು ಖುಷಿ ಕೊಡುತ್ತೆ. ನಾನು ಫಸ್ಟ್ ಟೈಮ್ ಇವಳನ್ನು ರಿಜೆಕ್ಟ್ ಮಾಡಿ ಬೆಂಗಳೂರಿಗೆ ಬಂದಾಗ ಇವಳು ನನಗೋಸ್ಕರ ಕಾಯ್ತಿದ್ದಾಳೆ ಅಂತ ಗೊತ್ತಾಯ್ತು. ಇವಳು ಮಗು ಥರʼʼಎಂದರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ