ಬೆಂಗಳೂರು: ಕಿಚ್ಚ ಸುದೀಪ್ ಇಲ್ಲದೆ ಈ ವಾರಾಂತ್ಯ ಕಳೆದು ಹೊಸ ವಾರ ಶುರುವಾಗಿದೆ. ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಅಲ್ಲದೆ ಸೌಹಾರ್ದಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆಮಂದಿ ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಮಂದಿಗೆ ಹೊಸದೊಂದು ಸಿಹಿಯಾದ ಸರ್ಪೈಸ್ ನೀಡಿದ್ದಾರೆ. ಸದಸ್ಯರ ಕುಟುಂಬದವರು ಮನೆಯೊಳಗೆ ಬಂದಿದ್ದಾರೆ. ತುಕಾಲಿ ಅವರ ಪತ್ನಿ ಕೂಡ ಮನೆಗೆ ಬಂದಿದ್ದು, ಜೋಡಿ ಇಡೀ ಮನೆಯನ್ನು ನಗೆಗಡಲಿನಲ್ಲಿ ತೇಲಿಸಿತು. ಇದೀಗ ಜಿಯೋ ಸಿನಿಮಾ ಪ್ರೋಮೊ ಹಂಚಿಕೊಂಡಿದ್ದು, ಮನೆಯ ಸ್ಪರ್ಧಿಗಳು ಮಾತ್ರವಲ್ಲ, ವೀಕ್ಷಕರು ಕೂಡಾ ಜೋಡಿಯ ಅವತಾರಕ್ಕೆ ಬಿದ್ದು ಬಿದ್ದು ನಕ್ಕಿದ್ದಾರೆ.
ಉಳಿದ ಸದಸ್ಯರ ಕುಟುಂಬದ ಜತೆ ತುಕಾಲಿ ಅವರು ʻಮನೆಯಿಂದ ಹೊರ ಹೋದ ಮೇಲೆ ನನ್ನ ಹೆಂಡತಿಗೆ ಬರುವುದು ಬೇಡ ಅಂದು ಬಿಡಿʼ ಎಂದಿದ್ದಾರೆ. ಅಷ್ಟೊತ್ತಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ತುಕಾಲಿ ಪತ್ನಿ. ಬಂದ ಕೂಡಲೇ ಕೋಲು ಹಿಡಿದು ತುಕಾಲಿಗೆ ಚೆನ್ನಾಗಿ ಬಾರಿಸಿದ್ದಾರೆ. ತುಕಾಲಿ ಕೂಡ ʻʻಬಿಗ್ ಬಾಸ್ ನನ್ನ ಹೆಂಡತಿಯನ್ನು ಯಾಕೆ ಇಲ್ಲಿ ಕರೆಸಿದ್ರಿʼʼ ಎಂದು ಜೋರಾಗಿ ಕೂಗಿ ಹೆಂಡತಿಯ ಪೆಟ್ಟನ್ನು ತಪ್ಪಿಸಿಕೊಳ್ಳಲು ಮನೆತುಂಬ ಓಡಾಡಿದ್ದಾರೆ.
ಸ್ಪರ್ಧಿಗಳ ಮುಂದೆ ತುಕಾಲಿ ಅವರು ʻʻಊರಲ್ಲಿ ಎಮ್ಮೆ ಕಾಯ್ಕೊಂಡು ಇದ್ದವಳನ್ನು ಬೆಂಗಳೂರಿಗೆ ಬಿಟ್ಟೆʼʼ ಎಂದಿದ್ದಾರೆ. ಅದಕ್ಕೆ ಪತ್ನಿ ಕೂಡ ʻʻನಾನೇನೋ ಊರಲ್ಲಿ ಎಮ್ಮೆ ಕಾಯುತ್ತಿದ್ದೆ. ಇವರೇನು ಮೈಸೂರಲ್ಲಿ ಇರುವ ಅರ್ಜುನ್‌ನನ್ನು ಕಾಯ್ತಾ ಇದ್ನಾ? ಎಮ್ಮೆಗೆ ಒಳ್ಳೆ ಜೋಡಿ ಸಿಕ್ಕಿತ್ತಲ್ಲ ಎಂದು ಮದುವೆಯಾದೆ. ಎಲ್ಲರಿಗೂ ಒಳ್ಳೆಯವರಿಗೆ ಜೀವನ ಕೊಟ್ಟರೆ. ಇಂಥವರಿಗೆ ಅವರಿಗೆ ಯಾರು ಜೀವನ ಕೊಡ್ತಾರೆ? ಅದಕ್ಕಾಗಿ ನಾನೇ ಜೀವನ ಕೊಟ್ಟೆʼʼ ಎಂದು ತಮಾಷೆಯಾಗಿ ತುಕಾಲಿ ಅವರ ಕಾಲೆಳೆದಿದ್ದಾರೆ.
ಇದನ್ನೂ ಓದಿ: BBK SEASON 10: ಈ ವಾರ ಎಂಟು ಮಂದಿ ನಾಮಿನೇಟ್; ಪ್ರತಾಪ್ ಸೇಫ್!
ನಮ್ರತಾ ಅವರ ತಾಯಿ, ವರ್ತೂರ್ ಅವರ ಅಮ್ಮ ಬಿಗ್ ಬಾಸ್ ಮುಖ್ಯದ್ವಾರದಿಂದ ಬಂದಿರುವುದು ಪ್ರೋಮೊದಲ್ಲಿ ಜಾಹೀರಾಗಿದೆ. ಮತ್ತೆ ಯಾವೆಲ್ಲ ಸದಸ್ಯರ ಮನೆಯವರು ಬಿಗ್ ಬಾಸ್ ಮನೆಯೊಳಗೆ ಭೇಟಿ ಕೊಟ್ಟಿದ್ದಾರೆ? ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿತ್ತು? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ