ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK Season 10) ಮೊದಲನೇ ವಾರ ಸ್ನೇಕ್ ಶ್ಯಾಮ್ ಮನೆಯಿಂದ ಹೊರಬಂದಾಗಿದೆ. ಎರಡನೇ ವಾರ ಒಟ್ಟು ಆರು ಮಂದಿ ನಾಮಿನೇಟ್ ಆಗಿದ್ದರು. ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ, ಗೌರೀಶ್ ಅಕ್ಕಿ ಮತ್ತು ಕಾರ್ತಿಕ್ ಮಹೇಶ್. ಇದೀಗ ಇಬ್ಬರು ಸ್ಪರ್ಧಿಗಳು ಸೇಪ್ ಆಗರುವ ಬಗ್ಗೆ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ರಿವೀಲ್ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ಹಾಗೂ ತುಕಾಲಿ ಸಂತು ಎಲಿಮಿನೇಟ್ ಬಿಸಿಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲಿಗೆ, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ ಹಾಗೂ ಗೌರೀಶ್ ಅಕ್ಕಿ ಮಧ್ಯೆ ಒಬ್ಬರು ಔಟ್ ಅಗುವುದು ಪಕ್ಕಾ ಆದಂತಾಗಿದೆ.
ಆದರೆ ಮೂಲಗಳ ಪ್ರಕಾರ ಭಾಗ್ಯಶ್ರೀ ಅವರು ಮನೆಯಿಂದ ಹೊರಗೆ ಹೋಗುವುದು ಖಚಿತ ಎನ್ನಲಾಗುತ್ತಿದೆ. ಗೌರೀಶ್ ಅವರು ಈಗಾಗಲೇ ಮನೆಯಲ್ಲಿ ʻʻನಾನು ಮಿನಿಮಂ ಎರಡು ವಾರ, ಮ್ಯಾಕ್ಸಿಮಂ ನಾಲ್ಕು ವಾರ ಇರಬಹುದು ಅಂತ ಅಂದುಕೊಂಡು ಬಂದಿದ್ದೀನಿ’’ ಎಂದು ಹೇಳಿದ್ದರು. ಹೀಗಾಗಿ, ಈ ವಾರ ತಾವೇ ಔಟ್ ಆಗಬಹುದು ಎಂದು ಗೌರೀಶ್ ಅಕ್ಕಿ ಊಹಿಸಿದ್ದಾರೆ.
ಭಾಗ್ಯಶ್ರೀನೇ ಟಾರ್ಗೆಟ್
ಸ್ಪರ್ಧಿಗಳ ಮಧ್ಯೆ ಯಾವುದೇ ಟಾಸ್ಕ್ ಆಡುವಾಗ ಭಾಗ್ಯಾರೀ ಅವರನ್ನು ಮೂಲೆಗುಂಪು ಮಾಡಿ ಬಿಟುತ್ತಿದ್ದರು. ಬಳಿಕ ಟಾಸ್ಕ್ ಸರಿಯಾಗಿ ನಿಭಾಯಿಸಿಲ್ಲ ಎಂದು ಕಳಪೆಯನ್ನೂ ಕೊಟ್ಟರು. ಇಷ್ಟಕ್ಕೆ ಮುಗಿಯದೇ ಶಿಕ್ಷೆಯನ್ನೂ ಅನುಭವಿಸಿದರು. ಇದಾದ ಬಳಿಕ ಭಾಗ್ಯಶ್ರೀ ಅವರು ಬಿಗ್ ಬಾಸ್ ಮುಂದೆ ಕಣ್ಣೀರಿಟ್ಟಿದ್ದೂ ಇದೆ. ಟಾಸ್ಕ್‌ನಲ್ಲಿ ಆಟವಾಡಲು ಭಾಗ್ಯಶ್ರೀ ಅವರಿಗೆ ವಿನಯ್ ಗೌಡ ಅವಕಾಶ ನೀಡಿದಾಗ ಭಾಗ್ಯಶ್ರೀ ಫುಲ್ ಖುಷಿಯಾಗಿದ್ದರು. ಹಾಗೇ ವಿನಯ್ ಗೌಡ ಅವರ ಜತೆ ದೊಡ್ಡ ವಾರ್ ಕೂಡ ಆಯ್ತು. ಇದೀಗ ಈ ವಾರ ಭಾಗ್ಯಶ್ರೀ ಹೊರಗೆ ಹೋಗ್ತಾರಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಇದೆ.
ಇದನ್ನೂ ಓದಿ: BBK Season 10: ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ ಅಂದ್ರೆ ಇದೇ ಕಾರಣಕ್ಕೆ; ಇದು ಕಿಚ್ಚನ ಕ್ಲಾಸ್!
ಈಗಾಗಲೇ ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಪಂಚಾಯಿತಿಯಲ್ಲಿ ವಿನಯ್ ಹಾಗೂ ಸಂಗೀತಾ ನಡುವಿನ ವಿವಾದ, ಭಾಗ್ಯಶ್ರೀ ಹಾಗೂ ವಿನಯ್ ನಡುವಿನ ಜಗಳ, ತುಕಾಲಿ ಸಂತು ಹಾಗೂ ಇಶಾನಿ ನಡುವಿನ ವಿವಾದ ಇನ್ನೂ ಹಲವು ವಿಷಯಗಳ ಬಗ್ಗೆ ಸುದೀಪ್ ಮಾತನಾಡಿದರು. ಮುಂದಕ್ಕೆ ಆಟ ಇನ್ನೂ ಗಂಭೀರವಾಗುವ ಸಾಧ್ಯತೆ ಇದೆ.
ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.