ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK Season 10) ಐದನೇ ವಾರಕ್ಕೆ ಕಾಲಿಟ್ಟಿದೆ. ತುಕಾಲಿ ಸಂತು ಅವರು ಮೊದಲಿಂದಲೂ ವಿನಯ್ ಅವರಿಗೆ ಸಾಥ್ ಕೊಡುತ್ತ ಬಂದಿದ್ದಾರೆ. ಆದರೆ ಏಕಾಏಕಿ ಸಂಗೀತಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲದೇ ತುಕಾಲಿ ಅವರು ವಿನಯ್ ಅವರಿಗೆ ಕನಿಕರ ಇಲ್ಲ ಎಂದು ವರ್ತೂರ್ ಸಂತೋಷ್ ಜತೆಗೆ ಮಾತನಾಡಿದ್ದಾರೆ. ಮಾತ್ರವಲ್ಲ ಸಂಗೀತಾ ಅವರನ್ನು ಹೊಗಳಿದ್ದಾರೆ.
ಟಾಸ್ಕ್ ವೇಳೆ ವಿನಯ್ ಕೂಡ ಸಂತೋಷ್‌ಗೆ ಗ್ರೂಪಿಸಮ್ ಮಾಡೋದು ಬೇಡ ಎಂದು ಸಲಹೆ ಕೂಡ ಕೊಟ್ಟರು. ಇದಾದ ಬಳಿಕ ವರ್ತೂರ್ ಸಂತೂಷ್ ಹಾಗೂ ತುಕಾಲಿ ನಡುವೆ ಮಾತುಕತೆ ಆಯ್ತು. ವರ್ತೂರ್ ಸಂತೋಷ್ ಮಾತು ಆರಂಭಿಸಿ ʻʻನಮಗೆ ಎಲ್ಲರಿಗಿಂತ ಆಡೋದಷ್ಟೇ ಮುಖ್ಯ. ಡ್ರೋನ್ ಪ್ರತಾಪ್ ಮಾಡ್ತಿದ್ದಾನಲ್ಲ ಹಾಗೆ. ಕ್ಯಾಪ್ಟೆನ್ಸಿ ನಿನ್ನ ಕೈಯಲ್ಲಿ ಇದ್ದದ್ದು ಬಿಟ್ಟುಬಿಟ್ಟೆ. ನಿಮ್ಮ ಗುಂಪು ಸರಿ ಇಲ್ಲ. ಅಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಟಾಸ್ಕ್ ಮುಗಿದ ಬಳಿಕವೂ ಆ ಬಗ್ಗೆ ಚರ್ಚೆ ಮಾಡುತ್ತಾರೆ. ನಮ್ಮ ಟೀಂನಲ್ಲಿ ಹಾಗಿಲ್ಲ. ಟಾಸ್ಕ್ ಮುಗಿದ ಬಳಿಕ ನಾವು ಆ ಬಗ್ಗೆ ಮಾತೇ ಆಡಲ್ಲ’. ನಿನ್ನನ್ನ ಗ್ರ್ಯಾಂಟೆಡ್ ಆಗಿ ತಗೊಂಡಿದ್ದಾರೆ. ನಾನು ನಿನಗೆ ಹೇಳುವ ಸಲಹೆ ಏನಂದರೆ.. ನಿನ್ನ ಕೈಗೆ ಸಿಕ್ಕಾಗ ಬಿಡೋದು ದಡ್ಡತನ. ನಿನ್ನ ಅಟವನ್ನ ನೀನು ಆಡು. ಗುಂಪು ಅಂತ ಹೋದರೆ ಮೂರು ನಾಮ ಹಾಕಿ ಕಳಿಸ್ತಾರೆ ಅಂತ.. ನಿಮ್ಮ ಟೀಮ್ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ಯೋ.. ಅಷ್ಟೇ ವರ್ಸ್ಟ್ ಆಗ್ಬಿಟ್ಟಿದೆʼʼ ಎಂದು ತುಕಾಲಿ ಸಂತೋಷ್ ಬಳಿ ವರ್ತೂರು ಸಂತೋಷ್ ಹೇಳಿದರು.
ಇದನ್ನೂ ಓದಿ: BBK Season 10: ಶಾಂತ ಮೂರ್ತಿಯಾಗಿದ್ದ ʻಡ್ರೋನ್ ಪ್ರತಾಪ್ʼ ಉಗ್ರ ರೂಪ ತಾಳಿದ್ದೇಕೆ?
ತುಕಾಲಿಗೂ ಈ ಮಾತುಗಳು ನಿಜವೆನಿಸಿದೆ. ತುಕಾಲಿ ಸಂತೂ ಕೂಡ ಮಾತನಾಡಿ ʻʻಕರೆಕ್ಟ್ ಅದು. ವಿನಯ್‌ಗೆ ಕನಿಕರನೇ ಇಲ್ಲ. ಅವನಿಗೆ ದೇವ್ರಾಣೆ ಇಲ್ಲ. ತುಂಬಾ ಸಲ ನೋಡಿದೆ. ನೀನು ಹೇಳಿದ್ಮೇಲೆ ಅಬ್ಸರ್ವ್ ಮಾಡಿದೆ. ಕನಿಕರ ಅನ್ನೋದೇ ಇಲ್ಲ. ಸ್ಟ್ರೇಟ್ ಆಗಿ ಮಾತನಾಡುತ್ತಿರುವವರಲ್ಲಿ ವಿಷ ಇಲ್ಲ. ಇಲ್ಲಿಯವರೆಗೂ ಕಾಮಿಡಿಗೆ ಪ್ರಾಬ್ಲಂ ಆಗುತ್ತೆ. ಬೇರೆಯವರು ನೊಂದುಕೊಳ್ಳುತ್ತಾರೆ ಅಂದುಕೊಳ್ಳುತ್ತಿದ್ದೆ. ನಮಗೆ ಸಪೋರ್ಟ್ ಮಾಡಲ್ಲ ಅಂದುಕೊಂಡು ಬಂದೆ. ಕಾಮಿಡಿ ಜತೆಗೆ ನನ್ನ ಆಟವನ್ನೂ ಆಡುತ್ತೇನೆ. ಈಗ ಇಶಾನಿ ಉಳಿಸಿಕೊಳ್ಳಲು ಪ್ಲಾನ್ ಮಾಡ್ತಿದ್ದಾರೆ. ನಾನು ನಿಜವಾಗಿಯೂ ಸಂಗೀತಾ ಅವರನ್ನೆಲ್ಲಾ ಬೇರೆ ತರಹ ಅಂದುಕೊಂಡಿದ್ದೆ. ಭಾರೀ ಒಳ್ಳೆಯ ಜನ ಅವರು. ನಾನು ಬೇಡ ಅಂದಕೂಡಲೆ ನಮ್ರತಾ ಮಾತನಾಡುತ್ತಲೇ ಇಲ್ಲʼʼ ಎಂದು ಹೇಳಿಕೊಂಡರು.
ಇನ್ನು ಡ್ರೋನ್ ಪ್ರತಾಪ್ ಕೂಡ ಮನೆಯಲ್ಲಿ ಸಖತ್ ಆಗಿ ಆಟವನ್ನು ಆಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿಯೂ ಡ್ರೋನ್ ಪ್ರತಾಪ್ ಟೀಂ ಎಲ್ಲ ಟಾಸ್ಕ್‌ಗಳಲ್ಲಿ ವಿನ್ ಆಗಿದೆ. ಈಗಾಗಲೇ ಪ್ರತಾಪ್ ಅವರು ಸಂಗೀತಾ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಶನ್‌ನಿಂದ ಪಾರು ಮಾಡಿದ್ದಾರೆ. ಹಾಗೇ ಸ್ನೇಹಿತ್ ಅವರನ್ನು ನಾಮಿನೇಶನ್‌ನಿಂದ ಪಾರಾಗದಂತೆ ನಿರ್ಭಂದಿಸಿದ್ದಾರೆ.ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ