ಬೆಂಗಳೂರು: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸದಂತೆ ವರ್ತೂರ್ ಸಂತೋಷ್ (Varthur Santhosh) ಅವರು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ʻʻಹಳ್ಳಿಕಾರ್ʼʼ ಹೆಸರು ಇಟ್ಟುಕೊಂಡು ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರೆಂದು ಮಂಡ್ಯದಲ್ಲಿ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻʻಹಳ್ಳಿಕಾರ್ ಒಡೆಯʼʼ ಎನ್ನುವುದಕ್ಕೆ ಒಂದು ಮಹತ್ವ ಇದೆ. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ಸಂತೋಷ್ ಅವರಿಗೆ ಹಳ್ಳಿಕಾರ್ ಹೆಸರು ಹೇಗೆ ಬಂತುʼʼ ಎಂಬುದು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್‌ನಲ್ಲಿ ಡಿ.10ರಂದು ನಡೆಯುವ ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಠಿಗೆ, ಹಳ್ಳಿಕಾರ್ ಕುರಿತಂತೆ ಚರ್ಚೆ ಮಾಡಲು ವರ್ತೂರ್ ಸಂತೋಷ್ ಅವರಿಗೂ ಆಹ್ವಾನ ಕೊಟ್ಟಿದ್ದಾರೆ ರೈತರು. ಬಿಗ್ ಬಾಸ್‌ನಿಂದ ಹೊರ ಬಂದ ತಕ್ಷಣ ವರ್ತೂರ್ ಸಂತೋಷ್‌ಗೆ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ವರ್ತೂರ್ ಸಂತೋಷ್ ಇತ್ತೀಚೆಗೆ ಬಂದು ಹಳ್ಳಿಕಾರ್ ಒಡೆಯರ್ ಹೆಸರು ಇಟ್ಟುಕೊಳ್ಳುವುದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಅವರಿಗೆ ಅವರೇ ಹಳ್ಳಿಕಾರ್ ಒಡೆಯ ಎನ್ನುವುದು ಸರಿಯಲ್ಲ. ಇದಕ್ಕೆ ಅವರು ಬಿಗ್ ಬಾಸ್ ನಿಂದ ಬಂದ ತಕ್ಷಣವೇ ಸ್ಪಷ್ಟೀಕರಣ ನೀಡಬೇಕುʼʼಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ; Varthur Santhosh : ವರ್ತೂರು ಸಂತೋಷ್ ಈಸ್ ಬ್ಯಾಕ್; ಬಿಗ್ ಬಾಸ್ ಮನೆಗೆ ರೀಎಂಟ್ರಿ
ಕ್ಯಾಪ್ಟನ್ ಆದ ವರ್ತೂರ್
ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ ಸೀಸನ್ 10ಗೆ (BBK Season 10) ಮರಳಿ ಮತ್ತೆ ಆಟ ಪ್ರಾರಂಭಿಸಿದ್ದರು. ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಇನ್ಸಿಡೆಂಟ್ ನಡೆಯಿತು. ನಾನು ಅದರಿಂದ ಹೊರಗಡೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಡಲು ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟ ಪಡುತ್ತೇನೆʼʼಎಂದಿದ್ದರು. ಸುದೀಪ್ ಕೂಡ ಗರಂ ಆಗಿ ʻʻನಿಮಗೆ ಬಂದಿರುವಂತಹ ವೋಟ್ಸ್ 34,15, 472. ಜನಗಳ ವಿರುದ್ಧ ನಾನು ಹೋಗೋದಕ್ಕೆ ಆಗಲ್ಲ. ಹೋಗೋದು ಇಲ್ಲ. ನನಗೆ ಸ್ವಲ್ಪ ನಿರಾಸೆಯಾಯ್ತುʼʼಎಂದು ವೇದಿಕೆಯಿಂದ ಹೊರಟೇ ಬಿಟ್ಟಿದ್ದರು. ಬಳಿಕ ವರ್ತೂರ್ ಅವರ ತಾಯಿ ಬಂದ ನಂತರ ಆಟ ಮುಂದುವರಿಸುತ್ತಿರುವಾಗಿ ವರ್ತೂರ್ ಹೇಳಿ, ಇಲ್ಲಿಯ ತನಕ ಬಂದು ನಿಂತಿದ್ದಾರೆ. ಈ ವಾರ ಕ್ಯಾಪ್ಟನ್ ಕೂಡ ಆಗಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ