Site icon Vistara News

Varthur Santhosh: ವರ್ತೂರ್‌ ಸಂತೋಷ್‌ಗೆ ಸನ್ಮಾನ ಮಾಡಿದ ಪಿ ಎಸ್ ಐ ರಾತ್ರೋರಾತ್ರಿ ವರ್ಗಾವಣೆ!

varthur santhosh awarded psi get transfer sentence

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ನಾಲ್ಕನೇ ರನ್ನರ್‌ ಅಪ್‌ ವರ್ತೂರ್‌ ಸಂತೋಷ್‌ (Varthur Santhosh) ಒಂದಲ್ಲ ಒಂದು ಸುದ್ದಿಯಲ್ಲಿ ಇದ್ದಾರೆ. ಬಿಗ್‌ಬಾಸ್‌ ಫೈನಲಿಸ್ಟ್ ವರ್ತೂರು ಸಂತೋಷ್ ಅವರಿಗೆ ಪಿಎಸ್‌ಐ ತಿಮ್ಮರಾಯಪ್ಪ ಸನ್ಮಾನ‌ ಮಾಡಿದ್ದರು. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಸಬ್ ಇನ್ಸ್‌ಪೆಕ್ಟರ್‌ ಪಿ ಎಸ್ ಐ ತಿಮ್ಮರಾಯಪ್ಪನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ವೃತ್ತಿ ಸಮಯದಲ್ಲಿ ಮನರಂಜನೆ ನೀಡುವವರಿಗೆ ಅಭಿಮಾನವನ್ನು ತೋರಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.

ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿರುವಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಬಂಧನ ಮಾಡಲಾಗಿತ್ತು. ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದರು.

ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಪಿಎಸ್‌ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್‌ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.

ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್‌ (Varthur Santhosh) ಬಿಗ್‌ ಬಾಸ್‌ ಸೀಸನ್‌ 10ಗೆ (BBK Season 10) ಮರಳಿ ಮತ್ತೆ ಆಟ ಪ್ರಾರಂಭಿಸಿದ್ದರು. ಬಳಿಕ ವರ್ತೂರ್‌ ಅವರ ತಾಯಿ ಬಂದ ನಂತರ ಆಟ ಮುಂದುವರಿಸುತ್ತಿರುವಾಗಿ ವರ್ತೂರ್‌ ಹೇಳಿ ಕೊನೆಗೂ ಸೀಸನ್‌ 10ರ ನಾಲ್ಕನೇ ರನ್ನರ್‌ ಅಪ್‌ ಆದರು.

ಇದನ್ನೂ ಓದಿ: Varthur Santhosh: ಆ ಚೈಲ್ಡ್ ಚಪಾತಿ  ನಾನು ಹೋರಿ ಕಟ್ಟಿದಾಗ ಇನ್ನೂ ಚಡ್ಡಿ ಹಾಕುತ್ತಿರಲಿಲ್ಲ; ವರ್ತೂರ್‌ ಖಡಕ್ ಉತ್ತರ ಯಾರಿಗೆ?

ಪಟಾಕಿ ಸಿಡಿಸಿ, ಹೂ ಚೆಲ್ಲಿ ಸ್ವಾಗತ ಕೋರಿದ್ದ ಮಾಲೂರು ಜನತೆ

ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಹೋರಿಗಳ ತಳಿ ರಕ್ಷಣೆ ಮಾಡುವ ಪಣ ತೊಟ್ಟಿದ್ದಾರೆ. ಈ ಉದ್ದೇಶ ಇಟ್ಟುಕೊಂಡು ಬಿಗ್‌ ಬಾಸ್‌ ಮನೆಗೆ ಸೇರಿದರು. ಅವರ ಆಟದ ವೈಖರಿ ಕಂಡು ಫ್ಯಾನ್ಸ್‌ ಫಿದಾ ಆಗಿದ್ದರು. ಕೋಲಾರ ಸಮೀಪದ ಮಾಲೂರಿಗೆ ತೆರಳಿದ್ದರು. ಈ ವೇಳೆ ಜನ ಸೆಲ್ಫಿಗೆ ಮುಗಿ ಬಿದ್ದರು. ವರ್ತೂರು ಸಂತೋಷ್ ಅವರು ಮಾಲೂರಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ ಹೂವಿನ ದಳಗಳನ್ನು ಹಾಕಿ ಅವರನ್ನು ಸ್ವಾಗತಿಸಲಾಯಿತು. ಅವರು ಹೋದಲೆಲ್ಲ ಜನರೇ ನೆರೆದಿದ್ದರು. ಹೊಸಕೋಟೆ, ಚನ್ನಪಟ್ಟಣಕ್ಕೆ ವರ್ತೂರು ಸಂತೋಷ್ ತೆರಳಿದ್ದರು. ವರ್ತೂರ್‌ ಸಂತೋಷ್‌ ಈಗಾಗಲೇ ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Exit mobile version