Site icon Vistara News

BBK Season 10: ಹೊರಗೆ ಹೋಗ್ತೀನಿ ಎಂದು ಕಣ್ಣೀರಿಟ್ಟ ವರ್ತೂರ್‌; ವೇದಿಕೆ ತೊರೆದ ಸುದೀಪ್‌!

varthur santhosh bigg boss

ಬೆಂಗಳೂರು: ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್‌ (Varthur Santhosh) ಬಿಗ್‌ ಬಾಸ್‌ ಸೀಸನ್‌ 10ಗೆ (BBK Season 10) ಮರಳಿ ಮತ್ತೆ ಆಟ ಪ್ರಾರಂಭಿಸಿರುವುದು ಗೊತ್ತೇ ಇದೆ. ಈ ವಾರ ವರ್ತೂರ್‌ ಸಂತೋಷ್‌ ಅವರು ನಾಮಿನೇಟ್‌ ಕೂಡ ಆಗಿದ್ದರು. ಆದರೆ ಬರೋಬ್ಬರಿ 34,15, 472 ಮತಗಳು ಬಂದು ಸೇಫ್‌ ಆಗಿದ್ದಾರೆ. ಆದರೆ ವರ್ತೂರ್‌ ಅವರು ಕಿಚ್ಚನ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ವರ್ತೂರ್ ಸಂತೋಷ್

ಈ ವಾರ ಏಳು ಮಂದಿ ನಾಮಿನೇಟ್‌ ಆಗಿದ್ದರು. ಅದರಲ್ಲಿ ವರ್ತೂರ್‌ ಕೂಡ ಒಬ್ಬರು. ಈಗಾಗಲೇ ಜಿಯೋ ಸಿನಿಮಾ ಪ್ರೋಮೊ ಹಂಚಿಕೊಂಡಿದ್ದು, ವರ್ತೂರ್‌ ಸಂತೋಷ್‌ ಸೇಫ್‌ ಆಗಿರುವುದನ್ನು ಕಿಚ್ಚ ಸುದೀಪ್‌ ಅನೌನ್ಸ್‌ ಮಾಡಿದ್ದಾರೆ. ಆದರೀಗ ವರ್ತೂರ್‌ ಅವರು ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಇನ್ಸಿಡೆಂಟ್‌ ನಡೆಯಿತು. ನಾನು ಅದರಿಂದ ಹೊರಗಡೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಡಲು ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟ ಪಡುತ್ತೇನೆʼʼಎಂದರು. ಸುದೀಪ್‌ ಕೂಡ ಗರಂ ಆಗಿ ʻʻನಿಮಗೆ ಬಂದಿರುವಂತಹ ವೋಟ್ಸ್‌ 34,15, 472. ಜನಗಳ ವಿರುದ್ಧ ನಾನು ಹೋಗೋದಕ್ಕೆ ಆಗಲ್ಲ. ಹೋಗೋದು ಇಲ್ಲ. ನನಗೆ ಸ್ವಲ್ಪ ನಿರಾಸೆಯಾಯ್ತುʼʼಎಂದು ವೇದಿಕೆಯಿಂದ ಹೊರಟೇ ಬಿಟ್ಟರು.

ಕಮೆಂಟ್‌ನಲ್ಲಿ ವರ್ತೂರ್‌ಗೆ ಜನ ಸಖತ್‌ ಸಪೋರ್ಟ್‌ ಕೂಡ ಮಾಡುತ್ತಿದ್ದಾರೆ. ʻʻಸಿಕ್ಕಿರೋ ಅವಕಾಶ ಕಳೆದುಕೊಳ್ಳಬೇಡಿ. ಸಂಗೀತ, ಪ್ರತಾಪ್ ಕಾರ್ತಿಕ್ ತನಿಷಾ ನಂತರ ಫೈನಲ್‌ ಬರುವ ಸ್ಪರ್ಧಿ ನೀವೆʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʻʻದೇವ್ರು ಎಲ್ಲರಿಗೂ ಎರಡನೇ ಅವಕಾಶ ಕೊಡಲ್ಲ ನಿಮ್ಗೆ ಸಿಕ್ಕಿದೆ ಕಳೆದುಕೊಳ್ಳಬೇಡಿʼʼಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಇಶಾನಿ, ಮೈಕಲ್‌ ಅಸಭ್ಯ ವರ್ತನೆ; ಫ್ಯಾಮಿಲಿ ಶೋ ಗುರು ಇದು ಅಂದ್ರು ನೆಟ್ಟಿಗರು!

ಹಳ್ಳಿಕಾರ್‌ ತಳಿಗಳ ಸಂರಕ್ಷಕನಾಗಿ, ಪ್ರಗತಿಪರ ರೈತನಾಗಿ ಗಮನ ಸೆಳೆದು ಹಳ್ಳಿಕಾರ್‌ ಒಡೆಯ ಎಂದೇ ಹೆಸರಾಗಿದ್ದ ಶ್ರೀಮಂತ ರೈತರ ವರ್ತೂರು ಸಂತೋಷ್‌ ಅವರು ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಆಡುತ್ತಾ ಎಲ್ಲರ ಗಮನ ಸೆಳೆದಿದ್ದರು. ಅವರದ್ದೇ ಆದ ಅಭಿಮಾನಿ ವರ್ಗವೂ ಸೃಷ್ಟಿಯಾಗಿತ್ತು.ಈ ನಡುವೆ, ಅವರು ಹುಲಿಯ ಉಗುರು ಇರುವ ಪೆಂಡೆಂಟ್‌ ಧರಿಸಿದ್ದನ್ನು ಟೀವಿಯಲ್ಲಿ ಗಮನಿಸಿದ್ದ ಅರಣ್ಯಾಧಿಕಾರಿಗಳು ಅವರ ಮೇಲೆ ಕ್ರಮಕ್ಕೆ ಮುಂದಾಗಿ ಬಿಗ್‌ ಬಾಸ್‌ ಮನೆಗೇ ದಾಳಿ ಮಾಡಿ ಅವರನ್ನು ಬಂಧಿಸಿ ಕರೆದೊಯ್ದಿದ್ದರು. ಬಳಿಕ ಅವರು ಬೇಲ್‌ ಮೂಲಕ ಆಚೆ ಬಂದು ಮನೆಗೆ ಎಂಟ್ರಿ ಕೊಟ್ಟಿದ್ದರು. ಅದರೀಗ ನನ್ನನ್ನು ಹೊರಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ. ಸ್ಪರ್ಧಿಗಳು ಕೂಡ ಬೇಡ, ಚಾನ್ಸ್‌ ಮಿಸ್‌ ಮಾಡ್ಕೋಬೇಡಿ ಎಂದು ಕನ್ವಿನ್ಸ್‌ ಮಾಡಿದ್ದಾರೆ. ವರ್ತೂರ್‌ ಸಂತೋಷ್‌ ಮನೆಯಲ್ಲಿಯೇ ಇರ್ತಾರಾ? ಅಥವಾ ಆಚೆ ಹೋಗ್ತಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version