Site icon Vistara News

BBK SEASON 10: ತನಿಷಾ ಕೆನ್ನೆ ಮುಟ್ಟಿ ವರ್ತೂರ್‌ ಮಾಸ್‌ ಡೈಲಾಗ್‌; ಸುಸ್ತಾದ ತುಕಾಲಿ ಮೇಷ್ಟ್ರು!

Varthur santhosh and tanisha

ಬೆಂಗಳೂರು: ಈ ವಾರ ಬಿಗ್‌ಬಾಸ್‌ (BBK SEASON 10) ಮನೆಯಲ್ಲಿ ಪ್ರಾರಂಭವಾದ ಹಿರಿಯ ಪ್ರಾಥಮಿಕ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ಕಿಲಾಡಿತನದಲ್ಲಿ ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದು. ಈ ಎಲ್ಲ ತುಂಟಾಟಗಳ ಕಿಡಿ ಕಾಣಿಸಿಕೊಂಡಿದ್ದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ.

ನಿನ್ನೆ (ಡಿ.12) ತನಿಷಾ ಟೀಚರ್‌ ಅವರಿಂದ ʻವ್ಯಕ್ತಿತ್ವ ವಿಕಸನದʼ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್‌ ಮೇಷ್ಟ್ರ ಜತೆಗೆ ‘ರೋಮಾಂಚನವೀ ಕನ್ನಡ’ ಎಂದು ರಾಗವಾಗಿ ಹಾಡಿದ್ದರು ಕೂಡ. ಪ್ರತಾಪ್ ಸರ್‌ರಿಂದ ಗಣಿತ ಕಲಿತು ಚುರುಕಾಗಿರುವ ಹುಡುಗರಿಗೆ ಇವತ್ತು ನಮ್ರತಾ ಮ್ಯಾಮ್‌ ಡಾನ್ಸ್ ಹೇಳಿಕೊಟ್ಟಿದ್ದಾರೆ. ವಿನಯ್‌, ಅವಿನಾಶ್ ಮತ್ತು ಕಾರ್ತಿಕ್ ಬ್ಲ್ಯಾಕ್‌ ಬೋರ್ಡ್‌ ಎದುರು ಸಖತ್ ಡಾನ್ಸ್ ಮಾಡಿದ್ದಾರೆ. ಚಂದವಾಗಿ ಸೀರೆ ಉಟ್ಟುಕೊಂಡ ನಮ್ರತಾ ಮೇಡಂ. ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಇಂತಹ ಅವಕಾಶಕ್ಕಾಗೇ ಕಾಯ್ತಿರೋ ವಿದ್ಯಾರ್ಥಿಗಳು ಸುಮ್ಮನೆ ಕೂಡುತ್ತಾರೆಯೇ? ಪಾಠದಲ್ಲಿ ಇಲ್ಲದ ಜೋಷ್‌ ಡಾನ್ಸ್‌ನಲ್ಲಿ ಹೊರಹೊಮ್ಮಿದೆ.

ಬರೀ ಡಾನ್ಸ್ ಅಷ್ಟೇ ಅಲ್ಲ, ನಾಟಕದಲ್ಲಿಯೂ ಸೈ ಅನಿಸಿಕೊಂಡಿದ್ದಾರೆ ವಿದ್ಯಾರ್ಥಿಗಳು. ಮುಗ್ಧತೆಗೆ ಮತ್ತೊಂದು ಹೆಸರಂತಿರುವ ವರ್ತೂರು ಸಂತೋಷ್‌, ತನಿಷಾ ಕೆನ್ನೆಯ ಮೇಲೆ ಬೆರಳಾಡಿಸುತ್ತ, ‘ಪಟಾಕಿ ಯಾರದಾಗಿದ್ರೂ, ಹಚ್ಚೋರು ಮಾತ್ರ ನಾವಾಗಿರ್ಬೇಕು’ ಎಂದು ಮಾಸ್ ಡೈಲಾಗ್ ಹೊಡೀತಿದ್ದಾರೆ.

ಇದನ್ನೂ ಓದಿ: BBK SEASON 10: ಅವಕಾಶ ಸಿಕ್ಕರೂ ಬಿಗ್‌ಬಾಸ್‌ಗೆ ಬರಬೇಡಿ ಎಂದು ಕಣ್ಣೀರಿಟ್ಟ ಸಂಗೀತಾ!

ತುಕಾಲಿ ಮೇಷ್ಟ್ರು, ಪದ್ಯ ಪಾಠ ಮಾಡೋಕೆ ಬಂದ್ರೆ ಹೇಗಿರತ್ತೆ? ವಿದ್ಯಾರ್ಥಿಗಳೆಲ್ಲ ಹೆಂಡ ಕುಡಿಸಿಬಿಟ್ಟ ಮಂಗನಂತಾಗುತ್ತಾರೆ. ‘ನಾನು ಹೇಳಿಹೊಟ್ಟಿದ್ದನ್ನು ಸರಿಯಾಗಿ ಹೇಳಬೇಕು’ ಎನ್ನುವ ಮೇಷ್ಟ್ರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವಿದ್ಯಾರ್ಥಿಗಳು, ಗುರುಗಳು “ಥೂ’ ಎಂದು ಉಗಿದರೆ ಅದನ್ನೂ ಪಾಲಿಸುತ್ತ ಗುರುಗಳಿಗೆ ಉಗಿಯುತ್ತಿದ್ದಾರೆ. ಬಿಗ್‌ಬಾಸ್ ಶಾಲೆಯ ಸಣ್ಣ ನೋಟವೇ ಇಷ್ಟು ಮಜವಾಗಿರಬೇಕಾದರೆ, ಪೂರ್ತಿ ಕ್ಲಾಸು ಹೇಗಿರಬಹುದು? ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version