ಬೆಂಗಳೂರು: ಟಾಸ್ಕ್ ನಡುವೆ (BBK SEASON 10) ಗಾಯಗೊಂಡ ತನಿಷಾ ಕುಪ್ಪಂಡ (Tanisha Kuppanda) ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಪ್ರಬಲ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು ಚಿಕಿತ್ಸೆಗಾಗಿ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಇದೀಗ ವರ್ತೂರ್ ಅವರು ʻಬೆಂಕಿʼ ತನಿಷಾ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ನಮ್ರತಾ ಗೌಡ, ವರ್ತೂರು ಸಂತೋಷ್, ಸಿರಿ, ತುಕಾಲಿ ಸ್ಟಾರ್ ಸಂತು ಅವರು ತನಿಷಾ ಕುಪ್ಪಂಡ ಕುರಿತಾಗಿ ಮಾತುಕತೆ ನಡೆಸಿದ್ದಾರೆ.
ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಬಗ್ಗೆ ಮನೆಯಲ್ಲಿ ಚರ್ಚೆಯಾಗಿದ್ದು, ನಮ್ರತಾ ಗೌಡ ಮಾತನಾಡಿ ʻʻಬೆಂಕಿ ಯೋಚನೆಯಲ್ಲಿ ಮುಳುಗಿ ಹೋಗಿದ್ದಾರೆ ವರ್ತೂರ್ʼʼಎಂದರು. ತುಕಾಲಿ ಮಾತನಾಡಿ ʻʻಈ ರೀತಿ ಒಬ್ಬರಿಗೋಸ್ಕರ ಕನವರಿಸಿಕೊಂಡವರನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ಎಷ್ಟು ಸಲ ಬೆಂಕಿ ಹೆಸರು ಹೇಳಿದ್ರು ಗೊತ್ತಾ? ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಬೆಂಕಿ ಕರೆದುಕೊಂಡು ಬಂದು ಇವರಿಗೆ ಒಪ್ಪಿಸಬೇಕು ಅಂತ ಅನಿಸಿಬಿಡ್ತು. ಅವರಿಗೆ ಆಗ್ತಾನೇ ಇಲ್ಲ, ದಿಢೀರ್ ಅಂತ ಯಾರಿಗೋ ಹೊಡೆಯೋಕೆ ಹೋಗ್ತಾರೆ, ಕಚ್ಚುತ್ತಾರೆ, ನನ್ನ ಜತೆಯೂ ಜಗಳ ಆಡಿದ್ರುʼʼ ಎಂದರು. ವರ್ತೂರ್ ಕೂಡ ತನಿಷಾ ವಾಪಸ್ ಬಂದ್ರೆ ಸಾಕು ಎಂದಿದ್ದಾರೆ. ಸಿರಿ ಅವರು ಕೂಡ ಬರ್ತಾರೆ ಬಿಡಿ ಎಂದಿದ್ದಾರೆ.
ತುಕಾಲು ಕೂಡ ʻʻಏನಾಗಿರಲಿಲ್ಲ, ಪ್ರಾಬ್ಲಮ್ ಇದ್ದಿದ್ದರೆ ಬಿಗ್ ಬಾಸ್ ಹೇಳುತ್ತಿದ್ರು. ಒಂದು ಬೆಡ್ ರೆಸ್ಟ್ ಬೇಕಿರತ್ತೆʼʼಎಂದರು.
ಇದನ್ನೂ ಓದಿ: BBK Season 10: ಇಂತಹ ವ್ಯಕ್ತಿತ್ವ ಇರೋರು ʻಗುಡ್ ಇನ್ ಬೆಡ್ʼ ಅಂತೆ; ನಮ್ರತಾ ಅಡಲ್ಟ್ ಟಾಕ್!
ಆಗಿದ್ದೇನು?
ಎಂದಿನಂತೆ ಬಿಗ್ ಬಾಸ್ ಸ್ಪರ್ಧಿಗಳ ಎರಡು ತಂಡ ಮಾಡಿ ಟಾಸ್ಕ್ ಕೊಟ್ಟಿದ್ದರು. ಅದರ ಪ್ರಕಾರ, ಒಂದು ತಂಡದವರು ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತಂದು ದೂರದಲ್ಲಿ ಇಟ್ಟಿರುವ ಕೊಳವೆಯೊಂದರಕ್ಕೆ ತುಂಬಿಸಬೇಕಿತ್ತು. ಕೊಳವೆಯೊಳಗೆ ಹೋದ ನೀರು ಗಾಜಿನ ಬಾಕ್ಸ್‌ನಲ್ಲಿ ಶೇಖರಣೆ ಆಗುತ್ತಿತ್ತು. ಎದುರು ತಂಡದವರು ಇದಕ್ಕೆ ಅಡ್ಡಿ ಪಡಿಸಬಹುದಿತ್ತು. ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್ ಆಗುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಎರಡು ತಂಡಗಳು ಅಖಾಡಕ್ಕೆ ಇಳಿದಿದ್ದವು.
ಒಂದು ತಂಡದಲ್ಲಿ ಡ್ರೋನ್ ಪ್ರತಾಪ್, ಪವಿ ಪೂವಪ್ಪ, ತುಕಾಲಿ ಸಂತೋಷ್, ನಮ್ರತಾ, ವರ್ತೂರು, ಸಿರಿ ಇದ್ದರೆ ಇನ್ನೊಂದು ತಂಡದಲ್ಲಿ ಮೈಕಲ್, ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ಇದ್ದರು. ಈ ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಸ್ನೇಹ, ಆತ್ಮೀಯತೆ
ನೇರ ನಡೆನುಡಿಯ ತನಿಷಾ ಮೊದಲಿನಿಂದಲೂ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ತನಿಷಾ ಅವರಿಗೆ ಏನಾಗಿದೆ? ಯಾವಾಗ ಮತ್ತೆ ಬಿಗ್ ಬಾಸ್ ಮನೆಗೆ ಮರಳಲಿದ್ದಾರೆ? ಎಂದು ಅಭಿಮಾನಿಗಳು ಪ್ರಶ್ನಿಸತೊಡಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಸ್ನೇಹ, ಆತ್ಮೀಯತೆ ಇದೆ. ಹೀಗಾಗಿ ಇಬ್ಬರ ಮಧ್ಯೆ ಗೆಳತನಕ್ಕಿಂತ ವಿಶೇಷವಾದುದು ಏನೋ ಇದೆ ಎಂದು ಇತರ ಸ್ಪರ್ಧಿಗಳು ರೇಗಿಸಿದ್ದರು. ಜತೆಗೆ ವೀಕ್ಷಕರಿಗೂ ಅದೇ ರೀತಿಯ ಅನುಮಾನವೂ ಮೂಡಿತ್ತು. ಮಾತ್ರವಲ್ಲ ಇತ್ತೀಚಿನ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕೂಡ ವರ್ತೂರು ಅವರನ್ನು ಈ ವಿಚಾರವಾಗಿ ರೇಗಿಸಿದ್ದರು. ಇದೆಲ್ಲದರ ಮಧ್ಯೆ ವರ್ತೂರು ಅವರದ್ದು ಎನ್ನಲಾದ ಮದುವೆ ಫೋಟೊಗಳು ವೈರಲ್ ಆದವು. ಈಗಾಗಲೇ ಮದುವೆಯಾಗಿರುವ ವರ್ತೂರು ಸಂತೋಷ್ ಅವರಿಗೆ ಹೆಣ್ಣು ಮಗುವಿದೆ ಎನ್ನುವ ವಿಚಾರವೇ ಚರ್ಚೆಯಾಗುತ್ತಿದೆ.