Site icon Vistara News

BBK Season 10: ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂದ್ರು ಮನೆ ಮಂದಿ!

Varthur Santhosh nominate Bbk 10

ಬೆಂಗಳೂರು: ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್‌ (Varthur Santhosh) ಬಿಗ್‌ ಬಾಸ್‌ ಸೀಸನ್‌ 10ಗೆ (BBK Season 10) ಮರಳಿದ್ದಾರೆ. ಆದರೆ, ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅವರಿಗೆ ಗೆಟ್‌ ಔಟ್‌ ಎಂದಿದ್ದಾರೆ ಮನೆಮಂದಿ.

ವರ್ತೂರು ಸಂತೋಷ್‌ ಅವರು ಬಿಗ್ ಬಾಸ್ ಮನೆ ಒಳಗೆ ಬರುತ್ತಿದ್ದಂತೆ ಉಳಿದ ಸ್ಪರ್ಧಿಗಳು ಪ್ರಶ್ನೆಗಳ ಸುರಿಮಳೆಗೈದರು. ‘ಬಿಸ್ನೆಸ್​ ವಿಚಾರಕ್ಕೆ ಹೊರಗೆ ಹೋಗಿದ್ದೆಯೋ ಅಥವಾ ಆರೋಗ್ಯದ ಸಮಸ್ಯೆ ಕಾಡಿತ್ತೋ’ ಎಂದು ವಿನಯ್ ಕೇಳಿದರು. ‘ನಿಮ್ಮ ಚಿನ್ನವನ್ನು ತೆಗೆದುಕೊಂಡು ಹೋದ್ರಾ’ ಎಂದು ನಮ್ರತಾ ಪ್ರಶ್ನಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ನಾಮಿನೇಷನ್ ವಿಚಾರದ ಬಗ್ಗೆ ಮಾತನಾಡಿದರು.

ಸಂತೋಷ್‌ ಅವರು ನಾಮಿನೇಟ್‌ ಆಗಬೇಕೆ?ಇಲ್ಲವೇ ಎಂದು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆ ಇಟ್ಟರು. ಅದರಂತೆ ಮೈಕಲ್‌ ಮಾತನಾಡಿ, ʻʻನಾವು ಒಂದು ವಾರ ಸ್ಟ್ರಗಲ್‌ ಮಾಡಿ ಬಂದಿದ್ದೇವೆʼʼ ಎಂದರು. ಸಂಗೀತಾ ಕೂಡ ʻಒಂದು ವಾರ ಸಂತೋಷ್‌ ಅವರ ಕೊಡುಗೆ ಏನು ಇರಲಿಲ್ಲ. ಹೀಗಾಗಿ ಅವರು ನಾಮಿನೇಟ್‌ ಆಗಬೇಕುʼʼ ಎಂದರು. ಬಹುತೇಕರು ಇದೇ ಉತ್ತರವನ್ನು ನೀಡಿದ್ದಾರೆ. ಹೀಗಾಗಿ ವರ್ತೂರ್‌ ಸಂತೋಷ್‌ ನಾಮಿನೇಟ್‌ ಆಗುವುದು ಬಹುತೇಕ ಖಚಿತ ಎಂದು ಈ ಪ್ರೋಮೊ ಮೂಲಕ ತಿಳಿದು ಬಂದಿದೆ.

ಇದನ್ನು ಗಮನಿಸುತ್ತಿದ್ದಂತೆಯೇ ಸಂತೋಷ್‌ ಮುಖದಲ್ಲಿನ ಸಂತೋಷದ ನಗು ಮಾಯವಾಗಿದೆ. ಒಂದು ವಾರದಲ್ಲಿ ಮನೆಯೊಳಗಿನ ಲೆಕ್ಕಾಚಾರಗಳೆಲ್ಲ ಬದಲಾಗಿವೆ, ಹಾಗಾಗಿ ಇಲ್ಲಿ ಉಳಿದುಕೊಳ್ಳಲು ತಾವು ನಡೆಸುವ ಸ್ಟ್ರಾಟಜಿ ಕೂಡ ಬದಲಾಗಬೇಕು ಎಂಬುದು ಅವರ ಅರಿವಿಗೆ ಬಂದಂತಿದೆ.

ಈಗಷ್ಟೇ ಮನೆಯ ಹೊರಗೆ ಒಂದು ಪರೀಕ್ಷೆಯನ್ನು ಎದುರಿಸಿ ಮರಳಿರುವ ಸಂತೋಷ್ ಮನೆಯೊಳಗಿನ ಹಲವು ರೀತಿಯ ಪರೀಕ್ಷೆಗಳನ್ನು ಹೇಗೆ ಎದುರಿಸುತ್ತಾರೆ? ಅದರಲ್ಲಿ ಗೆಲ್ಲುತ್ತಾರಾ ಅಥವಾ ಸೋತು ಮರಳುತ್ತಾರಾ?

ಕಮೆಂಟ್‌ನಲ್ಲಿ ಪ್ರೇಕ್ಷಕರು ʻʻವರ್ತೂರು ಸಂತೋಷ್ ಇನ್ಮೇಲಾದ್ರು ತುಕಾಲಿ ಜತೆ ಸೇರ್ಕೊಂಡು ಪ್ರತಾಪ್ ಅವರನ್ನು ಟಾರ್ಗೆಟ್ ಮಾಡೋದು ನಿಲಿಸಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಒಳಗಡೆ ಅವರು ಆಟ ಅಡಲಿ ಹೊರಗಡೆ ನಮ್ ಆಟ ತೋರಿಸ್ತೀವಿ ಜೈ ಪ್ರತಾಪ್!ʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಕಲರ್ಸ್‌ ಕನ್ನಡ ಪ್ರೋಮೊ

ಇದನ್ನೂ ಓದಿ: BBK Season 10: ನೀತುಗೆ ʻಮುಚ್ಕೊಂಡು ಇರಿʼ ಎಂದ ಕಾರ್ತಿಕ್‌; ಬೇಕು ಅಂತ್ಲೇ ಕೂಗಿದ್ರಾ?

14 ದಿನಗಳ ನ್ಯಾಯಾಂಗ ಬಂಧನ

ಹಳ್ಳಿಕಾರ್‌ ತಳಿಗಳ ಸಂರಕ್ಷಕನಾಗಿ, ಪ್ರಗತಿಪರ ರೈತನಾಗಿ ಗಮನ ಸೆಳೆದು ಹಳ್ಳಿಕಾರ್‌ ಒಡೆಯ ಎಂದೇ ಹೆಸರಾಗಿದ್ದ ಶ್ರೀಮಂತ ರೈತರ ವರ್ತೂರು ಸಂತೋಷ್‌ ಅವರು ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಆಡುತ್ತಾ ಎಲ್ಲರ ಗಮನ ಸೆಳೆದಿದ್ದರು. ಅವರದ್ದೇ ಆದ ಅಭಿಮಾನಿ ವರ್ಗವೂ ಸೃಷ್ಟಿಯಾಗಿತ್ತು.

ಈ ನಡುವೆ, ಅವರು ಹುಲಿಯ ಉಗುರು ಇರುವ ಪೆಂಡೆಂಟ್‌ ಧರಿಸಿದ್ದನ್ನು ಟೀವಿಯಲ್ಲಿ ಗಮನಿಸಿದ್ದ ಅರಣ್ಯಾಧಿಕಾರಿಗಳು ಅವರ ಮೇಲೆ ಕ್ರಮಕ್ಕೆ ಮುಂದಾಗಿದ್ದರು. ಕಳೆದ ಭಾನುವಾರ (ಅಕ್ಟೋಬರ್‌ 22) ಅರಣ್ಯಾಧಿಕಾರಿಗಳು ಬಿಗ್‌ ಬಾಸ್‌ ಮನೆಗೇ ದಾಳಿ ಮಾಡಿ ಅವರನ್ನು ಬಂಧಿಸಿ ಕರೆದೊಯ್ದಿದ್ದರು. ಸೋಮವಾರ ಅವರನ್ನು ವಿಚಾರಣೆ ನಡೆಸಿ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದಾಗ ಕೋರ್ಟ್‌ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ (ನವೆಂಬರ್‌ 16ರವರೆಗೆ ವರೆಗೆ) ವಿಧಿಸಿತ್ತು.

ವರ್ತೂರು ಸಂತೋಷ್‌ ಪರ ಜನಾಭಿಪ್ರಾಯ

ವರ್ತೂರು ಸಂತೋಷ್‌ ಅವರನ್ನು ಹುಲಿಯುಗುರಿನ ಕಾರಣಕ್ಕೆ ಬಿಗ್‌ ಬಾಸ್‌ ಮನೆಯಿಂದ ಬಂಧಿಸಿದ್ದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಸಂತೋಷ್‌ ಅವರಂತೆಯೇ ಇನ್ನೂ ಹಲವು ಸೆಲೆಬ್ರಿಟಿಗಳು ಹುಲಿಯ ಉಗುರು ಧರಿಸಿದ್ದಾರೆ, ಅವರನ್ನೂ ಬಂಧಿಸಿ ಎಂದು ಸಾರ್ವಜನಿಕರ ಒತ್ತಾಯ ಹೆಚ್ಚಾಗಿತ್ತು. 

Exit mobile version