Site icon Vistara News

Varthur Santhosh: ಟೀಕೆಗಳಿಗೆ ಮನನೊಂದು ಕಣ್ಣೀರಿಟ್ಟ ವರ್ತೂರ್‌ ಸಂತೋಷ್‌!

Varthur Santhosh tears

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಅವರ ವಿರುದ್ಧ ಹಲವರು ಟೀಕೆ ಮಾಡುವವರು ಇದ್ದಾರೆ. ವರ್ತೂರು ಸಂತೋಷ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ. ಕೆಟ್ಟದಾಗಿ ಟೀಕೆಗಳನ್ನು ಮಾಡುತ್ತಿರುವುದರಿಂದ ತಾಯಿ ಊಟ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಯೂಟ್ಯೂಬ್ ಚಾನೆಲ್​ನಲ್ಲಿ ಗೆಳೆಯರ ಜತೆ ವಿಡಿಯೊ ಮಾಡಿರುವ ವರ್ತೂರು ಸಂತೋಷ್, ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯುಟ್ಯೂಬ್‌ ಚಾನಲ್‌ ವೊಂದರ ಬಗ್ಗೆ ಹಾಗೂ ಒಬ್ಬ ವ್ಯಕ್ತಿಯ ಬಗ್ಗೆ ಕಟುವಾಗಿಯೇ ಏಕವಚನದಲ್ಲಿ ಮಾತನಾಡಿದ್ದಾರೆ.

ವರ್ತೂರ್‌ ಸಂತೋಷ್‌ (Varthur Santhosh) ಮಾತನಾಡಿ ʻʻಇಡೀ ಕರ್ನಾಟಕ ಜನತೆಗೆ ನಾನು ಹೇಳೋದು ಒಂದೇ. ಇಂದು ಬಹಳ ನೋವಾಗಿದೆ. ನನ್ನ ತಾಯಿ ನನ್ನ ತಂದೆಯನ್ನು ಕಳೆದುಕೊಂಡ ನಂತರ ಗೌರವದಿಂದ ನನ್ನನ್ನು ಸಾಕಿದರು. 2022ರಲ್ಲಿ ರೇಸ್‌ ಮಾಡಿದಾಗ ಬಂದು ಎಂಜಲು ಕಾಸು ತಿಂದ ಮಕ್ಕಳು ಇವರು. ನಮ್ಮ ಅನ್ನ ತಿಂದು ಇವತ್ತು ನಮಗೆ ಅನ್ನುತ್ತಾರೆ. ಅದಕ್ಕೆ ಭಗವಂತನೇ ಸಾಕ್ಷಿ. ನಮ್ಮ ರೇಸ್‌ನಲ್ಲಿ ಇವರೆಲ್ಲ ಒಂದು ಸಾವಿರ, ಎರಡು ಸಾವಿರಕ್ಕೆ ಬಂದವರುʼʼಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: Varthur Santhosh: `ಹಳ್ಳಿಕಾರ್ ಒಡೆಯ’ ವಿವಾದದ ಬಗ್ಗೆ ವರ್ತೂರ್‌ ಸಂತೋಷ್‌ ರಿಯಾಕ್ಷನ್‌ ಏನು?

ʻʻಇಷ್ಟೆಲ್ಲ ವಿಡಿಯೊಗಳನ್ನು ಮಾಡುತ್ತಾರೆ. ನಾನು ಮಾತನಾಡಿರುವ ವಿಡಿಯೊ ಯಾವುದಾದರೂ ಹಾಕಿದ್ದಾರಾ? ಕಮೆಂಟ್‌ ಸೆಕ್ಷನ್‌ ಆಫ್‌ ಮಾಡುತ್ತಾರೆ. ನಾನು ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಈ ಮೂಲಕ ಹೇಳುವುದೇನಂದ್ರೆ, ನಾನು ಇದೂವರೆಗೂ ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಒಬ್ಬರ ಅನ್ನ ಕಿತ್ತುಕೊಂಡಿಲ್ಲʼʼ ಎಂದರು.

ʻʻಕರ್ನಾಟಕ ಜನರು ನನ್ನ ಧರ್ಮ, ದೇವರು. ಇಷ್ಟು ಬೆಳಿಸಿದ್ದೀರಾ ನನ್ನನ್ನು. ನಾನು ಯಾರ ಅನ್ನ ಕಿತ್ತುಕೊಂಡಿಲ್ಲ. ನಾವು ತುಂಬಾ ಮರ್ಯಾದೆ ಇಂದ ಬದುಕಿದ್ದವರು. ನಮ್ಮ ತಾಯಿ ಊಟ ಮಾಡಲ್ಲ ಅಣ್ಣ. ಈ ನನ್ ಮಕ್ಕಳು ಒಂದೊಂದಲ್ಲ ಅಣ್ಣ. ಆ ರೆಕಾರ್ಡಿಂಗ್‌ಗಳು ಎಲ್ಲೆಲ್ಲಿ ಸಿಗ್ತಾವೋ ಆ ಭಗವಂತನಿಗೆ ಗೊತ್ತು. ನಮ್ಮ ಹಾಗೇ ಇದ್ದು, ನಮ್ಮೊಂದಿಗೆ ಇದ್ದು ಹೀಗೆ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳು ತಣ್ಣಗಿರಲಿʼʼಎಂದು ಬೇಸರ ಹೊರಹಾಕಿದ್ದಾರೆ. ಮಾತ್ರವಲ್ಲ ತಮ್ಮ ಬಗ್ಗೆ ಈ ರೀತಿ ಇಲ್ಲ ಸಲ್ಲದ ವಿಚಾರಗಳನ್ನು ಪೋಸ್ಟ್‌ ಮಾಡಿದ ಯೂಟ್ಯೂಬ್ ಚಾನೆಲ್​ ಅನ್ನು ರಿಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.

Exit mobile version