Site icon Vistara News

BBK SEASON 10:  ಸಂಗೀತಾ ಬಳಿಕ ಫಿನಾಲೆಗೆ ಕಾಲಿಟ್ಟ ಸಂತು-ಪಂತು ಜೋಡಿ!

Varthur Santhosh tukali santhosh Entered Bigg Boss Kannada Finale After Sangeetha Sringeri

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10 ) ಜ.20ರಂದು ವೀಕೆಂಡ್‌ ಪಂಚಾತಿಯಲ್ಲಿ ಕಿಚ್ಚ ಸುದೀಪ್‌ ಅವರು ಇನ್ನೊಬ್ಬ ಸ್ಪರ್ಧಿ ಫಿನಾಲೆಗೆ ಕಾಲಿಟ್ಟಿದ್ದಾರೆ ಎಂದು ಘೋಷಿಸಿದರು. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಗ್ರ್ಯಾಂಡ್ ಫಿನಾಲೆಗೆ ಕಾಲಿಟ್ಟ 2ನೇ ಸ್ಪರ್ಧಿ ಎಂಬ ಪಟ್ಟವನ್ನು ‘ತುಕಾಲಿ ಸ್ಟಾರ್’ ಪಡೆದಿದ್ದಾರೆ. ಈಗಾಗಲೇ ಸಂಗೀತಾ ಅವರು ಫಿನಾಲೆಗೆ ನೇರವಾಗಿ ಟಿಕೆಟ್‌ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ‘ಬಿಗ್​ ಬಾಸ್​ ಫಿನಾಲೆ ತಲುಪುವ ಮೂರನೇ ಸ್ಪರ್ಧಿ ವರ್ತೂರು ಸಂತೋಷ್​’ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದಾಗ ಎಲ್ಲರಿಗೂ ಅಚ್ಚರಿ ಆಯಿತು.

ಈ ವಾರ ತುಕಾಲಿ ಸಂತೋಷ್‌ ಅವರು ನಾಮಿನೇಟ್‌ ಆಗಿರಲಿಲ್ಲ. ಕೇವಲ ಒಂದು ಮತ ಪಡೆದ ಕಾರಣ ಸೇಫ್‌ ಆಗಿದ್ದರು. ಸುದೀಪ್‌ ಅವರು ಈ ವಿಚಾರವನ್ನು ತಿಳಿಸಿ ಶುಭಾಷಯ ತಿಳಿಸಿದರು. ಇದಾದ ಬಳಿಕ ತುಕಾಲಿ ಕೂಡ ಹೆಂಡತಿಗೆ ಧನ್ಯವಾದ ಸೂಚಿಸಿದರು. ʻʻನನ್ನ ಹೆಂಡ್ತಿಗೆ ಚೆನ್ನಾಗಿ ಆಟ ಆಡ್ತೀನಿ ಅಂತ ಮಾತು ಕೊಟ್ಟಿದ್ದೆ, ಅದನ್ನು ಉಳಿಸಿಕೊಂಡಿದ್ದೇನೆ. ನೀವು ಪ್ರೀತಿ ಕೊಟ್ಟಿದ್ದೀರಾ, ನಿಮಗೂ ಧನ್ಯವಾದ ಸುದೀಪ್ ಅಣ್ಣಾ, ವ್‌ ಯೂ ಅಣ್ಣʼʼಎಂದರು. ಇನ್ನು ಇಬ್ಬರು ಫಿನಾಲೆಗೆ ಹೋಗಬೇಕಿದೆ.

ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ ಬಳಿಕ ಬಿಗ್​ ಬಾಸ್​ ಫಿನಾಲೆ ತಲುಪಿದ ಮೂರನೇ ಸ್ಪರ್ಧಿಯಾಗಿದ್ದಾರೆ ವರ್ತೂರು ಸಂತೋಷ್​. ಈ ವೇಳೆ ತುಕಾಲಿ ಸಂತೋಷ್​ ಅವರು ಹೆಚ್ಚು ಖುಷಿಪಟ್ಟರು. ಕಳೆದ ವಾರ ತುಕಾಲಿ ಸಂತೋಷ್​ ಅಥವಾ ವರ್ತೂರು ಸಂತೋಷ್​ ಅವರಲ್ಲಿ ಒಬ್ಬರು ಬಿಗ್​ ಬಾಸ್ ಮನೆಯಿಂದ ಔಟ್​ ಆಗಲಿದ್ದಾರೆ ಎಂದು ಸುದೀಪ್​ ತಿಳಿಸಿದ್ದರು.

ಇದನ್ನೂ ಓದಿ: BBK SEASON 10: ನೀವಿಲ್ಲದೆ ಈ ಸೀಸನ್‌ ಅಪೂರ್ಣ ಎಂದ ಸುದೀಪ್‌; ವಿನಯ್‌, ಸಂಗೀತಾಗೆ ʻಕಿಚ್ಚನ ಚಪ್ಪಾಳೆʼ!

ವರ್ತೂರ್‌ ಕೂಡ ಈ ಮುಂಚೆ ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸದಂತೆ ವರ್ತೂರ್‌ ಸಂತೋಷ್‌ (Varthur Santhosh) ಅವರು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ʻʻಹಳ್ಳಿಕಾರ್ʼʼ ಹೆಸರು ಇಟ್ಟುಕೊಂಡು ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರೆಂದು ಮಂಡ್ಯದಲ್ಲಿ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಹುಲಿ ಉಗುರು ಪ್ರಕರಣದಲ್ಲಂತೂ ತಾವಾಗಿಯೇ ಮನೆಯಿಂದ ಆಚೆ ಹೋಗಬೇಕು ಅಂದುಕೊಂಡಿದ್ದರು. ಆದರೆ ಇಲ್ಲಿಯತನಕ ಆಡಿ ಇದೀಗ ಫಿನಾಲೆಗೆ ಹೋಗಿದ್ದಾರೆ.

ಇನ್ನು ತುಕಾಲಿ ಸಂತೋಷ್‌ ಕೂಡ ತಮ್ಮ ಕಾಮಿಡಿಗಳಿಂದ ಜನರನ್ನು ಮೆಚ್ಚಿಸಿದ್ದಾರೆ. ಸಂತು-ಪಂತು ಜೋಡಿ ಇಡೀ ಪ್ರೇಕ್ಷಕರನ್ನೇ ಮೋಡಿ ಮಾಡಿತ್ತು. ಸಂತು-ಪಂತು ಸ್ನೇಹ ಮೊದಲ ದಿನದಿಂದಲೂ 15ನೇ ವಾರಾಂತ್ಯದವರೆಗೆ ಉಳಿದುಕೊಂಡು ಬಂದಿದೆ. ಇದನ್ನು ಕಿಚ್ಚ ಸುದೀಪ್ ಕೂಡ ಮೆಚ್ಚಿದ್ದಾರೆ.

ಈ ಹಿಂದೆ ಸಂಗೀತಾ ಅವರು  ʻಕ್ಯಾಪ್ಟನ್ಸಿ ಟಾಸ್ಕ್ʼ ಹಾಗೂ ʻಟಿಕೆಟ್​ ಟು ಫಿನಾಲೆʼ ಎರಡೂ ಗೆದ್ದಿದ್ದರು ಸಂಗೀತಾ ಗೆದ್ದು ಕ್ಯಾಪ್ಟನ್ ಪಟ್ಟ ಹಾಗೂ ಫಿನಾಲೆ ಟಿಕೆಟ್ ಎರಡನ್ನೂ ಪಡೆದಿದ್ದರು. ಜನವರಿ 27 ಮತ್ತು 28ರಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 10’ ಫಿನಾಲೆ ನಡೆಯಲಿದೆ.

ಡೇಂಜರ್‌ ಝೋನ್‌ನಲ್ಲಿ ಕಾರ್ತಿಕ್, ನಮ್ರತಾ, ವಿನಯ್ ಹಾಗೂ ಪ್ರತಾಪ್ ಉಳಿದುಕೊಂಡಿದ್ದಾರೆ. ಇವರಲ್ಲಿ ಇನ್ನು ಯಾರಿಬ್ಬರು ಫಿನಾಲೆಗೆ ಎಂಟ್ರಿ ಕೊಡುತ್ತಾರೆ ಮತ್ತು ಯಾರು ಮನೆಯಿಂದ ಎಲಿಮಿನೇಟ್‌ ಆಗಿ ಹೊರ ನಡೆಯುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. 

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version