Site icon Vistara News

BBK Season 10: ಅತಿ ಹೆಚ್ಚು ಮತ ಗಳಿಸಿದ ವರ್ತೂರ್‌ ಸಂತೋಷ್‌!

Varthur Santhosh

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎಂಟನೇ ವಾರ ಯಾರು ಹೆಚ್ಚು ವೋಟ್‌ ಪಡೆದಿದ್ದಾರೆ ಎಂದು ರಿವೀಲ್‌ ಆಗಿದೆ. ಕಿಚ್ಚ ಸುದೀಪ್ ಮನೆಯ ಸದಸ್ಯರು ವಾರಪೂರ್ತಿ ಮಾಡಿದ ಆಡಿದ ಆಟ, ಆಡಿದ ರೀತಿ ಇನ್ನಿತರೆ ವಿಚಾರಗಳನ್ನು ಇಟ್ಟುಕೊಂಡು ಚರ್ಚಿಸಿದರು. ಜತೆಗೆ ವರ್ತೂರ್‌ ಈ ವಾರ ಹೆಚ್ಚು ವೋಟ್‌ ಪಡೆದು ಮೊದಲು ಸೇವ್‌ ಆದ ಸ್ಪರ್ಧಿಯಾಗಿದ್ದಾರೆ. ವರ್ತೂರ್‌ ಸಂತೋಷ್‌ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರಗಳನ್ನು ಬಿಟ್ಟು ಬೇರೆಲ್ಲಾ ವಿಷಯಗಳಿಗೆ ಚರ್ಚೆಯಾಗುತ್ತಾರೆ. ವೀಕ್ಷಕರಿಗೆ ವರ್ತೂರ್ ಅವರ ಖಾಸಗಿ ಜೀವನ ಮತ್ತು ವೈಯಕ್ತಿಕ ವಿಷಯಗಳು ಹೆಚ್ಚು ಮನರಂಜನೆ ನೀಡುತ್ತಿವೆ

ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಮೈಕಲ್ ಅಜಯ್, ವಿನಯ್ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ ನಾಮಿನೇಟ್ ಆಗಿದ್ದರು. ಮೊದಲೇ ವರ್ತೂರ್‌ ಸೇವ್‌ ಎಂದು ಗೊತ್ತಾದ ಕೂಡಲೇ ಸ್ನೇಹಿತ್‌ ಮನೆಯಿಂದ ಹೊರಗೆ ಹೋಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಕಳೆದ ವಾರ ಡ್ರೋನ್‌ ಪ್ರತಾಪ್‌ ಹೆಚ್ಚು ವೋಟ್‌ ಪಡೆದುಕೊಂಡಿದ್ದರು. ಈ ವಾರ ವಿನಯ್ ಗೌಡ, ತನಿಷಾ ಕುಪ್ಪಂಡ, ಸಂಗೀತಾ, ಮೈಕಲ್, ಕಾರ್ತಿಕ್ ಅವರಂತಹ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದರೂ ಕೂಡ ವರ್ತೂರ್‌ ಹೆಚ್ಚು ವೋಟ್‌ ಪಡೆದು ಮೊದಲಿಗೆ ಸೇವ್‌ ಆದರು.

ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್‌ (Varthur Santhosh) ಬಿಗ್‌ ಬಾಸ್‌ ಸೀಸನ್‌ 10ಗೆ (BBK Season 10) ಮರಳಿ ಮತ್ತೆ ಆಟ ಪ್ರಾರಂಭಿಸಿದ್ದರು. ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಇನ್ಸಿಡೆಂಟ್‌ ನಡೆಯಿತು. ನಾನು ಅದರಿಂದ ಹೊರಗಡೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಡಲು ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟ ಪಡುತ್ತೇನೆʼʼಎಂದಿದ್ದರು. ಸುದೀಪ್‌ ಕೂಡ ಗರಂ ಆಗಿ ʻʻನಿಮಗೆ ಬಂದಿರುವಂತಹ ವೋಟ್ಸ್‌ 34,15, 472. ಜನಗಳ ವಿರುದ್ಧ ನಾನು ಹೋಗೋದಕ್ಕೆ ಆಗಲ್ಲ. ಹೋಗೋದು ಇಲ್ಲ. ನನಗೆ ಸ್ವಲ್ಪ ನಿರಾಸೆಯಾಯ್ತುʼʼಎಂದು ವೇದಿಕೆಯಿಂದ ಹೊರಟೇ ಬಿಟ್ಟಿದ್ದರು. ಬಳಿಕ ವರ್ತೂರ್‌ ಅವರ ತಾಯಿ ಬಂದ ನಂತರ ಆಟ ಮುಂದುವರಿಸುತ್ತಿರುವಾಗಿ ವರ್ತೂರ್‌ ಹೇಳಿ, ಇಲ್ಲಿಯ ತನಕ ಬಂದು ನಿಂತಿದ್ದಾರೆ.

ಇದನ್ನೂ ಓದಿ: BBK SEASON 10: ಸ್ನೇಹಿತ್‌ ಸೇಫ್‌? ಈ ವಾರ ನೋ ಎಲಿಮಿನೇಷನ್‌?

ಈ ವಾರ ಹೆಚ್ಚು ವೋಟ್ ಪಡೆದು ಎರಡನೇ ಸ್ಥಾನದಲ್ಲಿ ನಮ್ರತಾ ಗೌಡ, ಮೂರನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ಇದ್ದು ಇಬ್ಬರೂ ಸೇಫ್ ಆಗಿದ್ದಾರೆ. ವಿನಯ್ ಗೌಡ, ಮೈಕಲ್, ಸ್ನೇಹಿತ್, ತನಿಶಾ, ಸಂಗೀತಾ ಇನ್ನು ನಾಮಿನೇಷನ್‌ನಿಂದ ಸೇಫ್ ಆಗಿಲ್ಲ. ಆದರೆ, ಇವರಲ್ಲಿ ಈ ಬಾರಿ ಸ್ನೇಹಿತ್ ಗೌಡ ಮನೆಯಿಂದ ಹೋಗುವ ಸಾಧ್ಯತೆಯಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version