ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ವರ್ತೂರ್ ಸಂತೋಷ್ (Varthur Santhosh) ಬದಲಾಗಿದ್ದಾರೆ. ಸೈಲೆಂಟ್ ಆಗಿರುತ್ತಿದ್ದ ವರ್ತೂರ್ ಈಗ ವೈಲೆಂಟ್ ಆಗಿದ್ದಾರೆ. ಹಳ್ಳಿಕಾರ್ ರೈತರ ಹೋರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಅವರ ಉದ್ದೇಶ ಆಗಿತ್ತು. ಆ ಬಳಿಕ ಹುಲಿ ಉಗುರು ಪ್ರಕರಣದಿಂದ ತೊಂದರೆಗೆ ಒಳಗಾದರು ಜೈಲು ಸೇರಿದರು. ನಂತರ ಡಲ್ ಆದರು. ಬಳಿಕ ಮರಳಿ ಬಿಗ್ ಬಾಸ್ಗೆ ತೆರಳಿದಾಗ ಅವರ ಆಟ ಸಂಪೂರ್ಣ ಬದಲಾಯಿತು. ಟಾಪ್ 4 ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಇದೀಗ ತಮ್ಮ ಬಗ್ಗೆ ಟೀಕೆ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ ವರ್ತೂರ್. ವಿಡಿಯೊ ಹಂಚಿಕೊಂಡು ʻʻಚೈಲ್ಡ್ ಚಪಾತಿಗೊಂದು ವಿಡಿಯೊ ಮಾಡಿ. ನಾನು ಈ ಹೋರಿ ಕಟ್ಟಿದಾಗ ಅವನು ಇನ್ನೂ ಚಡ್ಡಿ ಹಾಕುತ್ತಿರಲಿಲ್ಲʼʼಎಂದಿದ್ದಾರೆ.
ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಅನೇಕರು ಹಲವು ಆರೋಪಗಳನ್ನು ಮಾಡಿದ್ದರು. ಹಸುಗಳ ಹೆಸರಲ್ಲಿ ಸಂತೋಷ್ ದುಡ್ಡು ಮಾಡಿದ್ದಾರೆ, ಪ್ರಚಾರಕ್ಕಾಗಿ ಎರಡು ವರ್ಷಗಳಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಈ ಎಲ್ಲ ಮಾತುಗಳಿಗೆ ವರ್ತೂರ್ ಅವರು ಒಂದು ವಿಡಿಯೊ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. ಚಿಕ್ಕವನಿದ್ದಾಗ ಹೋರಿಗಳ ಜತೆ ನಿಂತ ಫೋಟೊ ತೋರಿಸಿದ್ದಾರೆ. ಜತೆಗೆ ‘ಚೈಲ್ಡ್ ಚಪಾತಿಗೊಂದು ವಿಡಿಯೋ ಮಾಡಿ. ಎರಡು ವರ್ಷದಿಂದ ಇದೆಲ್ಲ ಮಾಡುತ್ತಿದ್ದೇನೆ ಎಂದು ಅವನು ಹೇಳುತ್ತಿದ್ದಾನೆ. ನಾನು ಈ ಹೋರಿ ಕಟ್ಟಿದಾಗ ಅವನು ಇನ್ನೂ ಚಡ್ಡಿ ಹಾಕುತ್ತಿರಲಿಲ್ಲ’ ಎಂದಿದ್ದಾರೆ ವರ್ತೂರು ಸಂತೋಷ್.
ಇದನ್ನೂ ಓದಿ: Varthur Santhosh: ಪಟಾಕಿ ಸಿಡಿಸಿ, ಹೂ ಚೆಲ್ಲಿ ಸ್ವಾಗತ ಕೋರಿದ ಮಾಲೂರು ಜನತೆ; ಭಾರಿ ಜನಸ್ತೋಮದಲ್ಲಿ ಮಿಂದೆದ್ದ ಹಳ್ಳಿಕಾರ್!
ಪಟಾಕಿ ಸಿಡಿಸಿ, ಹೂ ಚೆಲ್ಲಿ ಸ್ವಾಗತ ಕೋರಿದ್ದ ಮಾಲೂರು ಜನತೆ
ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಹೋರಿಗಳ ತಳಿ ರಕ್ಷಣೆ ಮಾಡಲು ಪಣ ತೊಟ್ಟಿದ್ದಾರೆ. ಈ ಉದ್ದೇಶ ಇಟ್ಟುಕೊಂಡು ಬಿಗ್ ಬಾಸ್ ಮನೆಗೆ ಸೇರಿದರು. ಅವರ ಆಟದ ವೈಖರಿ ಕಂಡು ಫ್ಯಾನ್ಸ್ ಫಿದಾ ಆಗಿದ್ದರು. ಈಗ ಅವರು ಕೋಲಾರ ಸಮೀಪದ ಮಾಲೂರಿಗೆ ತೆರಳಿದ್ದರು. ಈ ವೇಳೆ ಜನ ಸೆಲ್ಫಿಗೆ ಮುಗಿ ಬಿದ್ದರು.ವರ್ತೂರು ಸಂತೋಷ್ ಅವರು ಮಾಲೂರಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ ಹೂವಿನ ದಳಗಳನ್ನು ಹಾಕಿ ಅವರನ್ನು ಸ್ವಾಗತಿಸಲಾಯಿತು. ಅವರು ಹೋದಲೆಲ್ಲ ಜನರೇ ನೆರೆದಿದ್ದರು. ಹೊಸಕೋಟೆ, ಚನ್ನಪಟ್ಟಣಕ್ಕೆ ವರ್ತೂರು ಸಂತೋಷ್ ತೆರಳಿದ್ದರು. ವರ್ತೂರ್ ಸಂತೋಷ್ ಈಗಾಗಲೇ ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಬಗ್ಗೆಯೂ ಹೇಳಿಕೊಂಡಿದ್ದಾರೆ.ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.