Site icon Vistara News

BBK Season 10: ಆಚೆ ಹೋಗಲ್ಲ ಎಂದು ಡ್ರೋನ್ ಪ್ರತಾಪ್‌ ಜತೆ ವರ್ತೂರ್ ಗೇಮ್ ಪ್ಲ್ಯಾನ್!

Varthur santosh drone Prathap bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10(BBK Season 10)ರಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗುತ್ತಿವೆ. ಸ್ಪರ್ಧಿ ವರ್ತೂರು ಸಂತೋಷ್ (Varthur Santhosh)​ ಮನೆಯಿಂದ ಹೊರ ಹೋಗುವುದಾಗಿ ಪಟ್ಟು ಹಿಡಿದು ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಅವರು ಬಿಗ್‌ಬಾಸ್‌ ಮನೆಯಲ್ಲಿ ಇರುತ್ತಾರಾ ಅಥವಾ ಹೊರ ಹೋಗುತ್ತಾರಾ? ಎನ್ನುವ ವಿಚಾರ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿತ್ತು. ಇದೀಗ ಗೊಂದಲಕ್ಕೆ ತೆರೆ ಬಿದ್ದಿದ್ದು ಅವರು ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಮಾತ್ರವಲ್ಲಮಾವುತನಾಗಿ ತೋರಿಸ್ತೀನಿ ಎಂದು ತೊಡೆ ತಟ್ಟಿ ನಿಂತಿದ್ದಾರೆ. ವಿನಯ್‌ ಅವರನ್ನು ಬಗ್ಗಿ ಬಡಿಯುತ್ತೇನೆ ಎಂದು ನೀತು ಅವರ ಮುಂದೆ ಹೇಳಿಕೆ ನೀಡಿದರು.

ವರ್ತೂರು ಸಂತೋಷ್​ ಅವರ ತಾಯಿ ಬಿಗ್‌ ಬಾಸ್‌ ಮನೆಯೊಳಗೆ ಬಂದು ಮಗನ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಆಟವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಮೊದಲಿಗೆ ʼ‘ನನ್ನಿಂದ ಸಾಧ್ಯವಿಲ್ಲʼʼ ಎಂದು ಕಣ್ಣೀರು ಹಾಕಿದ ವರ್ತೂರು ಸಂತೋಷ್​ ಬಳಿಕ ತಾಯಿಯ ಮಾತನ್ನು ಒಪ್ಪಿಕೊಂಡಿದ್ದಾರೆ. ಸ್ಪರ್ಧೆಯಿಂದ ಅರ್ಧದಲ್ಲೇ ಹೊರ ಹೋಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ʼʼಈಗ ಗೇಮ್​ ಸ್ಟಾರ್ಟ್​ʼʼ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಕೈಯ ಸಹಾಯ ಇಲ್ಲದೆ ಶಾರ್ಟ್ಸ್ ಧರಿಸುವ ಚಟುವಟಿಕೆ ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್​ನಲ್ಲಿ ವರ್ತೂರು ಸಂತೋಷ್ ಅವರು ಕೂಡ ಆಡಿದ್ದಾರೆ. ಈ ಮೂಲಕ ಅವರು ಮನೆಗೆ ದಿನಸಿ ವಸ್ತುಗಳನ್ನು ಕೊಡಿಸಿದ್ದಾರೆ.

ಇದನ್ನೂ ಓದಿ: BBK Season 10: ನೀವು ಸಂತೋಷ್‌ ಮದುವೆ ಆದ್ರೆ ಮುಂದೆ ಕಥೆ ಏನು? ತನಿಷಾಗೆ ನಮ್ರತಾ ಪ್ರಶ್ನೆ!

ಮಾವುತ ಆಗ್ತೀನಿ ಎಂದ ವರ್ತೂರ್‌

ಡ್ರೋನ್ ಪ್ರತಾಪ್‌ ಜತೆ ಗೇಮ್ ಪ್ಲ್ಯಾನ್ ಕೂಡ ಮಾಡಲು ಮುಂದಾಗಿದ್ದಾರೆ. ʻʻಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೂ ಆನೆ ಹೊಡಲಿಕ್ಕೆ ಆಗಲ್ಲ ಎಂದು ಸುದೀಪ್‌ ಅವರು ಹೇಳ್ತಾ ಇದ್ರು. ಇದರ ಅರ್ಥ ಯಾರಿಗೂ ಬಲ ಇಲ್ಲ ಅಂತಲ್ಲ. ನಾವು ಮಾವುತ ಆಗಿಬಿಡೋಣ. ಆಡಿ ತೋರಿಸೋರ ಮುಂದೆ ಮಾಡಿ ತೋರಿಸಬೇಕುʼʼ ಎಂತಲೂ ವರ್ತೂರ್‌ ಹೇಳಿದ್ದಾರೆ.

ಹೊರಗಡೆ ಎಲ್ಲ ಚೆನ್ನಾಗೇ ಇದೆ, ಗೆದ್ದು ಬಾ ಮಗನೆ!

ಸಂತೋಷ್‌ ತಾಯಿ ಮಂಜುಳಾ ಅವರು ಮಗನಿಗೆ ಕನ್ವಿನ್ಸ್‌ ಮಾಡಿ ʻʻ’ನೀನು ಇಲ್ಲಿ ಆಡಬೇಕು ಎಂದು ತುಂಬ ಜನ ವೋಟ್ ಹಾಕಿದ್ದಾರೆ. ಬಿಗ್ ಬಾಸ್‌ ಮನೆ ಬಳಿ ಬಸ್ ಮಾಡ್ಕೊಂಡು ಜನ ಬಂದಿದ್ದಾರೆ. ಅವರಿಗೆಲ್ಲ ನೀನಿಲ್ಲಿ ಆಡಬೇಕು ಎಂಬುದಷ್ಟೇ ಆಸೆ. ಆಚೆ ಎಲ್ಲವೂ ಚೆನ್ನಾಗೇ ಇದೆ. ನಿನಗ್ಯಾಕೆ ಡೌಟ್‌? ಇಷ್ಟೊಂದು ಜನರು ನಿನ್ನ ಬೆನ್ನ ಹಿಂದೆ ಇರುವಾಗ, ನೀನು ಅವರಿಗೆ ಗೌರವ ಕೊಡಬೇಕೋ, ಬೇಡ್ವೋ? ನೀನೀಗ ಒಳಗೆ ಹೆಜ್ಜೆ ಇಟ್ಟುಬಿಟ್ಟಿದ್ದೀಯಾ. ಈಗ ಹಿಂದಕ್ಕೆ ಇಡಬೇಡʼʼಎಂದು ಮನವೊಲಿಸಿದರು.

ಜನರಿಗೋಸ್ಕರ ಆಡ್ತೀನಿ

ಇದಾದ ಬಳಿಕ ವರ್ತೂರ್‌ ಅವರು ಕ್ಯಾಮೆರಾ ಮುಂದೆ ನಿಂತು ʻʻಸುದೀಪಣ್ಣಂಗೆ ಮತ್ತು ನನಗೆ ವೋಟ್ ಮಾಡಿದ ಎಲ್ಲ ಜನತೆಗೆ ಹೇಳುವುದು ಏನೆಂದರೆ ನನಗೆ ಹೊರಗಡೆ ಆಗಿದ್ದ ಸಮಸ್ಯೆ ನಿಮ್ಮೆಲ್ಲರಿಗೂ ಗೊತ್ತಿದೆ. ಅದರಿಂದ ಡಿಸ್ಟರ್ಬ್‌ ಆಗಿದ್ದೆ. ನಾನು ಗೆಲ್ಲುವುದಕ್ಕಾಗಿಯೇ ಆಡುತ್ತೇನೆ. ನಾನು ಇಲ್ಲಿ ಆಡಬೇಕು ಎಂದು ಜನರು ಬಯಸಿದ್ದಾರೆ. ಅವರಿಗೋಸ್ಕರ ನಾನು ಇಲ್ಲಿದ್ದು, ಗೆಲ್ಲುವುದಕ್ಕಾಗಿಯೇ ಆಡುತ್ತೇನೆ’ ಎಂದು ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version