Site icon Vistara News

BBK SEASON 10: ಕಿಚ್ಚನ ಪಂಚಾಯಿತಿಯಲ್ಲಿ ಚರ್ಚಸಬೇಕಾದ ವಿಷಯಗಳನ್ನು ಪಟ್ಟಿ ಮಾಡಿ ಕೊಟ್ಟ ನೆಟ್ಟಿಗರು!

viewers listed the topics to be discussed in Kichchan Panchayati

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಎಂಟನೇ ವಾರ ಮುಕ್ತಾಯ ಹಂತಕ್ಕೆ ತಲುಪಿದೆ. ವಿನಯ್, ವರ್ತೂರ್‌ ಸಂತೋಷ್‌, ತನಿಷಾ, ಸ್ನೇಹಿತ್‌, ಸಂಗೀತಾ, ಪ್ರತಾಪ್‌, ನಮ್ರತಾ, ಮೈಕಲ್‌ ನಾಮಿನೇಟ್‌ ಆಗಿದ್ದಾರೆ. ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗುತ್ತದೆ ಎಂಬುದು ಕಿಚ್ಚನ ಪಂಚಾಯಿತಿಯಲ್ಲಿ ಗೊತ್ತಾಗಲಿದೆ. ಇದೀಗ ಪ್ರೇಕ್ಷಕರು ಯಾವೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಗಬೇಕು ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK SEASON 10: ತಲೆಗೆ ಹೊಡ್ದಿಲ್ಲ, ಪ್ರತಾಪ್‌ ಆರೋಪ ಸುಳ್ಳು ಎಂದ ಡಾಕ್ಟರ್‌; ಮಾನನಷ್ಟ ಮೊಕದ್ದಮೆ ಎಚ್ಚರಿಕೆ

ಕಳೆದ ಬಾರಿ ಕ್ಯಾಪ್ಟನ್ ಆಗಿದ್ದ ನೀತು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಈ ಬಾರಿ ಸ್ನೇಹಿತ್ ಕೂಡ ಕ್ಯಾಪ್ಟನ್ ಆಗಿದ್ದು ಎಲಿಮಿನೇಷನ್ ಆಗುತ್ತಾರಾ ಎಂಬ ಚರ್ಚೆಗಳು ಶುರುವಾಗಿವೆ. ಕಿಚ್ಚನ ಚಪ್ಪಾಳೆ ಬಗ್ಗೆಯೂ ಹಲವು ಚರ್ಚೆಗಳು ಆಗುತ್ತಿವೆ. ನಮ್ರತಾ, ತನಿಷಾಗೋಸ್ಕರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಆಡಿದ್ದರು. ಆದ್ದರಿಂದ ಮನೆಯಲ್ಲಿ ಎಲ್ಲರೂ ಕೂಡ ನಮ್ರತಾ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂದು ಹೊಗಳಿದರು. ಮಾತ್ರವಲ್ಲ ಈ ವಾ ಕಾರ್ತಿಕ್‌ ಅವರು ಕೂಡ ಉಸ್ತುವಾರಿಯನ್ನು ಚೆನ್ನಾಗಿ ನಿಭಾಯಿಸಿದರು. ಅವರಿಗೂ ಕಿಚ್ಚನ ಚಪ್ಪಾಳೆ ಸಿಗಬೇಕು ಎಂಬುದು ಹಲವರು ವಾದ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version