ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK SEASON 10) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ʻಬಿಗ್ ಬಾಸ್ʼ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಮೈಕಲ್, ವಿನಯ್ ಸಿಡಿದೆದಿದ್ದಾರೆ. ಬಿಗ್‌ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯ ಇದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು ಎಂಬ ಚರ್ಚೆ ನಡೆದಾಗ ಡ್ರೋನ್ ಪ್ರತಾಪ್ ಕೊಟ್ಟ ಆಯ್ಕೆಗಳು ಮೈಕಲ್, ವಿನಯ್‌ಗೆ ಸರಿ ಎನಿಸಲಿಲ್ಲ. ಹೀಗಾಗಿ, ‘’ನಿನ್ನದು ಈಗೋ ಗೇಮ್ ಆಗ್ತಿದೆʼ ಎಂದು ಡ್ರೋನ್ ಪ್ರತಾಪ್‌ಗೆ ಮೈಕಲ್, ವಿನಯ್ ಹೇಳಿದ್ದಾರೆ.
ವಿನಯ್ ಅವರು, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ. ಇದಕ್ಕೆ ಸಂಗೀತಾ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಡ್ರೋನ್ ಅವರ ಆಯ್ಕೆ ವಿಚಾರದಲ್ಲಿ ವಿನಯ್, ಮೈಕಲ್ ಸಿಡಿದೆದ್ದರು. 10 ಲಕ್ಷ ರೂಪಾಯಿ ಗಳಿಸಲು ಈ ವಾರದ ಮೂರನೇ ಟಾಸ್ಕ್ ಅನ್ನು ‘ಬಿಗ್ ಬಾಸ್’ ನೀಡಿದರು. ಯಾವ 4 ಸ್ಪರ್ಧಿಗಳು ಆಡಬೇಕು, ಯಾವ 5 ಸ್ಪರ್ಧಿಗಳು ಆಡಬಾರದು ಎಂದು ತನಿಷಾ ಹೊರತುಪಡಿಸಿ ಪ್ರತಿಯೊಬ್ಬರೂ ಹೇಳಬೇಕು ಎಂದು ‘ಬಿಗ್ ಬಾಸ್’ ಸೂಚಿಸಿದರು.
ಬಹುತೇಕರು ಸೂಚಿಸಿದ್ದು ವಿನಯ್, ಕಾರ್ತಿಕ್, ಮೈಕಲ್ ಹಾಗೂ ತುಕಾಲಿ ಸಂತು. ಆದರೆ, ಡ್ರೋನ್ ಪ್ರತಾಪ್ – ತಮ್ಮನ್ನೂ ಸೇರಿಸಿ ಸಂಗೀತಾ, ನಮ್ರತಾ, ಕಾರ್ತಿಕ್ ಹೆಸರನ್ನ ಹೇಳಿದರು. ʻʻವಿನಯ್ ಯಾಕೆ ಬೇಡ ಅಂದ್ರೆ ಕೆಲವು ಟಾಸ್ಕ್‌ಗಳಲ್ಲಿ ಸ್ಟ್ರಾಟೆಜಿ ಮಾಡ್ತೀನಿ ಅಂತ ಹೋಗಿ ಫೇಲ್ ಆಗಿವೆ’’ ಎಂದರು ಡ್ರೋನ್ ಪ್ರತಾಪ್. ಈ ವೇಳೆ ಮೈಕಲ್, ವಿನಯ್ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಜಗಳ ಆಗಿದೆ.
ವಿನಯ್ ಕೂಡ ಪ್ರತಾಪ್‌ಗೆ ʻʻನನ್ನಿಂದ ಯಾವ ಟಾಸ್ಕ್ ಕೂಡ ಫೇಲ್ ಆಗಿಲ್ಲ. ಇದರಲ್ಲಿ ಈಗೋ ತರೋದು ಬೇಡ. ಟಾಸ್ಕ್‌ಗೆ ಬೇಕಾಗಿರುವ ಸ್ಕಿಲ್ ಮೇಲೆ ಆಯ್ಕೆ ಮಾಡಬೇಕು. ಟಾಸ್ಕ್‌ನಲ್ಲಿ ಪರ್ಸನಲ್ ಬರೋದಿಲ್ಲ. ನೀನು ನಮ್ರತಾನ ಸೆಲೆಕ್ಟ್ ಮಾಡಿದೆ. ಅವಳು ನೀರಲ್ಲಿ ಕಂಫರ್ಟ್ ಇಲ್ಲ.ʼʼಎಂದಿದ್ದಾರೆ. ಮೈಕಲ್ ಕೂಡ ʻʻಈ ಟಾಸ್ಕ್ ಬಗ್ಗೆ ಮಾತ್ರ ಮಾತಾಡಬೇಕು. ನಿನಗೆ ಇಷ್ಟ ಆಗದವರನ್ನ ನೀನು ವೋಟ್ ಮಾಡಬಾರದು ಅಂತ ಮೈಂಡ್‌ಸೆಟ್‌ನಲ್ಲಿ ಆಡ್ತಿದ್ದೀಯಾ. ಅದು ಚೆನ್ನಾಗಿ ಎಲ್ಲರಿಗೂ ಕಾಣ್ತಿದೆʼʼಎಂದಿದ್ದಾರೆ.
ಇದನ್ನೂ ಓದಿ: BBK SEASON 10: ಕುಟುಂಬದಿಂದ ದೂರ ಇರುವಂತೆ ಸಲಹೆ ನೀಡಿದ ಗುರೂಜಿ; ಪ್ರತಾಪ್‌ಗೆ ಶಾಕ್!
ವಿನಯ್ ಕೂಡ ʻʻನಿನ್ನದು ಈಗೋ ವರ್ಸಸ್ ಗೇಮ್ ಆಗ್ತಿದೆ. ಈ ಟಾಸ್ಕ್‌ಗೆ ಏನು ಬೇಕು ಅದನ್ನ ನೋಡಿ ಹೇಳಬೇಕು. ನೀನು ಮಾಡಿದ್ದು ಸ್ಟುಪಿಡ್ ಥರ ಇತ್ತುʼʼಎಂದು ಡ್ರೋನ್‌ಗೆ ಚೆನ್ನಾಗಿ ಜಾಡಿಸಿದ್ದಾರೆ.
ನನಗೆ ಈ ಮನೆಯಲ್ಲಿ ವೋಟ್ ಹಾಕೋರು ಯಾರೂ ಇಲ್ಲ. ಕ್ಯಾಪ್ಟನ್ಸಿ ಬಂದಾಗಲೂ ವೋಟ್ ಹಾಕಲ್ಲ. ಟಾಸ್ಕ್‌ನಲ್ಲೂ ವೋಟ್ ಹಾಕಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು ಡ್ರೋನ್. ಬಿಗ್ ಬಾಸ್’ ನೀಡಿದ ಮೂರನೇ ಟಾಸ್ಕ್‌ನಲ್ಲಿ ವಿನಯ್, ಮೈಕಲ್, ಕಾರ್ತಿಕ್, ತುಕಾಲಿ ಸಂತು ಭಾಗವಹಿಸಿದರು.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ