Site icon Vistara News

BBK SEASON 10: ಎರಡನೇ ಬಾರಿ ಜೈಲಿಗೆ ಸೇರಿದ ಸಂಗೀತಾ; ʻಉತ್ತಮʼರಾದ ವಿನಯ್‌!  

Vinay Becomes Best Performer Sangeetha Gets Kalape in 11th week

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌10ರ (BBK SEASON 10) ಹನ್ನಂದನೇ ವಾರ ಸಂಗೀತಾ ಅವರು ಕಳಪೆ ಪಟ್ಟ ಪಡೆದು ಜೈಲು ಸೇರಿದರೆ, ಅವರ ಶತ್ರು ವಿನಯ್‌ ಅವರು ಉತ್ತಮ ಎನಿಸಿಕೊಂಡರು. ತುಕಾಲಿ ಸಂತೋಷ್‌ ಅವರು ತಮಗೇ ಸ್ಪರ್ಧಿಗಳು ಕಳಪೆ ನೀಡುತ್ತಾರೆ ಎಂದು ಭಾವಿಸಿದ್ದರು. ಆದರೆ ಟಾರ್ಗೆಟ್‌ ಆಗಿದ್ದು ಸಂಗೀತಾ.

ನಮ್ರತಾ ಅವರು ಕ್ಯಾಪ್ಟನ್‌ ಆದ ಬಳಿಕ ವಿನಯ್‌ ಅವರು ʻಸಂಗೀತಾನ ಮನೆಯಿಂದ ಹೊರಗೆ ಹಾಕಬೇಕುʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ʻನಮ್ರತಾ ಅವರು ಕ್ಯಾಪ್ಟನ್ ಆಗಿದ್ದಕ್ಕೆ ಖುಷಿ ಇದೆ. ಬೇರೆ ಯಾರಿಗೂ ನಾನು ಸೋಲೋಕೆ ಇಷ್ಟವೇ ಇರಲಿಲ್ಲʼ ಎಂದಿದ್ದಾರೆ. ಈ ವಾರ ತನಿಷಾ, ತುಕಾಲಿ ಸಂತು, ಮೈಕಲ್, ಕಾರ್ತಿಕ್, ಸಿರಿ ಮುಂತಾದವರು ಸಂಗೀತಾಗೆ ಕಳಪೆ ಪಟ್ಟ ಕೊಟ್ಟರು. ತನಿಷಾ ಅವರು ದಿನಸಿ ವಿಚಾರದ ಕಾರಣವನ್ನು ನೀಡಿದರು. ತನಿಷಾ ಕಾರಣ ನೀಡಿ ʻʻಯಾರದ್ದೂ ಗ್ರಾಫ್ ಚೇಂಜ್‌ ಆಗದೆ, ಇಬ್ಬರೂ ಈಕ್ವಲ್ ಅಮೌಂಟ್ ಹಾಕಿದ್ದರೆ, ಸಾಕಷ್ಟು ಐಟಂಗಳನ್ನ ಕೊಂಡುಕೊಳ್ಳಬಹುದಿತ್ತು. ಅದನ್ನ ಕೇಳಿಸಿಕೊಳ್ಳೋದಕ್ಕೂ ರೆಡಿ ಇರಲಿಲ್ಲ ಎಂದರು.

ತುಕಾಲಿ ಕೂಡ ಸಂಗೀತಾ ರೂಡ್‌ ಆಗಿ ನಡೆದುಕೊಂಡರು ಎಂದರು. ಸಂಗೀತಾ ಅವರಲ್ಲಿ ನಾನು ಅನ್‌ಕಂಟ್ರೋಲಬಲ್ ಈಗೋ ನೋಡಿದ್ದೀನಿ ಎಂದರು ಮೈಕಲ್‌. ಆಟಗಾರರು ತಪ್ಪು ಮಾಡಿದ್ದರೂ, ಕ್ಷಮಿಸಿ, ಸ್ಪೋರ್ಟಿವ್ ಆಗಿ ತಗೊಂಡು ಶೇಕ್ ಹ್ಯಾಂಡ್ ಮಾಡಿದ್ದರೆ ಸಂಗೀತಾ ಎಲ್ಲೋ ನಿಂತಿರುತ್ತಿದ್ದರು ಎಂದು ಕಾರ್ತಿಕ್‌ ಹೇಳಿದರು. ಸಿರಿ ಕೂಡ ಕಳಪೆಯನ್ನೇ ಕೊಟ್ಟರು.

ಆದರೆ ನಮ್ರತಾ ಮಾತ್ರ ಸಂಗೀತಾ ಅವರಿಗೆ ಉತ್ತಮ ಕೊಟ್ಟಿದ್ದಾರೆ. ʻʻನನಗೆ ಮೆಜಾರಿಟಿ ಪಾಯಿಂಟ್ಸ್‌ ಕೊಟ್ಟರು ಎಂದು ನಾನು ಉತ್ತಮ ಕೊಡುತ್ತಿಲ್ಲ. ತುಂಬಾ ಭಿನ್ನಾಭಿಪ್ರಾಯಗಳಿದ್ದವು ನಮ್ಮಿಬ್ಬರ ಮಧ್ಯೆ. ಈ ಬಾರಿ ನಾನು ವಿನಯ್ ವಿರುದ್ಧ ಆಡಬೇಕು ಎಂದು ಸಂಗೀತಾ ತಂಡವನ್ನು ಆಯ್ಕೆ ಮಾಡಿಕೊಂಡೆ. ಮುಂಚೆ ಇದ್ದ ಸಂಗೀತಾಗೂ, ಈಗಿರುವ ಸಂಗೀತಾಗೂ ಬಹಳ ವ್ಯತ್ಯಾಸ ಎನಿಸಿತು. ಸೋ ಸಂಗೀತಾ ಉತ್ತಮ. ನನ್ನ ಪ್ರಕಾರ ಅವಿನಾಶ್ ಶೆಟ್ಟಿ ಕಳಪೆ’’ ಎಂದರು ನಮ್ರತಾ.

ಇದನ್ನೂ ಓದಿ: BBK SEASON 10: ಲಕ್ಷುರಿ ಬಜೆಟ್‌ ಮಿಸ್‌; ಆನೆಗೆ ಎದುರು ನಿಂತು ಪ್ರಶ್ನೆ ಮಾಡಿದ ಡ್ರೋನ್ ಪ್ರತಾಪ್!

ಕಾಲವೇ ಉತ್ತರ ಕೊಡಲಿದೆ

ತುಕಾಲಿ ಸಂತು, ಸಿರಿ, ತನಿಷಾ ಕೂಡ ವಿನಯ್‌ಗೆ ಉತ್ತಮ ನೀಡಿದರೆ, ಮೈಕಲ್‌ ಅವರು ಕಾರ್ತಿಕ್‌ಗೆ ಉತ್ತಮ ಪಟ್ಟ ಕೊಟ್ಟರು. ಇತ್ತ ಕಳಪೆ ಪಟ್ಟ ಪಡೆದ ಸಂಗೀತಾ ಜೈಲಿನ ಬಟ್ಟೆ ಸ್ವೀಕರಿಸಿದಾಗ ‘’ಇದಕ್ಕೆ ಕಾಲವೇ ಉತ್ತರ ಕೊಡಲಿದೆ’’ ಎಂದರು.

ಸ್ವಂತಿಕೆ ಇದ್ಯಾ?

ಜೈಲಿನಲ್ಲಿ ಕುಳತ ಸಂಗೀತಾ ಅವರು ಡ್ರೋನ್‌ ಪ್ರತಾಪ್‌ ಅವರ ಬಳಿ ʻʻಇಲ್ಲಿ ಹೇಗೆ ಅಂದರೆ ಬಂದು ಕಪಾಳಕ್ಕೆ ಹೊಡೆಯುತ್ತಾರೆ. ಆಮೇಲೆ ಬಂದು ಕ್ಷಮೆ ಕೇಳ್ತಾರೆ. ನಾವೇನೂ ಆಗಿಲ್ಲ ಎಂಬಂತೆ ಬಿಟ್ಟುಬಿಡಬೇಕು. ಮತ್ತೆ ಕ್ಷಮೆ ಕೇಳಿದಾಗ, ಫ್ರೆಂಡ್ಸ್ ಅಂತ ಒಪ್ಪಿಕೊಂಡು ಖುಷಿ ಖುಷಿಯಾಗಿ ಇರಬೇಕು. ಈಗ ಗೊತ್ತಾಯಿತಾ ನಾನು ಕಳೆದ ವಾರ ಕೊಟ್ಟ ಬೋರ್ಡ್ ಎಷ್ಟು ಕರೆಕ್ಟ್ ಆಗಿತ್ತು ಅಂತ.? ಅವರತನವನ್ನ ಎಷ್ಟು ಚೆನ್ನಾಗಿ ಕಳ್ಕೊಳ್ತಾರೆ ಅಲ್ವಾ? ಅವರಿಗೆ ಯಾರಿಗಾದರೂ ಸ್ವಂತಿಕೆ ಇದ್ಯಾ? ವಿನಯ್‌ನ ಬಿಟ್ಟರೆ?’ಎಂದು ಹೇಳಿದರು.

ಅತ್ತ ತನಿಷಾ ಹಾಗೂ ಕಾರ್ತಿಕ್‌ ಕೂಡ ಈ ಬಗ್ಗೆ ಚರ್ಚೆ ಮಾಡಿದರೆ. ಸಿರಿ ಅವರು ಕಣ್ಣೀರು ಹಾಕಿದ್ದಾರೆ. ಸಿರಿ ಅವರು ಕಾರ್ತಿಕ್‌ ಬಳಿ ʻʻಈ ಬಾರಿ ಸಂಗೀತಾ ಅವರಿಗೆ ಕಳಪೆ ಕೊಟ್ಟಿದ್ದು ಅರಗಿಸಿಕೊಳ್ಳಲು ಆಗುತ್ತಿಲ್ಲʼʼಎಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version