Site icon Vistara News

BBK SEASON 10: ವಿನಯ್‌- ಅವಿನಾಶ್‌ ಕಾಳಗ; ಕಾರ್ತಿಕ್‌ಗೆ ಬೆನ್ನು ನೋವು; ಆಟದಿಂದ ಹೊರಗುಳಿದ ʻಆನೆʼ!

Physical Attack Between avinash shetty and vinay

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ವಿನಯ್‌ ಗೌಡ ಅವರು ಅಗ್ರೆಸಿವ್‌ ಆಗಿ ಆಡುವುದು ಹೊಸತೇನಲ್ಲ. ಈ ಮುಂಚಿನ ಬಿಗ್‌ ಬಾಸ್‌ ಸೀಸನ್‌ಗಳಲ್ಲಿಯೂ ಅದೆಷ್ಟೋ ಸ್ಪರ್ಧಿಗಳು ಏಟು ತಿಂದು ಮನೆಗೆ ಸೇರಿರುವ ಉದಾಹರಣೆಗಳು ಇವೆ. ಇದೀಗ ವಿನಯ್‌ ಅವರ ಸರದಿ ಎನ್ನಲಾಗುತ್ತಿದೆ. ವಿನಯ್‌ ಗೌಡ ಅವ ಬೆರಳಿಗೆ ಏಟಾದರೆ, ಕಾರ್ತಿಕ್‌ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದಕ್ಕೆಲ್ಲ ಕಾರಣ . ʻಕೊಳೆ ಒಳ್ಳೇದಲ್ಲ’ ಟಾಸ್ಕ್‌. ವಿನಯ್, ಕಾರ್ತಿಕ್ ಅವರು ಒಂದು ಗೇಮ್​ನಿಂದಲೇ ಹೊರಗೆ ಇರುವ ಪರಿಸ್ಥಿತಿ ಬಂದಿದೆ.

ಟಾಸ್ಕ್‌ ಏನು?

‘ಕೊಳೆ ಒಳ್ಳೇದಲ್ಲ’ ಎಂಬ ಟಾಸ್ಕ್ ಬಿಗ್‌ ಬಾಸ್‌ ನೀಡಿದ್ದರು. ಪ್ರತಿ ತಂಡದ ಆಟಗಾರರು ಎದುರಾಳಿ ತಂಡದ ಆಟಗಾರರಿಂದ ತಮಗೆ ಮೀಸಲಾಗಿರುವ ಬಟ್ಟೆಗಳನ್ನು ರಕ್ಷಿಸಿ, ಶುಭ್ರಗೊಳಿಸಬೇಕಿತ್ತು. ಪ್ರತಿ ತಂಡದಲ್ಲಿ ಇಬ್ಬರು ಬಟ್ಟೆ ಒಗೆದರೆ, ಇಬ್ಬರು ತಮ್ಮ ತಂಡದ ಬಟ್ಟೆಗಳನ್ನು ರಕ್ಷಿಸಿ, ಎದುರಾಳಿ ತಂಡದ ಬಟ್ಟೆಗಳಿಗೆ ಬಣ್ಣ ಎರಚಬೇಕಿತ್ತು. ಮೂರು ಸುತ್ತಿನಲ್ಲಿ ಈ ಟಾಸ್ಕ್‌ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ಅತೀ ಹೆಚ್ಚು ಬಟ್ಟೆಗಳನ್ನು ಶುಭ್ರಗೊಳಿಸುವ ತಂಡ ಈ ಟಾಸ್ಕ್ ಗೆದ್ದಂತೆ ಎಂದು ಬಿಗ್ ಬಾಸ್‌ ಘೋಷಿಸಿದ್ದರು. 

ಈ ಟಾಸ್ಕ್‌ ಆಡುವಾಗ ವಿನಯ್‌ ಅವರು ಬಹಳ ಅಗ್ರೆಸಿವ್‌ ಆಗಿ ಆಡಿದರು. ಅವರ ಕೈ ಬೆರಳಿಗೆ ಏಟು ಆಗಿದೆ. ಈ ಕಾರಣದಿಂದ ಅವರು ಗೇಮ್​ನಿಂದ ಹೊರಗೆ ಇರುವ ಪರಿಸ್ಥಿತಿ ಬಂದಿದೆ. ವೈದ್ಯರ ಸಲಹೆಯಂತೆ ವಿನಯ್ ಗೇಮ್ ಆಡುವಂತಿಲ್ಲ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ. ಹೀಗಾಗಿ ತುಕಾಲಿ ಸಂತೋಷ್ ಅವರು ವಿನಯ್​ಗೆ ಈ ವಿಚಾರದಲ್ಲಿ ಮೊದಲೇ ಎಚ್ಚರಿಕೆ ನೀಡಿದ್ದರು. ‘ದಯವಿಟ್ಟು ಅಗ್ರೆಸ್ ಆಗಿ ಆಡಿ ಗೇಮ್​ನ ಹಾಳು ಮಾಡಬೇಡಿ’ ಎಂದು ಮೊದಲೇ ಕೇಳಿಕೊಂಡಿದ್ದರು. ಆದರೂ ವಿನಯ್‌ ಅವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಇನ್ನು ಕಾರ್ತಿಕ್‌ ಅವರಿಗೆ ಬೆನ್ನು ನೋವಾದ ಕಾರಣ ಮಲಗಿ ರೆಸ್ಟ್‌ ಮಾಡುತ್ತಿದ್ದಾರೆ.

ಅವಿನಾಶ್‌ ಜತೆ ವಿನಯ್‌ ಮಾರಾಮಾರಿ!

ಬಟ್ಟೆಗಳನ್ನು ರಕ್ಷಿಸಿಕೊಳ್ಳುವಾಗ, ವಿನಯ್‌ ಹಾಗೂ ಅವಿನಾಶ್‌ ನಡುವೆ ಕಾಳಗವೇ ನಡೆದು ಹೋಯ್ತು. ಅವಿನಾಶ್ ಶೆಟ್ಟಿ ಅವರನ್ನು ವಿನಯ್ ಕೆಳಗೆ ಬೀಳಿಸಿದರು. ಮೈಕಲ್‌ನ ವಿನಯ್‌ ತಳ್ಳಿ ಬೀಳಿಸಿದರು. ಅಗ್ರೆಸ್ಸಿವ್ ಆಗಿ ಆಡುವ ಸಮಯದಲ್ಲೇ ವಿನಯ್‌ ಅವರ ಬಲಗೈ ಬೆರಳಿಗೆ ಏಟು ಬಿದ್ದಿದೆ. ಮೈಕಲ್‌ಗೆ ತುಕಾಲಿ ಸಂತು ಮೊಣಕೈಯಿಂದ ಹೊಡೆದಿದ್ದಾರೆ.

ಇದನ್ನೂ ಓದಿ: BBK SEASON 10: ಬಾಯಲ್ಲಿ ಆಟ ಆಡೋದಲ್ಲ, ಪ್ರೂವ್‌ ಮಾಡು; ತನಿಷಾ ವಿರುದ್ಧ ನಮ್ರತಾ ಗರಂ!

ಮೊದಲ ಸುತ್ತಿನಲ್ಲಿ ನಮ್ರತಾ, ಡ್ರೋನ್‌ ಬಟ್ಟೆ ಒಗೆದರೆ, ಮೈಕಲ್‌, ಅವಿನಾಶ್‌ ರಕ್ಷಿಸಿಕೊಳ್ಳಬೇಕಿತ್ತು. ಇತ್ತ ತನಿಷಾ ತಂಡದಲ್ಲಿ ತುಕಾಲಿ ಸಂತು, ವರ್ತೂರು ಸಂತೋಷ್ ಬಟ್ಟೆ ಒಗೆಯುತ್ತಿದ್ದರು. ಬಟ್ಟೆ ರಕ್ಷಿಸಲು ವಿನಯ್, ಕಾರ್ತಿಕ್ ಮುಂದಾದರು. ಟಾಸ್ಕ್‌ ಶುರುವಾಗುವ ಮುನ್ನವೇ ‘ನುಗ್ಗುತ್ತಾ ಇರೋದೇ, ಚಚ್ಚುತ್ತಾ ಇರೋದೇ’ ಎಂದಿದ್ದರು ವಿನಯ್.

ಇತ್ತ ತನಿಷಾ ತಂಡದ ಬಟ್ಟೆಗಳಿಗೆ ಬಣ್ಣ ಹಾಕಲು ಮೈಕಲ್ ಮುಂದಾದರು. ತಮ್ಮ ಬಟ್ಟೆಗಳನ್ನ ರಕ್ಷಿಸುವ ವೇಳೆ ವಿನಯ್, ಕಾರ್ತಿಕ್, ಮೈಕಲ್ ಹಾಗೂ ಅವಿನಾಶ್ ಶೆಟ್ಟಿ ಅಗ್ರೆಸ್ಸಿವ್ ಆದರು. ಅವಿನಾಶ್‌ ಶೆಟ್ಟಿ ಹಾಗೂ ವಿನಯ್‌ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು. ಮೊದಲ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. ಆಗ ರೊಚ್ಚಿಗೆದ್ದ ಸಂಗೀತಾ, ‘’ಹೀಗೆ ಮಾಡುವ ಹಾಗಿಲ್ಲ. ಒಬ್ಬರನ್ನ ಇಷ್ಟು ಜೋರಾಗಿ ತಳ್ಳಿ ಬೀಳಿಸುವ ಹಾಗಿಲ್ಲ’’ ಎಂದರು. ’’ಇದು ನಿಮಗೆ ಚೆನ್ನಾಗಿ ಕಾಣ್ತಿಲ್ಲ’’ ಎಂದು ತನಿಷಾ ಹೇಳಿದಾಗ, ‘’ಐ ಡೋಂಟ್ ಕೇರ್‌’’ ಎಂದರು ವಿನಯ್. ಅಗ್ರೆಸ್ಸಿವ್ ಆದ ಕಾರಣ, ವಿನಯ್ ಅವರನ್ನ 2 ನಿಮಿಷ ಆಚೆ ನಿಲ್ಲಿಸಿದರು ಉಸ್ತುವಾರಿ ಸಿರಿ.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿಗಳು ನಟಿಸಿರುವ ಧಾರಾವಾಹಿಗಳು ಯಾವವು?

ಎರಡನೇ ಸುತ್ತಿನಲ್ಲಿ ವಿನಯ್‌ ಅವರ ಬೆರಳು ಹೆಚ್ಚು ನೋವಾಗ ತೊಡಗಿತ್ತು. ‘’ಮುಂಚೆಯೇ ಏಟಾಗಿತ್ತು. ಅದರ ಮೇಲೆ ಮತ್ತೆ ಪೆಟ್ಟು ಬಿತ್ತು’’ ಅಂತ ವಿನಯ್ ಹೇಳಿದರು. ವೈದ್ಯರ ಸಲಹೆ ಮೇರೆಗೆ ಆಟದಿಂದ ವಿನಯ್ ಹೊರಗುಳಿಯಬೇಕಾಗಿ ಬಂತು. ಕಾರ್ತಿಕ್‌ ಅವರಿಗೂ ಬೆನ್ನು ನೋವು ಕಾಡಿತ್ತು. ಆಟದಿಂದ ವಿನಯ್ ಹೊರಗುಳಿದರು. ಮೂರನೇ ಸುತ್ತಿನಲ್ಲಿ ಎರಡು ತಂಡಗಳಿಂದ ತಲಾ ಇಬ್ಬರು ಮಾತ್ರ ಆಟದಲ್ಲಿ ಭಾಗವಹಿಸಬೇಕಿತ್ತು. ತನಿಷಾ ತಂಡದಿಂದ ತುಕಾಲಿ ಸಂತು, ವರ್ತೂರು ಸಂತೋಷ್‌ ಆಟಕ್ಕಿಳಿದರು. ಈ ಸುತ್ತಿನಲ್ಲಿ ತುಕಾಲಿ ಹಾಗೂ ಮೈಕಲ್‌ ನುಡವೆ ಕೂಡ ಕುಸ್ತಿ ಆಯಿತು. ತುಕಾಲಿ ಸಂತು ಹಾಗೂ ಮೈಕಲ್ ಮಧ್ಯೆ ತಳ್ಳಾಟ ನಡೆಯಿತು. ಸಿಟ್ಟು ಹೆಚ್ಚಾದಂತೆ ಮೈಕಲ್‌ಗೆ ತುಕಾಲಿ ಸಂತು ಮೊಣಕೈಯಿಂದ ಜೋರಾಗಿ ಹೊಡೆದರು.

ಮೊದಲ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. ಎರಡನೇ ಸುತ್ತಿನಲ್ಲಿ ತನಿಷಾ ತಂಡ ಗೆದ್ದರೆ, ಮೂರನೇ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. ಮೂರು ಸುತ್ತು ಆದ ಬಳಿಕ ಉತ್ತಮ ಪ್ರದರ್ಶನ ನೀಡಿದ್ದು ಯಾರು ಎಂದು ಒಮ್ಮತದ ನಿರ್ಧಾರ ಘೋಷಿಸಿ ಎಂದು ಬಿಗ್‌ ಬಾಸ್‌ ಆದೇಶ ಹೊರಡಿಸಿದರು. ತನಿಷಾ ಹಾಗೂ ಸಂಗೀತಾ ಅವರು ಒಮ್ಮತದ ನಿರ್ಧಾರ ಹೇಳುವಲ್ಲಿ ಸೋತರು. ಹೀಗಾಗಿ ಬಿಗ್‌ ಬಾಸ್‌ 500 ರೂ. ಹಿಂಪಡೆದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version