ಬೆಂಗಳೂರು; ಬಿಗ್ ಬಾಸ್ ಸೀಸನ್ 10ರಲ್ಲಿ (BBK SEASON 10) ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ತುಂಬಾ ಫೇಮಸ್ ಆಗಿತ್ತು. ಇದರಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಇಶಾನಿ, ರಕ್ಷಕ್ , ತುಕಾಲಿ ಪ್ರಮುಖರಾಗಿದ್ದರು. ಇವರ ಗ್ರೂಪಿಸಂ ಬಗ್ಗೆ ಅದೆಷ್ಟೋ ಬಾರಿ ಸುದೀಪ್ ಮಾತನಾಡಿದ್ದರು. ಪ್ರತಿಯೊಂದು ಹೆಜ್ಜೆಯಲ್ಲಿಯೂ ಈ ಟೀಂ ಕೆಲವು ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುತ್ತಲೇ ಇರುತ್ತಿತ್ತು. ಬಳಿಕ ಈ ಟೀಂನಲ್ಲಿ ಒಬ್ಬೊಬ್ಬರಾಗಿಯೇ ಮನೆಯಿಂದ ಹೊರ ಹೋದರು. ಸ್ನೇಹಿತ್ ಅವರು ‘ಫಿನಾಲೆಯಲ್ಲಿ ಟಾಪ್ 3ಗೆ ನಾವೇ ಹೋಗಬೇಕು’ ಎಂದು ಕೆಲವು ದಿನಗಳ ಹಿಂದೆ ವಿನಯ್ ಮತ್ತು ನಮ್ರತಾ ಮುಂದೆ ಹೇಳಿದ್ದರು. ಆದರೆ ಕೊನೆಗೆ ಆದದ್ದೇ ಬೇರೆ. ಬಯಾಸ್ಡ್ ಆಗಿ ಆಡಿ, ಬೀಗಿದ್ದವರೆಲ್ಲ ಒಬ್ಬೊಬ್ಬರೇ ಬಿಗ್ ಬಾಸ್ನಿಂದ ಔಟ್ ಆಗುತ್ತಿದ್ದಾರೆ. ಇನ್ನಾದರೂ ನಮ್ರತಾ ಹಾಗೂ ವಿನಯ್ ಪಾಠ ಕಲಿಯುತ್ತಾರಾ ಎಂಬುದನ್ನು ಮುಂದೆ ಕಾದು ನೋಡಬೇಕು.
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ಮಾಸ್ಟರ್ ಪ್ಲ್ಯಾನ್
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ಮೊದಲಿನಿಂದಲೂ ಪ್ಲ್ಯಾನ್ ಮಾಡಿಕೊಂಡು ಕೆಲವೊಂದು ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುತ್ತಲೇ ಇತ್ತು. ಉತ್ತಮ ಹಾಗೂ ಕಳಪೆಯನ್ನು ಕೊಡುವಾಗ ತಮ್ಮಲ್ಲಿಯೇ ಚರ್ಚಿಸಿ ಆಮೇಲೆ ಟಾರ್ಗೆಟ್ ಮಾಡಿ ನೀಡುತ್ತಿತ್ತು. ಇದು ಸುದೀಪ್ ಅವರ ಗಮನಕ್ಕೂ ಬಂದಿತ್ತು. ಅದೆಷ್ಟೋ ಬಾರಿ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಕಳಪೆ ಆದ ಬಳಿಕ ಈ ಹಿಂದೆ ನೀತು ಕೂಡ ಪರೋಕ್ಷವಾಗಿ ಚಮಚಾಗಿರಿ, ದಾದಾಗಿರಿ ಎಂದು ಈ ಟೀಂಗೆ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: BBK SEASON 10: ಕಿಚ್ಚನ ಚಪ್ಪಾಳೆಗೆ ನಮ್ರತಾ ನೆಗೆಟಿವ್ ಕಾಮೆಂಟ್; ನೆಟ್ಟಿಗರು ಗರಂ!
ಫಿನಾಲೆಯಲ್ಲಿ ನಾವೇ ಟಾಪ್ 3!
ಇದೆಲ್ಲ ಆದ ಬಳಿಕ ಸ್ನೇಹಿತ್ ಹಾಗೂ ನಮ್ರತಾ, ವಿನಯ್ ಫಿನಾಲೆಯಲ್ಲಿ ಟಾಪ್ 3ಗೆ ನಾವೇ ಹೋಗಬೇಕು’ ಎಂದು ಹೇಳಿಕೊಂಡಿದ್ದರು. ಸ್ನೇಹಿತ್ ಅವರು ವಿನಯ್ ಅವರಿಗೆ ಚಮಚ ಹಿಡಿಯುತ್ತಲೇ ಬಂದರು. ಅದೆಷ್ಟೋ ಬಾರಿ ಕಿಚ್ಚ ಅವರು ಸ್ನೇಹಿತ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರೂ ಕೂಡ ನಾಯಿ ಬಾಲ ಡೊಂಕು ಎಂಬಂತೆ ಸ್ನೇಹಿತ್ ತಮ್ಮ ಚಾಳಿಯನ್ನೇ ಮುಂದುವರಿಸಿಕೊಂಡು ಹೋದರು. ಆದರೆ ನಮ್ರತಾ ಅವರು ಗ್ಯಾಂಗ್‌ನಿಂದ ಹೊರಬಂದು ತಮ್ಮನ್ನು ತಾವು ಪ್ರೂವ್ ಮಾಡಿಕೊಂಡರು. ಆದರೆ ಸ್ನೇಹಿತ್ ಮಾತ್ರ ವಿನಯ್ ಅವರನ್ನು ಮೆರೆಸುತ್ತಲೇ ಇದ್ದರು. ‘ನಾನೇ ಬಿಗ್ ಬಾಸ್ ವಿನ್ ಆಗೋದು’ ಎಂದು ವಿನಯ್ ಹೇಳಿದಾಗ ಸ್ನೇಹಿತ್‌ಗೆ ಸಖತ್ ಖುಷಿ ಆಗಿತ್ತು. ಇದನ್ನು ಕಂಡ ಪ್ರೇಕ್ಷಕರು ಸ್ನೇಹಿತ್‌ಗೆ ಮತ್ಯಾಕೆ ಮನೆಯಲ್ಲಿ ಇದ್ದೀಯಾ? ಎಂದು ಕಮೆಂಟ್ ಮೂಲಕ ಪ್ರಶ್ನೆ ಇಟ್ಟಿದ್ದರು.
ಇದನ್ನೂ ಓದ: BBK SEASON 10: ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಔಟ್; ಕಣ್ಣೀರಿಟ್ಟ ನಮ್ರತಾ
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್ ಫುಲ್ ಖಾಲಿ ಖಾಲಿ
ʻಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಲ್ಲಿ ಒಬ್ಬೊಬ್ಬರಾಗಿಯೇ ಮನೆಯಿಂದ ಆಚೆ ಹೋಗುತ್ತಿದ್ದಾರೆ. ಮೊದಲು ಔಟ್ ಆಗಿದ್ದು ವಿನಯ್ ತಂಡದ ರಕ್ಷಕ್. ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡರೂ ಒಂದೇ ತಿಂಗಳಿಗೆ ಅವರು ಔಟ್ ಆದರು. ನಂತರ ನೀತು ಅವರು ತಂಡ ಬದಲಿಸಿದರು. ಆದಾಗ್ಯೂ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು. ನಂತರ ಇಶಾನಿ ಔಟ್ ಆದರು. ಈಗ ಸ್ನೇಹಿತ್ ಗೌಡ ಕೂಡ ಎಲಿಮಿನೇಟ್ ಆಗಿದ್ದಾರೆ. ತುಕಾಲಿ ಸಂತೋಷ್ ಅವರು ತಂಡ ಬದಲಿಸಿ ಬಚಾವ್ ಆಗಿದ್ದಾರೆ. ಸ್ನೇಹಿತ್ ಗೌಡ ಅವರು ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್ ನೀಡಿಲ್ಲ. ಕ್ಯಾಪ್ಟನ್ ಆಗಿ ತಾವು ಒಳ್ಳೆಯ ಪರ್ಫಾರ್ಮೆನ್ಸ್ ನೀಡುವ ಅವಕಾಶ ಅವರಿಗೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಅವರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸಂಪೂರ್ಣವಾಗಿ ಎಡವಿದ್ದರು. ಹೀಗಾಗಿ, ದೊಡ್ಮನೆಯಿಂದ ಔಟ್ ಆಗಿದ್ದಾರೆ. ಇಷ್ಟೆಲ್ಲ ಆದ ಬಳಿಕ ಕೊನೆಗೆ ಕಪ್ ಯಾರು ಗೆಲ್ಲುತ್ತಾರೆ ಎಂಬುದೇ ವೀಕ್ಷಕರಿಗೆ ಇರುವ ಕುತೂಹಲ!
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ