ಬೆಂಗಳೂರು: ಬಿಗ್‌ಬಾಸ್ ಮನೆ (BBK SEASON 10) ಈ ವಾರದಲ್ಲಿ ಹಲವು ಕೋಲಾಹಲಗಳಿಗೆ, ಕೋಪ ತಾಪಗಳಿಗೆ, ಜಗಳಗಳಿಗೆ, ರೋಷಾವೇಶಗಳಿಗೆ ಸಾಕ್ಷಿಯಾಗಿದೆ. ವಾರದ ಕೊನೆ ಸಮೀಪಿಸುತ್ತಿದ್ದಂತೆಯೇ ಮನೆಯೊಳಗಿನ ಲೆಕ್ಕಾಚಾರಗಳೂ ಬದಲಾಗುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಕ್ಷಕ ಹಾಗೂ ಗಂಧರ್ವರ ಗುಂಪು ಆಗಿದೆ. ಸ್ನೇಹಿತ್ ಬಯಾಸ್ಡ್ ಆಗಿ ಆಟಗಳನ್ನು ಆಡುತ್ತಾರೆ ಎನ್ನುವುದು ಸಂಗೀತಾ ಅವರ ಟೀಂ ವಾದ. ಆದರೆ ಕಳೆದ ಸಂಚಿಕೆಯಲ್ಲಿ ಸಂಗೀತಾ ಕೂಡ ಸ್ನೇಹಿತ್ ಅವರಿಗೆ ಹತ್ತಿರವಾದಂತಿದೆ. ಇಂದಿನ ಜಿಯೋ ಸಿನಿಮಾ ಹಂಚಿಕೊಂಡ ಪ್ರೋಮೊದದಲ್ಲಿ ಸ್ನೇಹಿತ್ ಅವರು ತಮ್ಮ ಸ್ನೇಹಿತರಿಗೆ ಶಾಕ್ ಕೊಟ್ಟಿದ್ದಾರೆ. ಈ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾರೆ. ಪ್ರತಿ ಆಟಕ್ಕೂ ಅವರದ್ದೇ ಉಸ್ತುವಾರಿ. ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾರನ್ನು ಹೊರಗೆ ಇಡಬೇಕು ಎನ್ನುವ ವಿಚಾರ ಬಂದಾಗ ಅವರು ವಿನಯ್ ಹಾಗೂ ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ.
ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸ್ನೇಹಿತ್ ವಿಶೇಷ ಅಧಿಕಾರವನ್ನು ಪಡೆದಿದ್ದರು. ಆ ಅಧಿಕಾರದ ಪ್ರಕಾರ ಮನೆಯೊಳಗಿನ ಹಲವು ಸಂಗತಿಗಳ ಬಗ್ಗೆ ಅವರ ನಿರ್ಧಾರವೇ ಅಂತಿಮವಾಗಿತ್ತು. ಅಲ್ಲದೆ ಮನೆಯಲ್ಲಿ ತಂಡಗಳನ್ನು ರಚಿಸುವ, ವಾರವಿಡೀ ಬಿಗ್‌ಬಾಸ್ ನೀಡುವ ಟಾಸ್ಕ್‌ಗಳ ಉಸ್ತುವಾರಿ ವಹಿಸುವ ಜವಾಬ್ದಾರಿಯನ್ನೂ ಸ್ನೇಹಿತ್‌ಗೆ ಒಪ್ಪಿಸಲಾಗಿತ್ತು. ತಂಡವನ್ನು ರಚಿಸುವ ಹಂತದಲ್ಲಿಯೇ ಉಸ್ತುವಾರಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯ ವಾರವಿಡೀ ಮುಂದುವರಿಯಿತು. ಸಂಗೀತಾ ನಾಯಕತ್ವದ ತಂಡದ ಪ್ರಕಾರ ಸ್ನೇಹಿತ್, ವರ್ತೂರು ಅವರ ತಂಡದ ಪರವಾಗಿ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ರತಾ ಮತ್ತು ವಿನಯ್ ಅವರಿಂದ ಪ್ರಭಾವಿತರಾಗಿ ತಮ್ಮ ನಿರ್ಧಾರಗಳನ್ನು ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇದ್ದವು.
ಆದರೆ ವಾರಾಂತ್ಯದಲ್ಲಿ ಬಿಗ್‌ಬಾಸ್, ಸ್ನೇಹಿತ್‌ಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದಾರೆ. ‘ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ’ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ನಾಮಿನೇಟ್ ಮಾಡಿದ್ದಾರೆ. ಅವರು ನಾಮಿನೇಟ್ ಮಾಡಿದ ಎರಡು ಮುಖ್ಯ ಸದಸ್ಯರೆಂದರೆ, ನಮ್ರತಾ ಮತ್ತು ವಿನಯ್! ಇದಕ್ಕೆ ಅವರು ಕೊಟ್ಟ ಕಾರಣ, ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂಬುದು.
ಇದನ್ನೂ ಓದಿ: BBK SEASON 10: ʻಸಂಗೀತಾʼ ಐಡಿಯಾಗೆ ವೀಕ್ಷಕರಿಂದ ಮೆಚ್ಚುಗೆ; ವಿನಯ್ ಟೀಂಗೆ ಸಂಕಷ್ಟ
ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್ ಮಾತು ಕೇಳಿ ಆಘಾತವಾಗಿದೆ. ‘ಇವ್ನೆಂತಾ ಫ್ರೆಂಡ್’ ಎಂದು ನಮ್ರತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ ಕೂಡ. ಮತ್ತೂ ಯಾರು ಯಾರನ್ನೆಲ್ಲ ಸ್ನೇಹಿತ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ? ಕೊನೆಗೆ ಮನೆಯ ಕ್ಯಾಪ್ಟನ್ ಆಗುವುದು ಯಾರು? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಸದಾ ವಿನಯ್ ಟೀಂ ಪರ ಇರುತ್ತಿದ್ದ ಸ್ನೇಹಿತ್
ಚೇರ್ ಆಫ್ ಥಾರ್ನ್ಸ್’ ಎಂಬ ಚಟುವಟಿಕೆಯನ್ನ ‘ಬಿಗ್ ಬಾಸ್’ ಈ ಹಿಂದೆ ಘೋಷಿಸಿದ್ದರು. ಇದರಲ್ಲಿ ಕುರ್ಚಿ ಮೇಲೆ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ವರ್ತೂರ್ ಮೊದಲಿಗೆ ಎದಿದ್ದರು. ನಮ್ರತಾ ಎದ್ದಿಲ್ಲ ಅಂದ ತಕ್ಷಣ ಸ್ನೇಹಿತ್ ಅವರು ನಮ್ರತಾ ಪರವಾಗಿ ನಿಂತರು, ಇನ್ನು ಸ್ವತಃ ವರ್ತೂರ್ ಅವರು ಪ್ರತಾಪ್ ಮುಂದೆ ತಾವು ಎದ್ದಿರುವುದಾಗಿ ಹೇಳಿಕೊಂಡಿದ್ದರು. ನಮ್ರತಾ ಅವರು ಹೇಳುತ್ತಿದ್ದಂತೆ ವರ್ತೂರ್ ಅವರು ಔಟ್ ಆಗಿಲ್ಲ ಎಂಬ ಸ್ನೇಹಿತ್ ಅವರ ನಿರ್ಧಾರಕ್ಕೆ ಸಂಗೀತಾ ಹಾಗೂ ತನಿಷಾ ಕಿರುಚಾಡಿದ್ದಾರೆ. ಸ್ವಂತ ನಿರ್ಧಾರ ಸ್ನೇಹಿತ್‌ಗೆ ತೆಗೆದುಕೊಳ್ಳಲು ಬರುವುದಲ್ಲಿವೇ ಎಂದು ಪ್ರೇಕ್ಷಕರು ಪ್ರಶ್ನೆ ಇಟ್ಟಿದ್ದರು.
ಇದನ್ನೂ ಓದಿ: BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್!
ಬಾವುಟ ಟಾಸ್ಕ್‌ನಲ್ಲಿಯೂ ಕೂಡ ಸ್ನೇಹಿತ್ ಅಂದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ‘ವಿಜಯ ಪತಾಕೆ’ ಟಾಸ್ಕ್‌ನಲ್ಲಿ ಕಾರ್ತಿಕ್ – ವಿನಯ್, ಸಂಗೀತಾ – ನಮ್ರತಾ ಮಧ್ಯೆ ಫಿಸಿಕಲ್ ಅಟ್ಯಾಕ್ ನಡೆಯಿತು. ಕ್ಯಾಪ್ಟನ್ ಆಗಿ, ಉಸ್ತುವಾರಿಯಾಗಿ ಸ್ನೇಹಿತ್ ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳಲಿಲ್ಲ. ಬಳಿಕ ಬಿಗ್ ಬಾಸ್ ಮಧ್ಯ ಪ್ರವೇಶಿಸಿ ಆಟವನ್ನು ನಿಲ್ಲಿಸಿದರು. ಪರ್ಸನಲ್ ಐಟಮ್ಸ್ ಮುಟ್ಟುವಂತಿಲ್ಲ. ಪರ್ಸನಲ್ ಅಟ್ಯಾಕ್ ಮಾಡುವಂತಿಲ್ಲ. ಮಾನವೀಯತೆ ಮೀರಿದರೆ ನಾನು ನಿರ್ಧಾರ ತೆಗೆದುಕೊಳ್ತೀನಿ’’ ಎಂದು ಸ್ನೇಹಿತ್ ಹೇಳಿದರು. ಇದನ್ನು ಸಂಗೀತಾ ಟೀಂ ವಿರೋಧಿಸಿದರು. ನಮ್ಮ ಪರ ಯಾವಾಗ ಮಾತಾಡ್ತೀರಾ’’ ಎಂದು ಸಂಗೀತಾ, ತನಿಷಾ ಪ್ರಶ್ನಿಸಿದರು. ‘’ನಾವು ನಿಮ್ಮ ಮಾತು ಕೇಳಲ್ಲ’’ ಎಂದು ಸ್ನೇಹಿತ್‌ಗೆ ರಾಕ್ಷಸರು ಹೇಳಿದ್ದರು. ಇದೆಲ್ಲ ಗಮನಿಸಿದ ವೀಕ್ಷಕರು ಕೂಡ ಸ್ನೇಹಿತ್ ತುಂಬ ಬಯಾಸ್ಡ್ ಆಗಿ ಅಟ ಆಡುತ್ತಾರೆ ಎಂದಿದ್ದರು. ಸದಾ ನಮ್ರತಾ ಹಾಗೂ ವಿನಯ್‌ಗೆ ಸಪೋರ್ಟ್ ಮಾಡಿಕೊಂಡು ಬರುತ್ತಿರುವ ಸ್ನೇಹಿತ್ ಇದೀಗ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್ ಹಾಗೂ ನಮ್ರತಾ ಅವರನ್ನು ಹೊರಗಿಟ್ಟಿದ್ದಾರೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ