Site icon Vistara News

BBK SEASON 10: ಇನ್ಮುಂದೆ ಅಗ್ರೆಸ್ಸಿವ್ ಆಗಿ ಆಡಲ್ಲ; ʻಆನೆʼಯ ಹೊಸ ವರಸೆ!

Vinay Gowda

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10, (BBK SEASON 10) ಹನ್ನೆರಡನೇ ವಾರಕ್ಕೆ ಬಂದು ತಲುಪಿದೆ. ಶೈನ್‌ ಶೆಟ್ಟಿ ಬಂದು ಹೋದ ಬಳಿಕ ವಿನಯ್‌ ಗೌಡ ಅವರು ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೊದಲಿನಿಂದಲೂ ತಾನೇ ವಿನ್‌ ಆಗಬೇಕು ಎಂದು ವಿನಯ್‌ ಅವರು ಡೆಡಿಕೆಟೆಡ್‌ ಆಗಿ ಆಟ ಆಡಿದ್ದರು. ಅವರು ಅಗ್ರೆಸ್ಸಿವ್ ಆಗಿ ಆಡಿದ್ದರಿಂದ ಸಾಕಷ್ಟು ಹಿನ್ನಡೆ ಆಯಿತು. ಅವರಿಗೆ ಹಾಗೂ ಎದುರಾಳಿ ತಂಡದವರಿಗೆ ಗಾಯಗಳಾಗಿತ್ತು. ಆದರೆ ಶೈನ್‌ ಶೆಟ್ಟಿ ಅವರು ಮನೆಗೆ ಬಂದು ಬಿಗ್ ಬಾಸ್ ಸ್ಟ್ರಿಕ್ಟ್ ಆಕ್ಷನ್ ತಗೊಳ್ಬೇಕಾಗುತ್ತೆ. ಅದರಿಂದ ನೀವು ಡೈರೆಕ್ಟ್ ಎಲಿಮಿನೇಟ್ ಕೂಡ ಆಗಬಹುದು ಎಂದು ಹೇಳಿದ್ದರು. ಇದೀಗ ವಿನಯ್‌ ಅವರು ʻತಾನು ಇನ್ನು ಮುಂದೆ ಅಗ್ರೆಸ್ಸಿವ್ ಆಗಿ ಆಡಲ್ಲ, ನಾನು ಹೊಡೆದಾಡಲ್ಲ. ಎಷ್ಟು ನೀಟಾಗಿ ಆಡೋಕೆ ಆಗುತ್ತೋ, ಅಷ್ಟು ನೀಟ್ ಆಗಿ ಆಡ್ತೀನಿʼ ಎಂದು ಶಪಥ ಮಾಡಿದ್ದಾರೆ.

ವಿನಯ್‌ ಗೌಡ ಅವರ ಅಗ್ರೆಸ್ಸಿವ್ ನೆಗೆಟಿವ್‌ ಬಿಟ್ಟರೆ ಟಾಸ್ಕ್‌ ವಿಚಾರ ಬಂದರೆ ಅವರು ಆನೆಯೇ ಸರಿ. ಸಲೀಸಾಗಿ ಎಲ್ಲ ಟಾಸ್ಕ್‌ಗಳನ್ನು ಮಾಡಿ ಮುಗಿಸುತ್ತಾರೆ. ಕಳೆದ ವೀಕೆಂಡ್‌ನಲ್ಲಿ ಸುದೀಪ್‌ ಅವರು ಗೈರಾಗಿದ್ದ ಕಾರಣ ಶೈನ್‌ ಶೆಟ್ಟಿ ಹಾಗೂ ಶುಭಾ ಪೂಂಜಾ ಅವರು ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಶೈನ್‌ ಶೆಟ್ಟಿ ಅವರು ʻʻಮನೆಯಲ್ಲಿ ಫಿಸಿಕಲ್‌ ಟಾಸ್ಕ್‌ನಲ್ಲಿ ಅಗ್ರೆಶ್‌ನಿಂದ ಏಟು, ಪೆಟ್ಟುಗಳಾಗಿವೆ. ಮತ್ತೆ ಮನೆಯಲ್ಲಿ ಇದೆ ರಿಪೀಟ್‌ ಆದರೆ ಬಿಗ್‌ ಬಾಸ್‌ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮನ್ನ ನೀವು ಬದಲಾಯಿಸಿಕೊಳ್ಳೋಕೆ ಇದು ಫೈನಲ್‌ ಅವಕಾಶʼʼಎಂದು ಹೇಳಿದ್ದರು.

ಇನ್ನು ವಿನಯ್‌ ಕೂಡ ಬಿಗ್‌ ಬಾಸ್‌ ಮನೆಯಿಂದ ಹೊರ ಹಾಕಿದರೆ ಎನ್ನುವ ಭಯಕ್ಕೋ ಏನೋ, ತಾನು ಇನ್ನು ಮುಂದೆ ಅಗ್ರೆಸ್ಸಿವ್ ಆಗಿ ಆಡಲ್ಲ, ನಾನು ಹೊಡೆದಾಡಲ್ಲ. ಎಂದು ಹೇಳಿದ್ದಾರೆ. ದಿನಸಿ ಟಾಸ್ಕ್‌ ಕೊಟ್ಟ ಮೇಲೆ ನಮ್ರತಾ ಅವರು ʻʻಈ ತರಹದ ಟಾಸ್ಕ್ ಕೊಡಬೇಕು. ಕ್ರೇಜಿ ಟಾಸ್ಕ್. ಹೊಡೆದಾಡೋದು ಬಿಟ್ಟು’’ ಎಂದು ಹೇಳಿದರು. ‘’ಇಲ್ಲ ಗುರು. ನಾನು ಹೊಡೆದಾಡಲ್ಲ. ಡಿಸೈಡ್ ಮಾಡಿಬಿಟ್ಟಿದ್ದೀನಿ’’ ಅಂತ ವಿನಯ್ ಹೇಳಿದರು. ಇದು ಮನೆಯವರಿಗೆ ಅಚ್ಚರಿ ತಂದಿದೆ.

ಇದನ್ನೂ ಓದಿ: BBK SEASON 10: ಪ್ರತಾಪ್‌ ಈ ಮನೆಯ ನೆಗೆಟಿವ್; ತಿರುಗಿಬಿದ್ದ ಉಳಿದ ಸ್ಪರ್ಧಿಗಳು!

ಇತ್ತ ತುಕಾಲಿ ಹಾಗೂ ವರ್ತೂರ್‌ ಸಂತೋಷ್‌ ಕೂಡ ಈ ಬಗ್ಗೆ ತಮ್ಮಲ್ಲಿಯೇ ಕಮೆಂಟ್‌ ಮಾಡಿದ್ದಾರೆ ʻʻಫುಲ್ ಒಳ್ಳೆಯವರ ತರಹ ಬಿಲ್ಡಪ್ ಕೊಟ್ಟುಕೊಂಡು, ಇನ್ಮೇಲೆ ಅಗ್ರೆಸ್ಸಿವ್ ಆಗಿ ಆಡಲ್ಲ, ಕೂಲ್ ಆಗಿ ಆಡ್ತೀನಿ, ಒಟ್ಟಾಗಿರೋಣ ಎಂದೆಲ್ಲ ಹೇಳುತ್ತಿದ್ದಾರೆ. ಶೈನ್ ಶೆಟ್ಟಿ, ಶುಭಾ ಪೂಂಜಾ ಹೇಳಿ ಹೋದ್ಮೇಲೆ, ಅವರಿಗೆ ಹಾಗೆ ಅನ್ನಿಸಿಬಿಟ್ಟಿದೆ. ನಾವು ಯಾರನ್ನೂ ನಂಬಬಾರದುʼʼಎಂದಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version