ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (BBK Season 10) ಇಷ್ಟು ದಿನ ಸಂಗೀತಾ ಅವರು ತಮ್ಮನ್ನು ಟಾರ್ಗೆಟ್ ಮಾಡ್ತಿದಾರೆ ಅನ್ನುತ್ತಿದ್ದರೂ, ಇದುವರೆಗೆ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್ ಕಣ್ಣುಗಳಲ್ಲಿ ಈಗ ನೀರು ಉಕ್ಕಿದೆ. ಟಾಸ್ಕ್ ಸೋತ ಬೇಸರದ ಜತೆ ತಮ್ಮ ಬಗ್ಗೆ ಅಪಪ್ರಚಾರ ಆಗುತ್ತಿದೆ ಎಂದು ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ. ಹೀಗಾಗಿ, ಅವರು ಅಸಮಾಧಾನಗೊಂಡಿದ್ದಾರೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಈ ಕುರಿತ ಪ್ರೋಮೊ ಹಂಚಿಕೊಂಡಿದೆ.
ವಿನಯ್ ಅವರ ಧ್ವನಿಯೂ ಜೋರಾಗಿದೆ. ‘ಅವ್ಳು ನನ್ನಿಂದ ಡಿಪ್ರೆಶನ್‌ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ. ಅವರ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, ‘ನಿಮ್ಮಿಂದ ನನಗೆ ಡೇಂಜರ್ ಅಂತ ನಂಗೆ ಅನಿಸುತ್ತದೆ’ ಎಂದು ತಣ್ಣಗೆ ಹೇಳಿದ್ದಾರೆ. ವಿನಯ್ ಅವರ ಜತೆಗೆ ಮಾತನಾಡದೆ ಕಾರ್ತಿಕ್ ಬಳಿಯೇ ತಿರುಗಿ, ‘ನನ್ನ ವೈಸ್ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು’ ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, ‘ಪ್ಲೀಸ್ ಡಿಲೀಟ್ ಮೀ ಇನ್ ಯುವರ್ ಹೆಡ್’ ಎಂದಿದ್ದಾರೆ.
ಸಂಗೀತಾ, ‘ಸ್ಟೋರ್ ಆಗಿದ್ರೆ ಡಿಲೀಟ್ ಮಾಡ್ಬೋದು’ ಎಂದು ಮತ್ತೆ ಕೆಣಕಿದ್ದಾರೆ!
ವಿನಯ್ ಸಹನೆಯ ಕಟ್ಟೆಯೊಡೆದು, ‘ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್’ ಎಂದು ಕಿರುಚಿದ್ದಾರೆ.
ಹಾಗಾದ್ರೆ ಮನೆಯೊಳಗೆ ಏನು ನಡೀತಿದೆ? ಸಂಗೀತಾ ಮತ್ತು ವಿನಯ್ ನಡುವೆ ಹೊತ್ತಿಕೊಂಡಿರುವ ಬೆಂಕಿ ಕಿಡಿಯನ್ನು ಆರಿಸ್ತಾರಾ ಕಾರ್ತಿಕ್? ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಈ ಉತ್ತರ ಇಂದು ಗೊತ್ತಾಗಲಿದೆ.
ಇದನ್ನೂ ಓದಿ: BBK Season 10: ಇಲ್ಲಿರೋಕೆ ಇಷ್ಟವಿಲ್ಲ ಎಂದು ಕಾರ್ತಿಕ್ ಬಳಿ ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!
ಇಲ್ಲಿ ಇರೋಕೆ ಇಷ್ಟವಿಲ್ಲ ಎಂದು ಕಣ್ಣೀರಿಟ್ಟದ್ದ ಸಂಗೀತಾ
ಸಂಗೀತಾ ಕೂಡ ಈಗಾಗಲೇ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ‘’ನಂಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ನನಗೆ ಆಗಲ್ಲ. ನಾನು ಬರಲೇ ಬಾರದಿತ್ತು. ನಾನು ವಾಪಸ್ ಮನೆಗೆ ಹೋಗಬೇಕು. ನಾವು ಗೆಲ್ಲೋಕೆ ಆಗಲ್ಲ. ನಾವು ಯಾವ ಟಾಸ್ಕ್‌ನಲ್ಲೂ ಗೆಲ್ಲೋಕೆ ಆಗಲ್ಲ. ಸೋತರೂ ಪರ್ವಾಗಿಲ್ಲ. ಈ ತರಹ ಶಿಕ್ಷೆ ತಗೊಂಡು, ಹೀಗೆಲ್ಲ ಬೈಸಿಕೊಳ್ಳಬೇಕಾ? ಇನ್ಮುಂದೆ ಆಡೋಕೆ ನನಗೆ ಇಷ್ಟ ಇಲ್ಲʼʼ ಎಂದು ಅಂತ ಕಾರ್ತಿಕ್ ಮಹೇಶ್ ಜತೆಗೆ ಮಾತನಾಡುತ್ತಾ ಸಂಗೀತಾ ಶೃಂಗೇರಿ ಕಣ್ಣೀರು ಸುರಿಸಿದ್ದಾರೆ.