Site icon Vistara News

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

Vinay Gowda and sangeetha Bigg boss

ಬೆಂಗಳೂರು : ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ (BBK SEASON 10) ಗಂಧರ್ವರು, ರಾಕ್ಷಸರು ಎಂಬ ಎರಡು ಗುಂಪುಗಳಾಗಿದ್ದು, ಮನರಂಜನೆಗಿಂತ ವಿವಾದಕ್ಕೆ ಗುರಿಯಾಗಲಿದೆಯಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಕಾರ್ತಿಕ್, ತನಿಷಾ, ಸಂಗೀತಾ, ಡ್ರೋನ್ ಪ್ರತಾಪ್, ಸಿರಿ, ಅವಿನಾಶ್ ಅವರು ರಾಕ್ಷಸರಾಗಿದ್ದರೆ, ವಿನಯ್ ಗೌಡ, ತುಕಾಲಿ ಸ್ಟಾರ್ ಸಂತು, ಪವಿ, ನಮ್ರತಾ ಗೌಡ, ವರ್ತೂರು ಸಂತೋಷ್ ಅವರು ಗಂಧರ್ವರಾಗಿದ್ದರು. ಸ್ನೇಹಿತ್ ಅವರು ಈ ಟಾಸ್ಕ್‌ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ನೇಹಿತ್‌ ಮನೆಯ ಕ್ಯಾಪ್ಟನ್ ಆಗಿ ಸರಿಯಾಗಿ ಟೀಂ ಮಾಡಿರಲಿಲ್ಲ. ಮಾತ್ರವಲ್ಲ ಹೆಚ್ಚಾಗಿ ವಿನಯ್‌ ಟೀಂ ಅವರ ಪರವಾಗಿಯೇ ನಿಂತಿದ್ದು, ರಾಕ್ಷಸರ ಟೀಂ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಟ್ಟಿನಲ್ಲಿ ಗಂಧರ್ವರಿಗೆ ಸಿಟ್ಟು ಬರುವಂತೆ ಅತಿಯಾಗಿ ಸಂಗೀತಾ ಟೀಂ ಮಾಡಿದ್ದು ವಿನಯ್‌ ಕೂಡ ಪಾತ್ರದಿಂದ ಹೊರಗಡೆ ಬಂದಮೇಲೆ ಇದೆ ಮಾರಿ ಹಬ್ಬ ಎಂದು ಗರ್ಜಿಸಿದ್ದಾರೆ.

ವಿನಯ್‌ ಪರ ನಿಂತ ಸ್ನೇಹಿತ್‌

ಮೊದಲಿಗೆ ಸ್ನೇಹಿತ್‌ ಕೂಡ ಟೀಂ ನಲ್ಲಿ ಸದಸ್ಯರನ್ನು ಸೇರಿಸುವಾಗ ಬ್ಯಾಲೆನ್ಸ್ ಆಗುವ ರೀತಿ ಮಾಡಿಲ್ಲ. ವಿನಯ್‌ ಹಾಗೂ ಮೈಕಲ್‌ ಅವರನ್ನು ಒಂದೇ ಟೀಂಗೆ ಸೇರಿಸಿದರು. ಇದು ಸಂಗೀತಾ ಕೋಪಕ್ಕೆ ಕಾರಣವಾಯ್ತು. ಅತ್ತ ಗಂಧರ್ವ ಟೀಂಗೂ ಕೂಡ ಹೆಚ್ಚಾಗಿ ಕೆರಳಿಸುವಂತೆ ಮಾಡಿದರು ಸಂಗೀತಾ. ತನಿಷಾ ಕೂಡ ವಿನಯ್‌ ಅವರಿಂದ ಕಾಲು ಒತ್ತಿಸಿಕೊಂಡರು. ಸಂಗೀತಾ ಅವರು ವಿನಯ್‌ಗೆ ಕೋಪ ತರಿಸುವ ಮಾತು ಹೇಳಿದ್ದಾರೆ, ಎಗರಿಕೊಂಡು ಎಗರಿಕೊಂಡು ನನ್ನ ಹಿಂದೆ ಬನ್ನಿ ಅಂತ ಕೂಡ ಹೇಳಿದ್ದರು. ಕಸವನ್ನೆಲ್ಲ ಚೆಲ್ಲ ಅದನ್ನು ಕ್ಲೀನ್‌ ಮಾಡಲು ಕಾರ್ತಿಕ್‌ ವಿನಯ್‌ಗೆ ಹೇಳಿದರು. ಮಾತ್ರವಲ್ಲ ಮನೆಯಲ್ಲಿದ್ದ ಎಲ್ಲ ಮೊಟ್ಟೆಗಳನ್ನು, ಹಣ್ಣುಗಳನ್ನೆಲ್ಲ ರಾಕ್ಷಸರು ತಿಂದು ತೇಗಿದರು. ಅತಿಯಾದ ಸಂಗೀತಾ ಹಾಗೂ ವಿನಯ್‌ ನಡವಳಿಕೆ ವಿನಯ್‌ ಅವರ ಮೇಲೆ ಹೆಚ್ಚಾಗಿ ಪ್ರಭಾವ ಬೀರಿತು.

ಇದನ್ನೂ ಓದಿ: BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

ಹುಚ್ಚೇಟು ಹೊಡೆಯುತ್ತೇನೆ ಎಂದ ವಿನಯ್‌

ಇಷ್ಟೆಲ್ಲ ಆದ ಬಳಿಕ ಬ್ರೇಕ್‌ ಇದ್ದಾಗ ಗಂಧರ್ವರು ಈ ಬಗ್ಗೆ ಚರ್ಚಿಸಿದ್ದಾರೆ. “ನಾವು ರಾಕ್ಷಸರಾದಾಗ ಹುಚ್ಚು ನಾಯಿ ತರ ಆಟ ಆಡಿಸಬೇಕು. ನಿಜವಾದ ರಾಕ್ಷಸರು ಯಾರು ಅಂತ ನಾನು ತೋರಿಸ್ತೀನಿ” ಎಂದು ತುಕಾಲಿ ಹೇಳಿದ್ದಾರೆ. ವರ್ತೂರ್‌ ಕೂಡ ʻʻಅವರು ಎಷ್ಟೇ ಕೆಡಿಸಿದರೂ ರಿಯಾಕ್ಟ್‌ ಮಾಡದಿರುವುದೇ ವಿನ್ನಿಂಗ್‌ʼʼ ಎಂದರು. ಆಗ ವಿನಯ್ ಗೌಡ ಅವರು ʻʻನನ್ನ ಪಾತ್ರದಿಂದ ಹೊರಗೆ ಬಂದರೆ ಆ ವಿಷಯವೇ ಬೇರೆ. ಬರ್ತೀನಿ. ಹೇಗ್‌ ಬರ್ತೀನಿ ಅಂದರೆ, ಪಾಪ ಅವರು! ಬೇಜಾರಾಗ್ತಿದೆ ಅವರ ನೆನೆಸಿಕೊಂಡರೆ. ಬಿಗ್ ಬಾಸ್ ನಿಮ್ಮ ಪಾತ್ರಗಳು ಮುಗೀತು ಎಂದು ಹೇಳುವವರೆಗೂ ನೀವು ಏನೂ ಸುಳಿವು ಕೊಡಬೇಡಿ, ಆಮೇಲೆ ಇದೆ ಅವರಿಗೆ. ಹುಚ್ಚೇಟು ಹೊಡೆಯುತ್ತೇನೆ. ನಾನು ಒಮ್ಮೆ ಪಾತ್ರದಿಂದ ಹೊರಗಡೆ ಬರಲಿ, ಆಗ ಇದೆ” ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಕೂಡ ʻʻಎಷ್ಟೇ ಕಷ್ಟ ಕೊಟ್ಟರೂ ಕೂಡ ನಾವು ನಮ್ಮ ಪಾತ್ರದಿಂದ ಹೊರಗಡೆ ಬರಬಾರದುʼʼ ಎಂದು ಹೇಳಿದ್ದಾರೆ.

ಈ ಮಾತಿಗೆ ಪ್ರೇಕ್ಷಕರು ಕೂಡ ವಿನಯ್‌ ಮಾತು ಒಂದರ್ಥದಲ್ಲಿ ಸತ್ಯ ಎನ್ನುತ್ತಿದ್ದಾರೆ. ವಿನಯ್‌ ಅವರ ಆನೆ ಪ್ರತಿಮೆಯನ್ನು ಒಡೆದು ಕಸದ ಬುಟ್ಟಿಗೆ ಹಾಕಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಗಂಧರ್ವರ ಆಹಾರಗಳನ್ನು ತಿಂದು ತೇಗಿದ್ದಾರೆ. ರಾಕ್ಷಸರು ಕೊಡುವ ಕಾಟಕ್ಕೆ ಗಂಧರ್ವರು ರಿಯಾಕ್ಟ್ ಮಾಡಿದರೆ ಅಲ್ಲಿಗೆ ಅವರು ಸೋತ ಹಾಗೆ. ಅದಕ್ಕಾಗಿ ವಿನಯ್‌ ಟೀಂ ಆದಷ್ಟು ತಾಳ್ಮೆಯನ್ನು ತಂದುಕೊಂಡಿದೆ. ಒಂದು ವೇಳೆ ಇದೇ ಉಲ್ಟಾ ಆಗಿ ವಿನಯ್‌ ಟೀಂ ರಾಕ್ಷಸರಾದರೆ, ಮನೆಯ ವಾತಾವರಣ ಇನ್ನಷ್ಟು ವಿವಾದಕ್ಕೆ ಸಿಲುಕಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version