Site icon Vistara News

BBK SEASON 10: ಅಗ್ರೆಸಿವ್‌ ಆಗಲ್ಲ ಅಂದಿದ್ದ ವಿನಯ್‌ ಕೆಂಡಾಮಂಡಲ; ಕಾರ್ತಿಕ್‌ ಸಖತ್‌ ಕ್ಲಾಸ್‌!

Vinay Gowda Karthik Fight For Joke Matter

ಬೆಂಗಳೂರು: ಬಿಗ್‌ ಬಾಸ್‌ (BBK SEASON 10) ಮನೆಯಲ್ಲಿ ನಾನಿನ್ನು ಅಗ್ರೆಸಿವ್‌ ಆಗಿ ಆಟ ಆಡಲ್ಲ ಎಂದು ವಿನಯ್‌ ಅವರು ಎರಡು ವಾರಗಳ ಹಿಂದೆಯಷ್ಟೇ ಹೇಳಿದ್ದರು. ಕುಟುಂಬದವರು ಬಂದ ಕಾರಣಕ್ಕೋ ಏನೋ ಒಂದು ವಾರ ಮಾತ್ರ ನಗುತ್ತಲೇ ಸುಮ್ಮನಿದ್ದರು. ಆದರೆ ಕಳೆದ ಸಂಚಿಕೆಯಲ್ಲಿ ಮತ್ತೆ ಕಾರ್ತಿಕ್‌ ಜತೆಗೆ ಕೂಗಾಡಿದ್ದಾರೆ. ಇಬ್ಬರ ನಡುವೆ ವಾದ ವಿವಾದಗಳು ನಡೆದಿದೆ. ಸಪ್ತಮಿ ಗೌಡ ಅವರು ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸಲು ‘ಬಿಗ್ ಬಾಸ್’ ಮನೆಗೆ ಬಂದಿದ್ದರು. ಈ ವೇಳೆ ಕಾರ್ತಿಕ್‌ ಅವರು ಬೋರ್ಡ್‌ ಹಿಡಿದ ಕೂಡಲೇ  ವಿನಯ್ ಗೌಡ, ನಮ್ರತಾ ಗೌಡ ಅವರು ನಕ್ಕಿದ್ದಾರೆ. ಈ ಕಾರಣಕ್ಕೆ ಕಾರ್ತಿಕ್‌ ಅವರು ವಿನಯ್‌ ವಿರುದ್ಧ ಕೂಗಿದ್ದಾರೆ.

ಸಪ್ತಮಿ ಗೌಡ ಅವರು ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸಲು ‘ಬಿಗ್ ಬಾಸ್’ ಮನೆಗೆ ಬಂದಿದ್ದರು. ಬಿಗ್‌ ಬಾಸ್‌ ಮನೆಯ ಗಂಡು ಮಕ್ಕಳಿಗೆ ಬೋರ್ಡ್‌ ಕೊಟ್ಟು ಓದಲು ಹೇಳಿದ್ದರು. ಕಾರ್ತಿಕ್‌ ಅವರು ʻʻಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಶೌಚಕ್ಕೆ ಶುದ್ಧವಾದ ನೀರು ಬಳಕೆ ಮಾಡಬೇಕು” ಎಂದು ಓದಿದ್ದರು. ಇದಾದ ಬಳಿಕ ವಿನಯ್‌ ಹಾಗೂ ನಮ್ರತಾ ಜೋರಾಗಿ ನಕ್ಕಿದ್ದಾರೆ. ಕಾರ್ತಿಕ್‌ ಅವರು ಏನಾಯ್ತು?ಎಂದೂ ಕೇಳಿದ್ದಾರೆ. ಇದೀಗ ಕಾರ್ತಿಕ್‌ ಅವರಿಗೆ ಏನು ಆರೋಗ್ಯ ಸಮಸ್ಯೆಯಿದೆ ಎಂದು ಅವರೇ ಹೇಳಬೇಕಿದೆ.

ಕಿಚನ್‌ ರೂಮ್‌ನಲ್ಲಿ ಈ ಬಗ್ಗೆ ಕಾರ್ತಿಕ್‌ ಅವರು ವಿನಯ್‌ ಜತೆ ಪ್ರಸ್ತಾಪಿಸಿದರು. ಮಾತಿಗೆ ಮಾತು ಕೂಡ ಬೆಳೆಯಿತು. ʻಮನೆಗೆ ಯಾರಾದರೂ ಗೆಸ್ಟ್‌ ಬಂದಾಗ ನೀವು ಆ ರೀತಿ ಜೋಕ್‌ ಮಾಡಿದ್ರೆ, ಅದೇ ರೀತಿ ಟೆಲಿಕಾಸ್ಟ್‌ ಆಗುತ್ತೆ. ನೀವು ಜೋಕ್‌ ಮಾಡಿದ್ದು ಸರಿಯಿಲ್ಲ. ಅದು ಆರೋಗ್ಯದ ವಿಷಯ ಇಟ್ಟುಕೊಂಡು ಜೋಕ್ ಮಾಡಬೇಡಿʼʼಎಂದಿದ್ದಾರೆ.

ಇದನ್ನೂ ಓದಿ: BBK SEASON 10: ಕಾರ್ತಿಕ್‌ ʻಬಿಗ್‌ ಬಾಸ್‌ʼ ವಿನ್‌ ಆಗಲ್ಲ ಎಂದ ಸಂಗೀತಾ; ಟಾಪ್ 3ಯಲ್ಲಿ ಇರೋರು ಯಾರು?

ವಿನಯ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻನಾನು ಮಾತಾಡ್ತೀನಿ, ಏನು ಇವಾಗ? ಜೋಕ್ ಥರ ತಗೋ, ತಗೊಂಡಿಲ್ಲ ಅಂದ್ರೆ ಏನೂ ಮಾಡೋಕಾಗಲ್ಲ. ನೀನು ಹೇಳಿದ್ರೆ ನಾನು ಉಸಿರಾಡೋದು ನಿಲ್ಲಿಸಬೇಕಾ? ನಾನು ಮಾತಾಡ್ತೀನಿ”ಎಂದು ಕೂಗಿದ್ದಾರೆ. ನಮ್ರತಾ ಕೂಡ ಕಾರ್ತಿಕ್‌ ಬಳಿಕ ನಕ್ಕಿದ್ದಕ್ಕೆ ಸಾರಿ ಕೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version