Site icon Vistara News

BBK Season 10: ಪ್ರತಾಪ್‌ ಹೆಣ್ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾನೆ; ವಿನಯ್‌ ಗಂಭೀರ ಆರೋಪ

Vinay Gowda Drone drone prathap

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಡ್ರೋನ್‌ ಪ್ರತಾಪ್‌ ಅವರಿಗೆ ವಿನಯ್‌ ಏರು ಧ್ವನಿಯಲ್ಲಿ ಮಾತನಾಡಿರುವುದು ಇದೇನು ಮೊದಲೇನಲ್ಲ. ಇನ್ನು ವಿನಯ್‌ ಅವರು ಕೂಡ ಕಿಚ್ಚ ಅವರ ಮುಂದೆ ತನಗೆ ಡ್ರೋನ್‌ ಅವರು ಪ್ರಬಲ ಸ್ಪರ್ಧಿ ಎಂತಲೂ ಹೇಳಿದ್ದು ಇದೆ. ಒಂದಲ್ಲ ಒಂದು ಟಾಸ್ಕ್‌ ಆಗುವಾಗ ಡ್ರೋನ್‌ ಪ್ರತಾಪ್‌ಗೆ ಕಾಲೆಳೆಯುವ ವಿನಯ್‌ ಇದೀಗ ‘’ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ’’ ಎಂದು ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಡ್ರೋನ್‌ ಪ್ರತಾಪ್‌ ಅವರು ಮಹಿಳಾ ಸ್ಪರ್ಧಿಗಳಿಗೆ ʻದೀದಿʼ ಎಂತಲೇ ಮುಂಚಿನಿಂದಲೂ ಕರೆದುಕೊಂಡು ಬಂದಿದ್ದಾರೆ. ಇನ್ನು ನಾಮಿನೇಶನ್‌ ಟಾಸ್ಕ್‌ನಲ್ಲಿಯೂ ಪಾಸ್‌ ಸಿಕ್ಕಾಗ ಎಲ್ಲಾ ಮಹಿಳಾ ಮಣಿಯರಿಗೆ ಅವರು ನೀಡಿದರು. ಪುರುಷ ಸ್ಪರ್ಧಿಗಳನ್ನು ‘ಅಣ್ಣ’ ಎಂದೇ ಕರೆದಿದ್ದಾರೆ. ಹೀಗಿರುವಾಗ ವಿನಯ್‌ ಈ ರೀತಿ ಮಾತನಾಡಿರುವುದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

ತುಕಾಲಿ ಸಂತು, ಸ್ನೇಹಿತ್ ಗೌಡ, ಇಶಾನಿ ಹಾಗೂ ನಮ್ರತಾ ಜತೆಗೆ ವಿನಯ್ ಗೌಡ ಮಾತನಾಡುತ್ತಿದ್ದರು. ತುಕಾಲಿ ಸಂತು ಅವರು ʻʻಈಗ ಎಲ್ಲರೂ ಸೀರೆ ಹಾಕಿಕೊಂಡು ಓಡಾಡಿದರೆ, ಹೈಕ್ಳು ಯಾರನ್ನು ನೋಡ್ತಾರೆ?ʼʼ ಎಂದು ಮಾತು ಶುರು ಮಾಡಿದರು.

ವಿನಯ್ ಗೌಡ ಅಲ್ಲಿಂದ ಡ್ರೋನ್‌ ಬಗ್ಗೆ ಮಾತನಾಡಲು ಶುರು ಮಾಡಿದರು ʻʻಯಾರು ಏನಾದರೂ ಹಾಕಲಿ.. ಒಬ್ಬನದ್ದು ಮಾತ್ರ ಒಂದೇ ರಿಯಾಕ್ಷನ್‌, ಹೆಂಗ್‌ ನೋಡ್ತಾನೆ ಅಂದ್ರೆ.. ತುಂಬಾ ಕೆಟ್ಟದಾಗಿ ನೋಡ್ತಾನೆʼʼ ಎಂದು ಸನ್ನೆ ಮೂಲಕ ಹೇಳಿದರು.

ನಮ್ರತಾ ಗೌಡ ಈ ಬಗ್ಗೆ ಕೇಳುತ್ತಿದ್ದಂತೆ ಶಾಕ್‌ ಆದರು. ಅಷ್ಟೇ ಅಲ್ಲದೇ ಇಶಾನಿ ಕೂಡ ʻʻನಾನು ನೋಡಿದ್ದೀನಿʼʼ ಎಂತಲೇ ಹೇಳಿದರು. ವಿನಯ್ ಗೌಡ ಮಾತನಾಡಿ, ʻʻತುಂಬಾ ಕೆಟ್ಟದಾಗಿ ನೋಡ್ತಾನೆ ಅವನು. ಆ ರಿಯಾಕ್ಷನ್ ಇದ್ದದ್ದು ನೀವು ಡ್ಯಾನ್ಸ್ ಆಡುವಾಗ.. ಅದೊಂದು ಕೆಟ್ಟ ಲುಕ್ ಇದೆ. ಮೊನ್ನೆ ಇಲ್ಲೇ ಒಂದ್ ಸೀನ್ ಆಯ್ತು. ನನ್ನ ಮುಂದೆ ಯಾರೋ ಏನೋ ಸರಿ ಮಾಡಿಕೊಳ್ಳುತ್ತಿದ್ದರು. ನಾನು ನೋಡಿ ತಿರುಗಿದೆ. ಅವನು ಅಲ್ಲೇ ನೋಡ್ತಾ ಇದ್ದʼʼ ಎಂದು ಹೇಳಿದರು. ಬೆಂಕಿಗೆ ತುಪ್ಪ ಸುರಿದ ಹಾಗೇ ಸ್ನೇಹಿತ್ ಗೌಡ ಕೂಡ ʻಇದಕ್ಕೆ ದೀದಿ ಅಂತ ಕರೆಯಬೇಕಾ?ʼʼ ಎಂದು ಮಾತು ಸೇರಿಸಿದರು.

ಇದೀಗ ಈ ವಿಚಾರ ಮನೆಯಲ್ಲಿ ಚರ್ಚೆಯಾಗುತ್ತಿದ್ದಂತೆ ಪ್ರೇಕ್ಷಕರು ವಿನಯ್‌ ಅವರಿಗೆ ಜಾಡಿಸಿದ್ದಾರೆ. ಕ್ಯಾಮೆರಾ ಮುಂದೆ ಮಹಿಳಾ ಸ್ಪರ್ಧಿಗಳನ್ನು ಡ್ರೋನ್ ಪ್ರತಾಪ್ ಕೆಟ್ಟ ದೃಷ್ಟಿಯಲ್ಲಿ ನೋಡಲು ಸಾಧ್ಯವೇ ಇಲ್ಲ” ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಅಮ್ಮ, ಅಕ್ಕ ಅಂತೆಲ್ಲಾ ನಾನು ಮಾತಾಡಿಲ್ಲ ಎಂದ ಕಾರ್ತಿಕ್‌; ವಿನಯ್ ಗಂಭೀರ ಆರೋಪ

ಈ ವಾರ ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಲು ವಿನಯ್ ಗೌಡ, ಮೈಕಲ್ ಅಜಯ್, ಸಿರಿ, ತುಕಾಲಿ ಸಂತು, ರಕ್ಷಕ್, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ, ಕಾರ್ತಿಕ್ ಮಹೇಶ್ ಹಾಗೂ ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ನೀತು ನೇರವಾಗಿ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದರು. ವಿನಯ್‌ ಗೌಡ ಅವರನ್ನು ಹೊರಗೆ ಹಾಕಿ ಎಂಬ ಕೂಗು ಜೋರಾಗಿ ಕೇಳಿಬಂದಿದೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ..

Exit mobile version