ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK SEASON 10) ಸ್ನೇಹಿತ್ ಅವರು ವಿನಯ್ ಅವರಿಗೆ ಚಮಚ ಹಿಡಿಯುತ್ತಲೇ ಇದ್ದಾರೆ. ಅದೆಷ್ಟೋ ಬಾರಿ ಕಿಚ್ಚ ಅವರು ಸ್ನೇಹಿತ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರೂ ಕೂಡ ನಾಯಿ ಬಾಲ ಡೊಂಕು ಎಂಬಂತೆ ಸ್ನೇಹಿತ್ ತಮ್ಮ ಚಾಳಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ವಾರ ನಮ್ರತಾ ಅವರು ಗ್ಯಾಂಗ್‌ನಿಂದ ಹೊರಬಂದು ತಮ್ಮನ್ನು ತಾವು ಪ್ರೂವ್ ಮಾಡಿಕೊಂಡರು. ಆದರೆ ಸ್ನೇಹಿತ್ ಮಾತ್ರ ವಿನಯ್ ಅವರನ್ನು ಮೆರೆಸುತ್ತಿದ್ದಾರೆ. ‘ನಾನೇ ಬಿಗ್ ಬಾಸ್ ವಿನ್ ಆಗೋದು’ ಎಂದು ವಿನಯ್ ಹೇಳಿದಾಗ ಸ್ನೇಹಿತ್‌ಗೆ ಸಖತ್ ಖುಷಿ ಆಗಿದೆ. ಇದನ್ನು ಕಂಡ ಪ್ರೇಕ್ಷಕರು ಸ್ನೇಹಿತ್‌ಗೆ ಮತ್ಯಾಕೆ ಮನೆಯಲ್ಲಿ ಇದ್ದೀಯಾ? ಎಂದು ಕಮೆಂಟ್ ಮೂಲಕ ಪ್ರಶ್ನೆ ಇಟ್ಟಿದ್ದಾರೆ.
ಈ ವಾರ ನಮ್ರತಾ ಅವರು ತನಿಷಾ ಪರವಾಗಿ ಆಡಿ ಅತ್ಯುತ್ತಮ ಎನಿಸಿಕೊಂಡರು. ಇದೇ ಮೊದಲ ಬಾರಿ ವಿನಯ್ ಅವರನ್ನು ಹೊರಗಿಟ್ಟು, ಬೇರೆ ತಂಡದವರ ಜತೆ ಆಡಿ, ತಮ್ಮನ್ನು ತಾವು ಪ್ರೂವ್ ಮಾಡಿಕೊಂಡರು. ಅತ್ತ ಸ್ನೇಹಿತ್ ಮಾತ್ರ ವಿನಯ್ ಅವರಿಗೆ ಚಮಚ ಹಿಡಿಯುತ್ತಲೇ ಇದ್ದಾರೆ. ಸ್ನೇಹಿತ್, ವಿನಯ್, ನಮ್ರತಾ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಸ್ನೇಹಿತ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ‘ನಾವು ಮೂರು ಜನ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದ್ದೇವೆ’ ಎಂದರು ಸ್ನೇಹಿತ್. ‘ಟಾಪ್ ಮೂರರಲ್ಲಿ ಇದ್ದಿದ್ದು ನಾವೇ’ ಎಂದು ವಿನಯ್ ಖುಷಿಪಟ್ಟರು. ಅಲ್ಲದೆ ಈ ವಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂಬ ಖುಷಿ ಇದೆ ಎಂದರು. ಇದಕ್ಕೆ ನಮ್ರತಾ ಕೂಡ ಒಪ್ಪಿಗೆ ಸೂಚಿಸಿದರು.
‘ಫಿನಾಲೆಯಲ್ಲಿ ಟಾಪ್ 3ಗೆ ನಾವೇ ಹೋಗಬೇಕು’ ಎಂದು ಸ್ನೇಹಿತ್ ಹೇಳಿದರು. ‘ಯೆಸ್ ನಾವು ಮೂರು ಜನ ಹೋಗುತ್ತೇವೆ. ಆದರೆ, ಅಲ್ಲಿ ವಿನ್ ಆಗೋದು ನಾನೇ’ ಎಂದರು ವಿನಯ್. ‘ನೀವು ವಿನ್ ಆದ್ರೆ ನನಗಿಂತ ಹೆಚ್ಚು ಖುಷಿಪಡುವವರು ಮತ್ತೊಬ್ಬರು ಇರಲ್ಲ’ ಎಂದರು. ಬಳಿಕ ವಿನಯ್ ಮತಾಡಿ ʻಗೆದ್ದಾಗ ಒಂದು ಪವರ್ ಸಿಕ್ಕು, ಪವರ್‌ನಾ ಯೂ ಟರ್ನ್ ಆಗಿ ನಮ್ಮ ಮೇಲೆ ಬಳಕೆ ಮಾಡ್ತಾರೆʼʼಎಂದರು ವಿನಯ್.
ಇದನ್ನೂ ಓದಿ: BBK SEASON 10: ʻಉತ್ತಮʼರಾದ ನಮ್ರತಾ, ಜೈಲು ಪಾಲಾದ ಪ್ರತಾಪ್; ಕ್ಯಾಪ್ಟನ್ ಯಾರು?
ಸ್ನೇಹಿತ್ ಅವರು ವಿನಯ್ ವಿನ್ ಆದರೆ ಖುಷಿ ಪಡ್ತೇನೆ ಎಂದು ಹೇಳಿದ್ದಕ್ಕೆ ಪ್ರೇಕ್ಷಕರು ಕೂಡ ಮತ್ತೊಬ್ಬರಿಗೆ ಗೆಲುವನ್ನು ಬಿಟ್ಟುಕೊಡಲು ಸಿದ್ಧರಿರುವಾಗ ಆಟ ಆಡೋದು ಏಕೆ? ಎಂದು ಪ್ರಶ್ನೆ ಇಟ್ಟಿದ್ದಾರೆ.
ಕ್ಯಾಪ್ಟೆನ್ಸಿ ಟಾಸ್ಕ್ನ ಕೊನೆಯ ಟಾಸ್ಕ್ನಲ್ಲಿ ತನಿಷಾ ಪರವಾಗಿ ನಮ್ರತಾ ಆಡಿದರು. ಎದುರಾಳಿಯಾಗಿ ಇದ್ದಿದ್ದು ಸ್ನೇಹಿತ್. ಟಾಸ್ಕ್ನಲ್ಲಿ ಆರಂಭದಲ್ಲಿ ನಮ್ರತಾ ಮುಂದಿದ್ದರು, ಆದರೆ ಮೈಕಲ್ರ ಸಲಹೆಯಂತೆ ಆಟದಲ್ಲಿ ಬದಲಾವಣೆ ಮಾಡಿಕೊಂಡ ಸ್ನೇಹಿತ್ ಸುಲಭಕ್ಕೆ ಗೆದ್ದು ಮನೆಯ ಕ್ಯಾಪ್ಟನ್ ಆದರು. ಗೆಲುವನ್ನು ವಿನಯ್ಗೆ ಅರ್ಪಿಸಿದರು. ಹೀಗೆ ವಿನಯ್ ಜತೆ ಸ್ನೇಹಿತ್ ಬಾಂಡಿಂಗನ್ನು ಕೆಲವರು ಹೊಗಳಿದರೆ, ಇನ್ನೂ ಕೆಲವರು ಇದು ಅತಿ ಆಯ್ತು ಎಂದು ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ