Site icon Vistara News

BBK SEASON 10: ಸಂಗೀತಾಗೆ ನರಿ ಬುದ್ಧಿ ಜಾಸ್ತಿ, ಗಲೀಜಿನಲ್ಲಿ ಇರುವ ಜಿರಳೆ! ಹೀಗೆಲ್ಲ ಹೇಳಿದ್ದು ಯಾರು?

Vinay Gowda Snehith sangeetha

ಬೆಂಗಳೂರು; ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಸಂಗೀತಾ ಶೃಂಗೇರಿ ಅವರು ಒಂದಲ್ಲ ಒಂದು ಕಾರಣಕ್ಕೆ ಹೈಲೈಟ್‌ ಆಗುತ್ತಲೇ ಇರುತ್ತಾರೆ. ಸಂಗೀತಾ ಅವರನ್ನು ವಿನಯ್ ಗೌಡ ಮತ್ತು ಟೀಮ್ ಸದಾ ಟಾರ್ಗೆಟ್ ಮಾಡುತ್ತಲೇ ಇದೆ. ಈ ಬಾರಿ ಕೂಡ ಸಂಗೀತಾ ಅದೇ ಮಾತನ್ನು ಮನೆಯಲ್ಲಿ ಹೇಳಿದ್ದಾರೆ. ‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಎಪಿಸೋಡ್‌ನಲ್ಲಿ ಒಂದು ಸಣ್ಣ ಆಟ ಆಡಿಸಲಾಗಿದೆ. ಸ್ಪರ್ಧಿಗಳಿಗೆ ಒಂದಷ್ಟು ಪ್ರಾಣಿ-ಪಕ್ಷಿಗಳ ಫೋಟೋಗಳನ್ನು ನೀಡಲಾಗಿದೆ. ಇದರಲ್ಲಿ ಯಾವ ಫೋಟೊ, ಯಾರಿಗೆ ಸೂಕ್ತವಾಗಲಿದೆಯೋ, ಅವರಿಗೆ ನೀಡಿ ಎಂದು ಸುದೀಪ್ ಅವರು ಹೇಳಿದರು. ಈ ವೇಳೆ ಬಹುತೇಕರು ಸಂಗೀತಾ ಅವರನ್ನೇ ಟಾರ್ಗೆಟ್‌ ಮಾಡಿದ್ದಾರೆ.

ಸಂಗೀತಾ ಅವರಿಗೆ ವಿನಯ್‌ ಅವರು ರಣಹದ್ದು ಫೋಟೋ ನೀಡಿದರು. ಸುದೀಪ್‌ ಅವರು ರಣಹದ್ದು ಕುರಿತು ವಿಶ್ಲೇಷಣೆ ನೀಡಿದರು. ರಣಹದ್ದು ಎಂದರೆ, ದೂರದಿಂದಲೇ ಸಂಚು ಹಾಕುತ್ತದೆ. ಆಮೇಲೆ ಹೋಗಿ ಬೇಟೆಯಾಡುತ್ತದೆ’ ಎಂದರು, ಇದು ಸಂಗೀತಾಗೆ ಸೂಕ್ತ ಎಂದರು ವಿನಯ್‌. ‘ಆಟವೇ ಆಗಿರಲಿ ಅಥವಾ ಅದರಾಚೆಗೆ ಆಗಿರಲಿ, ಸರಿಯಾಗಿ ಸ್ಕೆಚ್ ಆಗಿ ಸಂಗೀತಾ ಬೇಟೆಯಾಡುತ್ತಾರೆ’ ಎಂದರು ವಿನಯ್‌.. ಕೊನೆಯಲ್ಲಿ ಈ ಮಾತನ್ನು ಸಂಗೀತಾ ಒಪ್ಪಲಿಲ್ಲ. ಇದೆಲ್ಲ ಲಕ್ಷಣಗಳು ವಿನಯ್‌ ಅವರಿಗೆ ಇದೆ. ಈ ರಣಹದ್ದು ಬೋರ್ಡ್‌ ಅವರಿಗೆ ನೀಡುತ್ತೇನೆ ಎಂದರು.

ಸಂಗೀತಾಗೆ ಜಿರಳೆ ಎಂದ ಸ್ನೇಹಿತ್‌​

ಜಿರಳೆ ಎಂದರೆ ಒಂದು ಗಲೀಜು ಇರೋ ಕಡೆ ಜಿರಳೆ ಇರುತ್ತದೆ ಅಥವಾ ಜಿರಳೆ ಇರುವ ಕಡೆ ಗಲೀಜು ಇರುತ್ತದೆ ಎಂದರು ಸುದೀಪ್‌. ಈ ರೀತಿಯ ಗುಣ ಸಂಗೀತಾ ಅವರಲ್ಲಿದೆ. ‘ಸಂಗೀತಾ ಅವರು ಎಲ್ಲಿ ನಕರಾತ್ಮಕತೆ ಇರುತ್ತದೆಯೋ, ಅಲ್ಲಿ ಇನ್ನೂ ಅದನ್ನು ಜಾಸ್ತಿ ಮಾಡುತ್ತಾರೆ. ನಾನು ನೆಗೆಟಿವ್ ಅನ್ನೋದನ್ನು ಹೆಮ್ಮೆಯಿಂದಲೂ ಹೇಳಿಕೊಳ್ಳುತ್ತಾರೆ ಎಂದರು ಸ್ನೇಹಿತ್‌. ಬಳಿಕ ಸಂಗೀತಾ ಅವರು ಈ ಮಾತನ್ನು ಒಪ್ಪದೆ ʻʻನನ್ನ ಬಗ್ಗೆ ಮಾತ್ರ ಅವರಿಗೆ ಗಲೀಜು ಕಾಣುತ್ತದೆ. ಗಲೀಜು ಇದ್ದವರಿಗೆ ಲೋಕವೇ ಗಲೀಜಾಗಿ ಕಾಣುತ್ತದೆʼʼಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: BBK SEASON 10: ಉಲ್ಟಾ ಹೊಡೀತು ವಿನಯ್‌ ಗ್ಯಾಂಗ್‌ ʻಮಾಸ್ಟರ್‌ ಪ್ಲ್ಯಾನ್‌ʼ; ಮನೆಯಿಂದ ಒಬ್ಬೊಬ್ಬರೇ ಔಟ್!

ಚೇಳು ಅತ್ಯಂತ ವಿಷಕಾರಿ. ಆದ್ದರಿಂದ ಅದನ್ನು ಕೂಡ ಸಂಗೀತಾ ಅವರಿಗೆ ವಿನಯ್‌ ನೀಡಿದರು. ಬಳಿಕ ಇದು ಸಹಿತ ನಾನಲ್ಲ ಇದು ವಿನಯ್‌ ಎಂದು ಹಲವು ಕಾರಣಗಳನ್ನು ಸಂಗೀತಾ ಕೊಟ್ಟರು. ತುಕಾಲಿ ಸಂತು ಅವರು ಕಪ್ಪೆಯನ್ನು ಸಿರಿಗೆ ನೀಡಿದರೆ ಪಾರಿವಾಳ ಎಂದು ನಮ್ರತಾ ಅವರು ತುಕಾಲಿಗೆ ಕೊಟ್ಟಿದ್ದಾರೆ. ಹಾಗೇ ತುಕಾಲಿ ಅಲ್ಲಿಂದ ಇಲ್ಲಿಗೆ ಸಂದೇಶ ರವಾನೆ ಮಾಡುವುದರಲ್ಲಿ ಎತ್ತಿದ ಕೈ ಎಂದು ನಮ್ರತಾ ಕಾರಣ ಕೊಟ್ಟರು.

ನರಿ ಎಂದು ಮೈಕಲ್‌ ಅವರು ಸಂಗೀತಾಗೆ ಬೋರ್ಡ್‌ ನೀಡಿದರು. ಸಂಗೀತಾ ಅವರಿಗೆ ಕನ್ನಿಂಗ್‌ ಬುದ್ಧಿ ಜಾಸ್ತಿ ಎಂದರು ಮೈಕಲ್‌. ಅದರೆ ಸಂಗೀತಾ ಅವರು ʻʻನನಗೆ ಬುದ್ಧಿ ಇಲ್ಲ. ಅವೆಲ್ಲ ಮೈಕಲ್‌ ಅವರಲ್ಲಿಯೇ ಇದೆ. ಮೈಕಲ್‌ ಅವರ ಮಾತು ತಪ್ಪಿದೆ. ಕೊಟ್ಟವರೇ ತುಂಬ ಕನ್ನಿಂಗ್‌ʼʼ ಎಂದರು. ಕುರಿಯನ್ನು ಅವಿನಾಶ್‌ ಅವರು ವರ್ತೂರ್‌ ಅವರಿಗೆ ಕೊಟ್ಟಿದ್ದಾರೆ. ಸಂಗೀತಾ ಅವರು ಎಮ್ಮೆಯನ್ನು ಸ್ನೇಹಿತ್‌ ಅವರಿಗೆ ಕೊಟ್ಟಿದ್ದಾರೆ. ತನಿಷಾ ಗಿಳಿಯನ್ನು ತುಕಾಲಿಗೆ ನೀಡಿದರು.. ಪ್ರತಾಪ್‌ ಅವರು ತಿಗಣೆಯನ್ನು ಸಂತು ಅವರಿಗೆ ನೀಡಿದರು. ವರ್ತೂರ್‌ ಅವರು ಬೆಕ್ಕನ್ನು ವಿನಯ್‌ ಅವರಿಗೆ ನೀಡಿದ್ದಾರೆ. ಬೆಕ್ಕಿನಲ್ಲಿ ಸ್ವಾರ್ಥಿ ಗುಣಗಳು ಇರುತ್ತದೆ. ತನ್ನನ್ನು ನೋಡಿಕೊಂಡು ಬಳಿಕ ಬೇರೆಯದನ್ನು ನೋಡುತ್ತದೆ ಎಂದು ವಿನಯ್‌ ಅವರಿಗೆ ಬೋರ್ಡ್‌ ನೀಡಿದರು.

ಇದನ್ನೂ ಓದಿ: BBK SEASON 10: ಸ್ಕೂಲಲ್ಲಿ ನನ್ನನ್ನು ಕಾರ್ನರ್ ಮಾಡಿದ್ದ ಹಾಗೆ ಇಲ್ಲಿಯೂ ಮಾಡ್ತಿದ್ದಾರೆ; ಸಂಗೀತಾ ಕಣ್ಣೀರು!

ಇದೆಲ್ಲ ಆದ ಬಳಿಕ ಸಂಗೀತಾ ಮಾತನಾಡಿ ʻʻವಿನಯ್‌ ಅವರ ಟೀಮ್‌ ನನ್ನನ್ನು ಟಾರ್ಗೆಟ್‌ ಮಾಡುತ್ತಿರುವುದು ಹೊಸತೇನಲ್ಲ. ಪವಿ ಕೂಡ ವಿನಯ್‌ ಟೀಂ ಸೇರಿದ್ದಾರೆ. ಯಾವಾಗಲೂ ಅವರೆಲ್ಲ ಸೇರಿಯೇ ಚರ್ಚೆ ಮಾಡಿ ಟಾರ್ಗೆಟ್‌ ಮಾಡುತ್ತಾರೆʼʼ ಎಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version